ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಡಕಲ್‌ ಅಣೆಕಟ್ಟೆಗೆ 5 ವರ್ಷದ ಗುಳೆ ನಂತರ ಮರಳಿದ ‘ನೀರಹಾಡು’

By Staff
|
Google Oneindia Kannada News

ಹಿಡಕಲ್‌ ಅಣೆಕಟ್ಟೆಗೆ 5 ವರ್ಷದ ಗುಳೆ ನಂತರ ಮರಳಿದ ‘ನೀರಹಾಡು’
ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಗ್ಗುಪ್ರದೇಶದ ಜನರಿಗೆ ಸೂಚನೆ

ಹುಕ್ಕೇರಿ : ಇದು ಗಂಗಾವತರಣದ ಮತ್ತೊಂದು ಸುದ್ದಿ . ಐದು ವರ್ಷಗಳಿಂದ ಗುಳೆ ಹೊಂಟಿದ್ದ ನೀರಹಾಡು ಹಿಡಕಲ್‌ ಜಲಾಶಯಕ್ಕೆ ವಾಪಸ್ಸಾದ ಸುದ್ದಿ .

ಬರಿದಾಗಿದ್ದ ಹಿಡಕಲ್‌ ಜಲಾಶಯ ಮುಂಗಾರು ವೈಭವದಿಂದಾಗಿ ನಳನಳಿಸುತ್ತಿದೆ. ತುಂಬಿತುಳುಕಿದ ಜಲಾಶಯದ ಎಂಟೂ ಕ್ರೆಸ್ಟ್‌ಗೇಟ್‌ಗಳನ್ನು ತೆರೆದು ನೀರು ಬಿಡಲಾಗಿದೆ. ಸುತ್ತಮುತ್ತಲ ಪ್ರದೇಶಕ್ಕೆಲ್ಲ ಸಂಭ್ರಮವೋ ಸಂಭ್ರಮ. ರೈತರ ಆನಂದವಂತೂ ಹೇಳತೀರದು.

ಮಹಾರಾಷ್ಟ್ರಕ್ಕೆ ಹೊಂದಿಕೊಂಡಂತಿರುವ ಹಿಡಕಲ್‌ ಜಲಾಶಯದ ಜಲಾನಯನ ಪ್ರದೇಶದಲ್ಲಿ ಈ ಸಲ ಉತ್ತಮ ಮಳೆ ಬಿದ್ದಿರುವುದರಿಂದ ಜಲಾಶಯದ ಒಳಹರಿವು ಹೆಚ್ಚಿದೆ. ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ನೀರನ್ನು ಘಟಪ್ರಭಾ ನದಿಗೆ ಬಿಡುಗಡೆ ಮಾಡಲಾಗಿದ್ದು , ತಗ್ಗು ಪ್ರದೇಶದ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.

ಆ.19ರಂದು ಜಲಾಶಯಕ್ಕೆ ಒಳಹರಿವಿನ ಪ್ರಮಾಣ 7571 ಕ್ಯೂಸೆಕ್ಸ್‌ ಆಗಿತ್ತು . ಜಲಾಶಯದ ನೀರನ್ನು ಎಡ ಹಾಗೂ ಬಲದಂಡೆ ಕಾಲುವೆಗಳಿಗೆ ಬಿಡುಗಡೆ ಮಾಡಲಾಗಿದೆ. ಬೆಳಗಾವಿ ನಗರ ಹಾಗೂ ಇತರ 17 ಹಳ್ಳಿಗಳು, ಹುಕ್ಕೇರಿ-ಸಂಕೇಶ್ವರ ಹಾಗೂ ಅವಕ್ಕೆ ಹೊಂದಿಕೊಂಡ 26 ಹಳ್ಳಿಗಳಿಗೆ ಕುಡಿಯುವ ನೀರನ್ನೂ ಬಿಡುಗಡೆ ಮಾಡಲಾಗಿದೆ.

ಅಂದಹಾಗೆ, ಜಲಾಶಯದ ನೀರಿನ ಗರಿಷ್ಠ ಸಂಗ್ರಹ ಸಾಮರ್ಥ್ಯ 2175 ಅಡಿಗಳು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X