ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಟಿ ಸಂಕಟ : ಪ್ರತಿಭಟನೆಗೆ ಸಾಗರವಾಗಿ ಬಂದ ವಿದ್ಯಾರ್ಥಿನಿಯರು

By Staff
|
Google Oneindia Kannada News

ಸಿಇಟಿ ಸಂಕಟ : ಪ್ರತಿಭಟನೆಗೆ ಸಾಗರವಾಗಿ ಬಂದ ವಿದ್ಯಾರ್ಥಿನಿಯರು
ಕಾಮೆಡ್‌-ಕೆ ಭೂತ ದಹನ, ಬಡ ವಿದ್ಯಾರ್ಥಿಗಳ ಹಿತ ರಕ್ಷಣೆಗೆ ಮೊರೆ

ಬೆಂಗಳೂರು : ಸಿಇಟಿ ಬಿಕ್ಕಟ್ಟಿಗೆ ಸಂಬಂಧಿಸಿದ್ದಂತೆ ಸರ್ಕಾರವು ಸರಿಯಾದ ನೀತಿಯನ್ನು ಅನುಸರಿಸುವಲ್ಲಿ ವಿಫಲವಾಗಿದೆ ಮತ್ತು ವಿದ್ಯಾರ್ಥಿಗಳ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿನಿಯರು ಪುರಭವನದ ಎದುರು ಪ್ರತಿಭಟನಾ ಸಭೆ-ಮೆರವಣಿಗೆ ನಡೆಸಿದರು.

ಭಾರತ ವಿದ್ಯಾರ್ಥಿ ಫೇಡರೇಷನ್‌ ನೇತೃತ್ವದಲ್ಲಿ ಬೆಂಗಳೂರಿನ ಪುರಭವನದ ಎದುರು ವಿವಿಧ ಕಾಲೇಜಿನಿಂದ ಬಂದಿದ್ದ 4000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುರುವಾರ (ಆ.12) ಪ್ರತಿಭಟನಾ ಸಭೆ, ಧರಣಿ ನಡೆಸಿದರು. ವೃತ್ತಿ ಶಿಕ್ಷಣ ವ್ಯಾಪರೀಕರಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಪ್ರತಿಭಾಳಂತಹ ಪ್ರತಿಭೆಗಳು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆಂದು ವಿದ್ಯಾರ್ಥಿಗಳು ಆರೋಪಿಸಿದರು.

ಬೇಡಿಕೆ: ಸರ್ಕಾರ ಮತ್ತು ಖಾಸಗಿ ಆಡಳಿತ ಒಕ್ಕೂಟ (ಕಾಮೆಡ್‌-ಕೆ)ದ ನಡುವಿನ ತಿಕ್ಕಾಟದಲ್ಲಿ ವಿದ್ಯಾರ್ಥಿಗಳು ಬಲಿಪಶು ಆಗುತ್ತಿದ್ದಾರೆ. ಸರ್ಕಾರ ವ್ಯಾಪಾರೀ ನೀತಿ ಅನುಸರಿಸುವುದನ್ನು ನಿಲ್ಲಿಸಿ, ಸಿಇಟಿ ಬಿಕ್ಕಟ್ಟು ಪರಿಹಾರಕ್ಕೆ ಶಾಶ್ವತ ಶಾಸನ ರಚಿಸಬೇಕು. ಖಾಸಗಿ ವೃತ್ತಿ ಶಿಕ್ಷಣದ ಮೇಲೆ ನಿಯಂತ್ರಣ ಹೊಂದಲು ಕೇಂದ್ರಿಯ ಶಾಸನ ರೂಪಿಸಬೇಕು, ಪ್ರವೇಶ ಸಂಖ್ಯೆ ಹೆಚ್ಚಳಕ್ಕೆ ಮುಂದಾಗಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ನೂತನ ವೃತ್ತಿ ಶಿಕ್ಷಣ ಕಾಲೇಜುಗಳು ಆರಂಭಿಸಲು ಹಾಗೂ ವೃತ್ತಿ ಶಿಕ್ಷಣ ಜನಸಾಮಾನ್ಯರಿಗೆ ಕೈಗೆಟುಕುವಂತಾಗಲು ಶೇ. 75-25 ಅನುಪಾತದಲ್ಲಿ ಸೀಟು ಹಂಚಿಕೆ ವ್ಯವಸ್ಥೆ ತರಲು ಪ್ರತಿಭಟನಾಕಾರರು ಆಗ್ರಹಿಸಿದರು.

ಫೆಡರೇಷನ್‌ನ ರಾಜ್ಯ ಅಧ್ಯಕ್ಷೆ ಕೆ.ಎನ್‌.ಲಕ್ಷ್ಮೀ, ಕಾರ್ಯದರ್ಶಿ ಆರ್‌.ರಾಮಕೃಷ್ಣ , ಜಿಲ್ಲಾ ಅಧ್ಯಕ್ಷ ರಾಜಶೇಖರಮೂರ್ತಿ, ಡಿವೈಎಫ್‌ಐ ರಾಜ್ಯ ಅಧ್ಯಕ್ಷ ಕೆ.ಎನ್‌.ಉಮೇಶ ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ ಹಾಗೂ ವಿವಿಧ ಕಾಲೇಜಗಳ ವಿದ್ಯಾರ್ಥಿನಿಯರ ನಿಯೋಗ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಡಿ.ಎನ್‌.ನಾಯಕ್‌ರಿಗೆ ಮನವಿ ಪತ್ರ ಸಲ್ಲಿಸಿತು. ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಕಾಮೆಡ್‌-ಕೆ ಭೂತ ದಹನ ಮಾಡಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X