ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿ: ಉಮಾಭಾರತಿ ಹಾದಿಯುದ್ದಕ್ಕೂ ಪೊಲೀಸರ ಸರ್ಪಗಾವಲು

By Staff
|
Google Oneindia Kannada News

ಹುಬ್ಬಳ್ಳಿ: ಉಮಾಭಾರತಿ ಹಾದಿಯುದ್ದಕ್ಕೂ ಪೊಲೀಸರ ಸರ್ಪಗಾವಲು
ಯಾವುದೇ ಪರಿಸ್ಥಿತಿ ಎದುರಿಸಲು ರಾಜ್ಯ ಪೊಲೀಸ್‌ ಸಜ್ಜು

ಬೆಂಗಳೂರು : ಹುಬ್ಬಳ್ಳಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್‌ ಹೊರಡಿಸಿರುವ ಹಿನ್ನಲೆಯಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ನ್ಯಾಯಾಲಯಕ್ಕೆ ಶರಣಾಗಲು ಬುಧವಾರ ಬೆಳಗ್ಗೆ ಹುಬ್ಬಳ್ಳಿಗೆ ಬರಲಿದ್ದು , ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಸರ್ವ ಪ್ರಯತ್ನ ನಡೆಸಿದ್ದಾರೆ.

ಆ.25ರ ಬುಧವಾರ ಬೆಳಗ್ಗೆ ಉಮಾಭಾರತಿ ನ್ಯಾಯಾಲಯಕ್ಕೆ ಶರಣಾಗುವ ನಿರೀಕ್ಷೆಯಿದೆ. ಹಜರತ್‌-ನಿಜಾಮುದ್ದೀನ್‌-ಗೋವಾ ಎಕ್ಸಪ್ರೆಸ್‌ ರೈಲಿನಲ್ಲಿ ಉಮಾ ಭಾರತಿ ಪ್ರಯಾಣಿಸುತ್ತಿದ್ದು , ಈ ರೈಲು ಹಾದಿಯುದ್ದಕ್ಕೂ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ.

ರಾಯಬಾಗ್‌, ಲೋಂಡಾ ಮತ್ತು ಧಾರವಾಡ ಮುಖಾಂತರ ರೈಲು ಹುಬ್ಬಳ್ಳಿ ತಲುಪಲಿದೆ. ದಾರಿಯುದ್ದಕ್ಕೂ ಉಮಾಭಾರತಿ ಅವರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರತಿ ನಿಲ್ದಾಣದಲ್ಲೂ ಪೊಲೀಸರ ಪಹರೆ ಹಾಕಿಕಲಾಗಿದೆ.

ಎಡಿಜಿಪಿ ಸುಭಾಷ ಭರಣಿ ಹುಬ್ಬಳ್ಳಿಗೆ ತೆರಳಿದ್ದು ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸುತ್ತಿದ್ದಾರೆ. ಹುಬ್ಬಳ್ಳಿ ನಗರವೊಂದರಲ್ಲೇ 4 ಸಾವಿರಕ್ಕೂ ಹೆಚ್ಚು ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಪಾಲನೆಯಲ್ಲಿ ತೊಡಗಿದ್ದಾರೆ.

(ಪಿಟಿಐ)

ವಾರ್ತಾ ಸಂಚಯ
ಉಮಾಭಾರತಿ ಬಂಧಿಸಿದರೆ ಹುಷಾರ್‌ : ರಾಜ್ಯ ಬಿಜೆಪಿ ಗುರ್ರ್‌ ಗುರ್ರ್‌
ರಾಜ್ಯಕ್ಕೆ ಕಾಲಿಟ್ಟ ತಕ್ಷಣ ಉಮಾ ಭಾರತಿ ಬಂಧನ -ಡಿಜಿಪಿ ಬೋರ್ಕರ್‌
ಭೋಪಾಲ್‌ನತ್ತ ರಾಜ್ಯದ ಪೊಲೀಸ್‌ : ಉಮಾ ರಾಜೀನಾಮೆ ಸ್ವೀಕೃತ

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X