ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಂಬುತ್ತಿರುವ ಕನ್ನಂಬಾಡಿಯಲ್ಲಿ ಜಲವೈಭವ : ಚಿಗುರಿದ ಕನಸುಗಳು !

By Staff
|
Google Oneindia Kannada News

ತುಂಬುತ್ತಿರುವ ಕನ್ನಂಬಾಡಿಯಲ್ಲಿ ಜಲವೈಭವ : ಚಿಗುರಿದ ಕನಸುಗಳು !
ಮಂಡ್ಯ-ಮೈಸೂರು ರೈತರ ಮೊಗದಲ್ಲಿ ಲಕಲಕಿಸುತ್ತಿರುವ ಕಳೆ....

ಮೈಸೂರು : ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದ್ದು , ಜಲಾಶಯದ ನೀರಿನ ಮಟ್ಟ 115 ಅಡಿ ದಾಟಿದೆ.

ಜಲಾಶಯದಲ್ಲಿ ಪ್ರಸ್ತುತ (ಆ.6ರಂದು) 115.20 ಅಡಿ ನೀರಿದೆ. ಜಲಾಶಯದ ನೀರಿನ ಸಂಗ್ರಹದ ಗರಿಷ್ಠ ಮಟ್ಟ 124.80 ಅಡಿಗಳು. ನೀರಿನ ಮಟ್ಟದ ಹೆಚ್ಚಳದಿಂದ ಕಳೆದ ನಾಲ್ಕು ವರ್ಷಗಳಿಂದ ತಳಮಟ್ಟದಲ್ಲೇ ಇದ್ದ ಕನ್ನಂಬಾಡಿ ಈ ಬಾರಿ ತುಂಬುವ ಆಶಾಭಾವನೆ ಮೂಡಿದೆ.

ಕನ್ನಂಬಾಡಿ ಜಲಾಶಯದಲ್ಲಿ ನೀರ ಸಂಭ್ರಮ ತುಳುಕುತ್ತಿರುವುದರಿಂದ ಮಂಡ್ಯ ಹಾಗೂ ಮೈಸೂರಿನ ರೈತರು ಹರ್ಷಚಿತ್ತರಾಗಿದ್ದಾರೆ. ಈ ಬಾರಿಯಾದರೂ ಪೂರ್ಣಾವಧಿ ಬೆಳ ಕಾಣಬಹುದೆನ್ನುವ ನಿರೀಕ್ಷೆ ಅವರದು. ಬೆಂಗಳೂರಿನ ಜನತೆಗೆ ಕೊರೆಯಿಲ್ಲದೆ ಕುಡಿಯುವ ನೀರು ಪೂರೈಕೆಯಾಗುವ ಸಂಭ್ರಮ. ಈ ನಡುವೆ ಕನ್ನಂಬಾಡಿಯ ಜಲವೈಭವ ನೋಡಲಿಕ್ಕೆ ಬರುವ ಜನರ ಸಂಖ್ಯೆಯೂ ಹೆಚ್ಚಾಗಿದೆ.

ಯಾವುದೇ ಕ್ಷಣದಲ್ಲಿ ಭರ್ತಿ : ಕೆಆರ್‌ಎಸ್‌ ಜಲಾಶಯ ಯಾವುದೇ ಕ್ಷಣದಲ್ಲಿ ಭರ್ತಿಯಾಗಿ ನೀರನ್ನು ನದಿಗೆ ಬಿಡಬಹುದು. ಆ ಕಾರಣದಿಂದಾಗಿ ತಗ್ಗು ಪ್ರದೇಶದ ಜನರು ಜಾನುವಾರು ಹಾಗೂ ಇತರ ಸಾಮಗ್ರಿಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಜಲಾಶಯದ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಜಲಾಶಯದ ನೀರಿನ ಮಟ್ಟ 120 ಅಡಿ ದಾಟಿದ ನಂತರ ನೀರನ್ನು ನದಿಗೆ ಬಿಡುವ ಸಾಧ್ಯತೆಯಿದೆ. ಪ್ರಸ್ತುತ 4 ಸಾವಿರ ಕ್ಯುಸೆಕ್ಸ್‌ ನೀರನ್ನು ವಿವಿಧ ನಾಲೆಗಳಿಗೆ ಬಿಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭರ್ತಿಯಾಗಿರುವ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಯತ್ತಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X