‘ವಿಶ್ವ ಕರ್ನಾಟಕ’ ಸಿದ್ಧವನಹಳ್ಳಿ ಕೃಷ್ಣಶರ್ಮರ ನೆನೆದ ದೆಹಲಿ ಕನ್ನಡಿಗರು

‘ವಿಶ್ವ ಕರ್ನಾಟಕ’ ಸಿದ್ಧವನಹಳ್ಳಿ ಕೃಷ್ಣಶರ್ಮರ ನೆನೆದ ದೆಹಲಿ ಕನ್ನಡಿಗರು
ದೆಹಲಿಯಲ್ಲಿ ಕೃಷ್ಣಶರ್ಮರ ಶತಮಾನೋತ್ಸನ ಆಚರಣೆ-ಸ್ಮರಣೆ

ನವದೆಹಲಿ : ವಿಶ್ವ ಕರ್ನಾಟಕ ಪತ್ರಿಕೆಯನ್ನು ಬೆಳೆಸಿದ ಸಿದ್ಧವನಹಳ್ಳಿ ಕೃಷ್ಣ ಶರ್ಮರ ಬಿರುಸಿನ ಬರಹಗಳು ಕನ್ನಡಿಗರಿಗೆ ಸ್ಫೂರ್ತಿ ನೀಡಿ ರಾಷ್ಟ್ರಸೇವೆಗೆ ಸಜ್ಜುಗೊಳಿಸಿವೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸ್ವಾತಂತ್ರ್ಯ ಹೋರಾಟಕ್ಕಿಳಿದಿದ್ದ ಶರ್ಮರು ಗಾಂಧಿ-ಸರ್ವೋದಯ ಸಾಹಿತ್ಯವನ್ನು ಕನ್ನಡದಲ್ಲಿ ಮನೆಮನೆಗೆ ತಲುಪಿಸಿದ್ದಾರೆ ಎಂದು ದೆಹಲಿ ಕನ್ನಡಿಗ ಪತ್ರಿಕೆಯ ಸಂಪಾದಕ ಬಾ. ಸಾಮಗ ಹೇಳಿದರು.

ನವದೆಹಲಿಯಲ್ಲಿ ದೆಹಲಿ ಕನ್ನಡಿಗರು ಆಗಸ್ಟ್‌ 8 ರಂದು ಆಯೋಜಿಸಿದ್ದ ಖ್ಯಾತ ಸಾಹಿತಿ, ಪತ್ರಕರ್ತ, ಸ್ವಾತಂ ತ್ರ್ಯ ಹೋರಾಟಗಾರ ದಿ. ಸಿದ್ದವನಹಳ್ಳಿ ಕೃಷ್ಣ ಶರ್ಮರ ಜನ್ಮ ಶತಮಾನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ನೂರಿಪ್ಪತ್ತಕ್ಕೂ ಅಧಿಕ ಕೃತಿಗಳನ್ನು ರಚಿಸಿದ ಶರ್ಮ ಅನುವಾದ ಸಾಹಿತ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.

ಲೇಖಕಿ ಡಾ. ಶಕುಂತಲಾ ದವೆಸರ್‌ ಮಾತನಾಡಿ, ಶರ್ಮರ ಪರ್ಣಕುಟಿ ಕನ್ನಡದ ಉತ್ತಮ ಗದ್ಯ ಕೃ ತಿಯಾಗಿದೆ. ಅದರಲ್ಲಿ ಕನ್ನಡ ಕಾವ್ಯದ ಸ್ವರ ಮಿಡಿಯುತ್ತಿದೆ. ವ್ಯಕ್ತಿಚಿತ್ರ ಹಾಗೂ ಅಂಕಣ ಬರಹದಲ್ಲಿ ಶರ್ಮ ಕನ್ನಡಕ್ಕೆ ಹೊಸ ಶೈಲಿ ತಂದಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜವಹರಲಾಲ್‌ ನೆಹರು ವಿಶ್ವವಿದ್ಯಾಲಯದ ಸಂಶೋಧಕಿ ಡಾ. ಸುಧಾ ರಾಘವನ್‌ ಮಾತನಾಡಿ, ಶರ್ಮ ತಮ್ಮ ರಾಜಕೀಯ ಚಟುವಟಿಕೆಗಳೊಂದಿಗೆ ಹೈದರಾಬಾದಿನ ಕರ್ನಾಟಕ ಸಾಹಿತ್ಯ ಮಂದಿರ, ನೃಪತುಂಗ ಕನ್ನಡ ಶಾಲೆಯ ಬೆಳವಣೆಗೆಗೂ ಕಾರಣರಾಗಿದ್ದಾರೆ. ಅಲ್ಲದೇ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು , ಗಾಂಧಿ ಸಾಹಿತ್ಯ ಸಂಘ ಮತ್ತಿತರ ಸಂಘಟನೆಗಳಿಗೆ ಜೀವತುಂಬಿದ್ದಾರೆ ಎಂದು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಶರ್ಮರ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+