ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡನೇ ಸಾಲಿನ ನಗರಗಳಿಗೆ ಸಿಲಿಕಾನ್‌ ರಂಗು ! ಸರ್ಕಾರದ ಪ್ರಯತ್ನ

By Staff
|
Google Oneindia Kannada News

ಎರಡನೇ ಸಾಲಿನ ನಗರಗಳಿಗೆ ಸಿಲಿಕಾನ್‌ ರಂಗು ! ಸರ್ಕಾರದ ಪ್ರಯತ್ನ
ಬೆಂಗಳೂರು ಮಾತ್ರವಲ್ಲ - ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಮಂಗಳೂರಿಗೆ ಐಟಿ ಧಾರಣ ಸಾಮರ್ಥ್ಯ

ಬೆಂಗಳೂರು : ಉದ್ಯಾನ ನಗರಿ, ಸಿಲಿಕಾನ್‌ ಸಿಟಿ, ಮಾಯಾನಗರಿ, ಐಟಿ ನಗರಿ ಹೀಗೆ ಹಲವಾರು ಹೆಸರುಗಳ ಅಗ್ಗಳಿಕೆ ಬೆಂಗಳೂರಿನದು. ಮೇಲು ಸೇತುವೆಗಳಿದ್ದೂ ಕಿಷ್ಕಿಂಧೆಯಾಗಿರುವ ಸಂಚಾರ, ಹದಗೆಟ್ಟ ಪುಟ್‌ಪಾತ್‌, ಕಟ್ಟಿದ ಮೋರಿ, ಮಲಿನವಾಗುತ್ತಿರುವ ಗಾಳಿ- ಇವೆಲ್ಲ ಬೆಂಗಳೂರಿನ ಕುಖ್ಯಾತಿ. ಖ್ಯಾತಿ ಕುಖ್ಯಾತಿಯ ಬೆಂಗಳೂರಿನ ಕಥೆ ಪಕ್ಕಕ್ಕಿರಲಿ, ರಾಜ್ಯದ ಎರಡನೇ ಸಾಲಿನ ನಗರಗಳು ಹೇಗಿವೆ ?

ಆ್ಞಂ, ಸರ್ಕಾರದ ಕಣ್ಣು ಇದೀಗ ಎರಡನೇ ಸಾಲಿನ ನಗರಗಳತ್ತ ಬಿದ್ದಿದೆ. ರಾಜ್ಯಕ್ಕೆ ಇನ್ನಷ್ಟು ಬೆಂಗಳೂರುಗಳು (ಸಿಲಿಕಾನ್‌ ವ್ಯಾಲಿ ಎನ್ನುವ ಅರ್ಥದಲ್ಲಿ ಮಾತ್ರ) ಬೇಕು ಎನ್ನುವುದು ಸರ್ಕಾರದ ಚಿಂತನೆ. ಹಾಗಾಗಿ, ಎರಡನೇ ಸಾಲಿನ ನಗರಗಳಾದ ಮಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡಗಳತ್ತ ಸರ್ಕಾರ ಗಮನ ಹರಿಸಿದೆ.

ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಮತ್ತು ಮೈಸೂರುಗಳನ್ನು ರಾಜ್ಯದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಷೋಕೇಸ್‌ಗಳನ್ನಾಗಿ ಬಿಂಬಿಸುವುದು ಸರ್ಕಾರದ ಉದ್ದೇಶ. ಐಟಿ ಹಾಗೂ ಬಿಟಿ ಕಾರ್ಯದರ್ಶಿ ಎಂ.ಕೆ.ಶಂಕರಲಿಂಗೆಗೌಡ ಬುಧವಾರ ಈ ವಿಷಯ ತಿಳಿಸಿದರು. ಪ್ರಸಕ್ತ ವಿತ್ತ ವರ್ಷದಲ್ಲಿ 40 ಸಾವಿರ ತಂತ್ರಜ್ಞರಿಗೆ ಉದ್ಯೋಗಾವಕಾಶ ಕಲ್ಪಿಸುವ ಹಾಗೂ ಮುಂದಿನ ಸಾಲಿನಲ್ಲಿ ಈ ಸಂಖ್ಯೆಯನ್ನು 1ಲಕ್ಷಕ್ಕೇರಿಸುವ ಗುರಿ ನಮ್ಮದು ಎಂದು ಗೌಡ ಹೇಳಿದರು.

ಬೆಂಗಳೂರು ಮಾತ್ರವಲ್ಲದೆ ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಮಂಗಳೂರು ಕೂಡ ಮಾಹಿತಿ ತಂತ್ರಜ್ಞಾನದ ಬೆಳವಣಿಗೆಗೆ ಸೂಕ್ತ ನಗರಿಗಳಾಗಿವೆ ಎಂದು ಶಂಕರಲಿಂಗೆಗೌಡ ಅಭಿಪ್ರಾಯಪಟ್ಟರು.

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X