ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯಿಂದ ದೇಶಪ್ರೇಮ ಯಾರೂ ಕಲಿಯಬೇಕಿಲ್ಲ -ಧರ್ಮಸಿಂಗ್‌

By Staff
|
Google Oneindia Kannada News

ಬಿಜೆಪಿಯಿಂದ ದೇಶಪ್ರೇಮ ಯಾರೂ ಕಲಿಯಬೇಕಿಲ್ಲ -ಧರ್ಮಸಿಂಗ್‌
ಉಮಾಭಾರತಿ ವಿರುದ್ದದ ಕ್ರಿಮಿನಲ್‌ ಪ್ರಕರಣವನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ..

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌, ಈದ್ಗಾ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಬಿಜೆಪಿ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.

ಧ್ವಜಾರೋಹಣಕ್ಕೆ ಸಂಬಂಧಿಸಿದ ಕ್ರಿಮಿನಲ್‌ ಮೊಕದ್ದಮೆಯ ಹಿನ್ನೆಲೆಯಲ್ಲಿ , ಉಮಾಭಾರತಿಯನ್ನು ಬಂಧಿಸಲು ಸರಕಾರ ಮುಂದಾಯಿತೇ ಹೊರತು ರಾಜಕೀಯ ದ್ವೇಷಕ್ಕಾಗಿ ಅಲ್ಲ . ಬಿಜೆಪಿ ಈ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಂಡಿದೆ ಎಂದು ಧರ್ಮಸಿಂಗ್‌ ಆರೋಪಿಸಿದ್ದಾರೆ.

ಬಿಜೆಪಿ ಅಧ್ಯಕ್ಷ ವೆಂಕಯ್ಯ ನಾಯ್ಢ ಮತ್ತಿತರರು ರಾಷ್ಟ್ರಪ್ರೇಮದ ಹೆಸರಲ್ಲಿ ಜನರನ್ನು ದಾರಿತಪ್ಪಿಸಿ ಪ್ರಚೋದಿಸುತ್ತಿದ್ದಾರೆ.

1994 ರಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಧ್ವಜಾರೋಹಣದ ಹೆಸರಲ್ಲಿ ಶಾಂತಿ ಕದಡಿದರೆಂದು 21 ಜನರ ಮೇಲೆ ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು. ಹಿಂದೆ ಕಾಂಗ್ರೆಸ್‌ ಸರಕಾರ ಮೊಕದ್ದಮೆಗಳ ಹಿಂದೆ ಪಡೆಯಲು ಒಪ್ಪಿತ್ತು. ಆದರೆ ಒಂಬತ್ತು ಪ್ರಕರಣಗಳಲ್ಲಿ ನ್ಯಾಯಾಲಯ, ಎರಡು ಪ್ರಕರಣಗಳ ವಾಪಸಾತಿಗೆ ಆಕ್ಷೇಪ ವ್ಯಕ್ತಪಡಿಸಿತು.

ದೇಶಭಕ್ತರ ಕುಟುಂಬದಿಂದ ಬಂದ ನಾನು ಬಿಜೆಪಿಯಿಂದ ದೇಶಪ್ರೇಮದ ಪಾಠ ಕೇಳಬೇಕಾಗಿಲ್ಲ . ರಾಷ್ಟ್ರ ಪ್ರೇಮ, ರಾಷ್ಟ್ರ ಭಕ್ತಿ, ರಾಷ್ಟ್ರ ಧ್ವಜ, ಆಡಳಿತ ವಿಧಾನಗಳ ಬಗೆಗೆ ವೆಂಕಯ್ಯನಾಯ್ಡು, ಉಮಾ ಭಾರತಿ ಸೇರಿದಂತೆ ಬಿಜೆಪಿ ನಾಯಕರಿಂದ ಪಾಠ ಕಲಿಯುವ ಅವಶ್ಯಕತೆ ಯಾರಿಗೂ ಇಲ್ಲ ಎಂದು ಮುಖ್ಯಮಂತ್ರಿ ಧರ್ಮಸಿಂಗ್‌ ಪ್ರತ್ಯುತ್ತರ ನೀಡಿದ್ದಾರೆ.

(ಪಿಟಿಐ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X