ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ವಜನಿಕ ವಲಯದ ಬಿಇಎಲ್‌ 58 ಕೋಟಿ ರು. ಲಾಭ ದಾಖಲು

By Staff
|
Google Oneindia Kannada News

ಸಾರ್ವಜನಿಕ ವಲಯದ ಬಿಇಎಲ್‌ 58 ಕೋಟಿ ರು. ಲಾಭ ದಾಖಲು
ಒಟ್ಟು ನಿವ್ವಳ ಆದಾಯ 617.14 ಕೋಟಿ ರುಪಾಯಿ.

ಬೆಂಗಳೂರು : ಸಾರ್ವಜನಿಕ ವಲಯದ ಬೃಹತ್‌ ಹುದ್ದರಿ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ಪ್ರಸಕ್ತ ವಿತ್ತವರ್ಷದ ಮೊದಲ ತ್ರೆೃಮಾಸಿಕದ ಲೆಕ್ಕಪತ್ರಗಳನ್ನು ಪ್ರಕಟಿಸಿದ್ದು , 58.14 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ.

2004 ರ ಜೂನ್‌ 30ಕ್ಕೆ ಕೊನೆಗೊಂಡ ತ್ರೆೃಮಾಸಿಕದ ವರದಿಯನ್ನು ಬಿಇಎಲ್‌ ಬುಧವಾರ (ಜುಲೈ 28) ಪ್ರಕಟಿಸಿತು. ಈ ಅವಧಿಯಲ್ಲಿ 58.14 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿರುವ ಬಿಇಎಲ್‌ ಕಳೆದ ವಿತ್ತವರ್ಷದ ಇದೇ ತ್ರೆೃಮಾಸಿಕದಲ್ಲಿ 53.50 ಕೋಟಿ ರುಪಾಯಿ ಲಾಭ ಗಳಿಸಿತ್ತು .

ಏಪ್ರಿಲ್‌-ಜೂನ್‌ (2004) ಅವಧಿಯಲ್ಲಿ ಒಟ್ಟು 617.14 ಕೋಟಿ ರುಪಾಯಿ ಆದಾಯ ಗಳಿಸಲಾಗಿದೆ. ಕಳೆದ ವರ್ಷ ಇದೇ ತ್ರೆೃಮಾಸಿಕದಲ್ಲಿ ಆದಾಯದ ಪ್ರಮಾಣ 578.86 ಕೋಟಿ ರು. ಆಗಿತ್ತು ಎಂದು ಬಿಇಎಲ್‌ ಪ್ರಕಟಣೆ ತಿಳಿಸಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X