ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಮತಿಯಲ್ಲಿ ಡೆಂಗ್ಯುಜ್ವರ ; ಆರೋಗ್ಯ ಇಲಾಖೆಯಲ್ಲಿ ಮಾಹಿತಿ ಬರ

By Staff
|
Google Oneindia Kannada News

ನ್ಯಾಮತಿಯಲ್ಲಿ ಡೆಂಗ್ಯುಜ್ವರ ; ಆರೋಗ್ಯ ಇಲಾಖೆಯಲ್ಲಿ ಮಾಹಿತಿ ಬರ
ನಾಲ್ವರು ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್‌ಗೆ ರವಾನೆ

ನ್ಯಾಮತಿ : ಪಟ್ಟಣ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಮಾರಣಾಂತಿಕ ಡೆಂಗ್ಯು ಜ್ವರ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದ್ದು ನಾಗರಿಕರು ಆತಂಕ ಗೊಂಡಿದ್ದಾರೆ.

ನ್ಯಾಮತಿಯ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಗಾದ ನಾಲ್ವರು ಡೆಂಗ್ಯು ಸೋಂಕು ಹೊಂದಿದ್ದಾರೆಂದು ವೈದ್ಯರು ಅಂದಾಜು ಮಾಡಿದ್ದು , ಈ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್‌ಗೆ ಕಳುಹಿಸಲಾಗಿದೆ. ಈ ಪ್ರದೇಶದಲ್ಲಿ ತಪಾಸಣೆಗೆ ಒಳಪಡದ ಡೆಂಗ್ಯು ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿರಬಹುದೆಂದು ಡಾ. ಎಚ್‌.ಎಂ.ನಾಗರಾಜ್‌ ಅನುಮಾನ ವ್ಯಕ್ತಪಡಿಸಿದ್ದಾರೆ.

ನ್ಯಾಮತಿ ಪ್ರದೇಶದಲ್ಲಿ ಡೆಂಗ್ಯು ಪೀಡಿತರ ನಿಖರ ಸಂಖ್ಯೆಯ ಬಗ್ಗೆ ತಾಲ್ಲೂಕು ಆರೋಗ್ಯ ಇಲಾಖೆಯಲ್ಲಿ ಯಾವುದೇ ಮಾಹಿತಿಯಿಲ್ಲ . ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೆಂಚಪ್ಪ ಡೆಂಗ್ಯು ಪ್ರಕರಣಗಳು ವ್ಯಾಪಕವಾಗಿವೆ ಎನ್ನುವುದನ್ನು ನಿರಾಕರಿಸಿದ್ದಾರೆ. ಕೇವಲ ಇಬ್ಬರಿಗೆ ಡೆಂಗ್ಯು ಇರಬಹುದೆಂದು ಶಂಕಿಸಲಾಗಿದೆ. ಶಂಕಿತ ರೋಗಿಗಳ ಸೀರಂನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಡಾ.ಕೆಂಚಪ್ಪ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X