ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇ.16 ಹೆಚ್ಚು ವೇತನಕ್ಕೆ ಪಟ್ಟು , ದೇಶಾದ್ಯಂತ ಬ್ಯಾಂಕ್‌ನೌಕರರ ಸಂಪು

By Staff
|
Google Oneindia Kannada News

ಶೇ.16 ಹೆಚ್ಚು ವೇತನಕ್ಕೆ ಪಟ್ಟು , ದೇಶಾದ್ಯಂತ ಬ್ಯಾಂಕ್‌ನೌಕರರ ಸಂಪು
ತೆರೆಯದ ಬ್ಯಾಂಕ್‌ ಬಾಗಿಲು, ಕಂಗೆಟ್ಟ ಗ್ರಾಹಕರ ಸಾಲು

ಬೆಂಗಳೂರು : ಸಂಬಳ ಭತ್ಯೆ ಪರಿಷ್ಕರಣೆಗೆ ಒತ್ತಾಯಿಸಿ ಸಾರ್ವಜನಿಕ ಬ್ಯಾಂಕ್‌ಗಳ ಸುಮಾರು 10 ಲಕ್ಷ ನೌಕರರು 1 ದಿನದ ಮುಷ್ಕರವನ್ನು ಮಂಗಳವಾರ ನಡೆಸಿದ್ದು , ಬೆಂಗಳೂರು ಸೇರಿದಂತೆ ದೇಶಾದ್ಯಂತ ಬ್ಯಾಂಕ್‌ ಸೇವೆಗಳು ಅಸ್ತವ್ಯಸ್ತಗೊಂಡಿವೆ.

ಈ ನಡುವೆ ಭಾರತೀಯ ಬ್ಯಾಂಕ್‌ ಒಕ್ಕೂಟದ ಪ್ರತಿನಿಧಿಗಳು ಬ್ಯಾಂಕ್‌ ನೌಕರರ ವೇತನವನ್ನು ಶೇ. 9.5 ರಷ್ಟು ಹೆಚ್ಚಿಸಲು ಒಪ್ಪಿಕೊಂಡಿದ್ದಾರೆ. ಆದರೆ ನೌಕರರ ಯೂನಿಯನ್‌ ವಕ್ತಾರರು ಶೇ.16 ರಷ್ಟು ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದಾರೆ.

ಬ್ಯಾಂಕ್‌ಗಳ ಮುಷ್ಕರದಿಂದ ಗ್ರಾಹಕರು ಪರದಾಡುವ ಪರಿಸ್ಥಿತಿ ಒದಗಿ ಬಂದಿದೆ. ಆದರೆ ಎಟಿಎಮ್‌ ಸೇವೆ ಎಂದಿನಂತಿದೆ.

ಬ್ಯಾಂಕ್‌ ಅಧಿಕಾರಿಗಳ ನಾಲ್ಕು ಸಂಘಟನೆ ಹಾಗೂ ನೌಕರರ ಐದು ಸಂಘಟನೆಗಳ ಒಕ್ಕೂಟವಾದ ಬ್ಯಾಂಕ್‌ ಯೂನಿಯನ್‌ಗಳ ಸಂಯುಕ್ತ ಒಕ್ಕೂಟ- ತಮ್ಮ ಬೇಡಿಕೆಗಳು ತಕ್ಷಣ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಎಚ್ಚರಿಸಿದೆ. ಆಗಸ್ಟ್‌ 25ರಂದು ಮುಂಬಯಿಯಲ್ಲಿ ನಡೆಯುವ ಸಭೆಯಲ್ಲಿ ಪ್ರತಿಭಟನೆಯ ಮುಂದಿನ ಹೆಜ್ಜೆ ನಿರ್ಧರಿಸುವುದಾಗಿಯೂ ಒಕ್ಕೂಟ ತಿಳಿಸಿದೆ.

ಬ್ಯಾಂಕ್‌ ನೌಕರರ ಮಂಗಳವಾರದ ಮುಷ್ಕರದಲ್ಲಿ ಎಐಬಿಇಎ, ಎಐಬಿಓಸಿ, ಎನ್‌ಸಿಬಿಇ, ಎಐಬಿಓಎ, ಬಿಇಎಫ್‌ಐ, ಐಎನ್‌ಬಿಓಎಸ್‌, ಎನ್‌ಬಿಡಬ್ಲ್ಯೂ ಹಾಗೂ ಎನ್‌ಓಬಿಓ ಪಾಲ್ಗೊಂಡಿದ್ದು , ಕಾಂಗ್ರೆಸ್‌ ಮತ್ತು ಸಂಘಪರಿವಾರ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X