ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಟಿ ಬಿಕ್ಕಟ್ಟಿಗೆ ವಿಶೇಷ ಮಸೂದೆ : ವಿಧಾನಮಂಡಲದಲ್ಲಿ ಬಿಸಿ ಚರ್ಚೆ

By Staff
|
Google Oneindia Kannada News

ಸಿಇಟಿ ಬಿಕ್ಕಟ್ಟಿಗೆ ವಿಶೇಷ ಮಸೂದೆ : ವಿಧಾನಮಂಡಲದಲ್ಲಿ ಬಿಸಿ ಚರ್ಚೆ
ಶಾಸಕಾಂಗ-ನ್ಯಾಯಾಂಗ ಸಂಘರ್ಷ , ಸದಸ್ಯರ ಆತಂಕ

ಬೆಂಗಳೂರು : ಖಾಸಗಿ ಕಾಲೇಜುಗಳ ಒಕ್ಕೂಟ (ಕಾಮೆಡ್‌-ಕೆ)ದ ಹಠಮಾರಿತನದಿಂದ ಉಂಟಾಗಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದ್ದು , ಶೇ.75:25 ಸೀಟು ಹಂಚಿಕೆ ನಿಗದಿ ಪಡಿಸುವ ವಿಶೇಷ ಮಸೂದೆಯ ನಿರ್ಣಯವನ್ನು ವಿಧಾನಮಂಡಲದ ಉಭಯಸದನಗಳಲ್ಲಿ ಮಂಡಿಸಿದೆ.

ರಾಜ್ಯಸರ್ಕಾರದ ಶೇ.75:25 ಸೀಟು ಹಂಚಿಕೆ ಸೂತ್ರವನ್ನು ಕಾಮೆಡ್‌-ಕೆ ತಳ್ಳಿಹಾಕಿರುವುದರಿಂದ ವಿಶೇಷ ಮಸೂದೆಯನ್ನು ಅಂಗೀಕರಿಸುವುದು ಅಗತ್ಯವಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಣೆಗಾಗಿ ಸರ್ಕಾರ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲೇಬೇಕಾಗಿದೆ ಎಂದು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಹೇಳಿದರು. ಅವರು ನಿರ್ಣಯದ ಚರ್ಚೆಯ ಸಂಬಂಧದ ಮಾತುಕತೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

ಸಿಇಟಿ ಬಿಕ್ಕಟ್ಟು ಪರಿಹರಿಸುವ ವಿಶೇಷ ಮಸೂದೆ ರಚನೆಯ ನಿರ್ಣಯಕ್ಕೆ ಸದನ ಅನುವು ಮಾಡಿಕೊಡುವುದೆಂದು ಧರ್ಮಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದರು.

ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿವಿಧ ಪಕ್ಷಗಳ ಸದಸ್ಯರು ಹಠಮಾರಿ ಕಾಮೆಡ್‌-ಕೆ ಪಟ್ಟಿಗೆ ಸರ್ಕಾರ ಮಣಿಯಬಾರದು ಎಂದು ಅಭಿಪ್ರಾಯಪಟ್ಟರು. ವಿಧಾನಸಭೆ ಅಂಗೀಕರಿಸಬಹುದಾದ ಮಸೂದೆ ಉಂಟು ಮಾಡಬಹುದಾದ ಕಾನೂನು ಬಿಕ್ಕಟ್ಟಿನ ಬಗ್ಗೆ ಸಂಯುಕ್ತ ಜನತಾದಳದ ಜೆ.ಸಿ.ಮಾಧುಸ್ವಾಮಿ ಆತಂಕ ವ್ಯಕ್ತಪಡಿಸಿದರು. (ಸುಪ್ರಿಂಕೋರ್ಟ್‌ನ 11 ಸದಸ್ಯರ ಸಾಂವಿಧಾನಾತ್ಮಕ ಪೀಠ ಸಿಇಟಿ ಸೀಟು ಹಂಚಿಕೆ ಹಾಗೂ ಶುಲ್ಕ ನಿಗದಿ ಕುರಿತು ನಿರ್ಧಾರ ಪ್ರಕಟಿಸಿದೆ. ರಾಜ್ಯದ ಮಸೂದೆಯಿಂದಾಗಿ ಸಾಂವಿಧಾನಾತ್ಮಕ ಸಂಘರ್ಷ ಉಂಟಾಗಬಹುದು.)

ಮಾಧುಸ್ವಾಮಿ ಮಾತಿಗೆ ಶಾಸಕರಾದ ಜಿ.ವಿ.ಶ್ರೀರಾಮರೆಡ್ಡಿ , ಕೆ.ಜಯಪ್ರಕಾಶ್‌ ಹೆಗ್ಡೆ, ನೆ.ಲ.ನರೇಂದ್ರಬಾಬು ಸಹಮತ ವ್ಯಕ್ತಪಡಿಸಿದರು.

ಗುಮಾನಿ ಬೇಡ : ವಿಧಾನಪರಿಷತ್ತಿನಲ್ಲಿ ನಿರ್ಣಯದ ಪರವಾಗಿ ಮಾತನಾಡಿದ ಜಲ ಸಂಪನ್ಮೂಲ ಸಚಿವ ಮಲ್ಲಿಕಾರ್ಜುನ ಖರ್ಗೆ, ನಿರ್ಣಯವನ್ನು ಬೆಂಬಲಿಸುವಂತೆ ಸದಸ್ಯರನ್ನು ಒತ್ತಾಯಿಸಿದರು. ಸರ್ಕಾರದ ನಿಲುವಿನ ಬಗೆಗೆ ಸದಸ್ಯರು ಯಾವುದೇ ಗುಮಾನಿ ಇಟ್ಟುಕೊಳ್ಳಬಾರದು ಎಂದು ಖರ್ಗೆ ಮನವಿ ಮಾಡಿದರು.

ಉನ್ನತ ಶಿಕ್ಷಣ ಸಚಿವ ಡಿ.ಎಂ.ಮಂಜುನಾಥ್‌ ನಿರ್ಣಯವನ್ನು ಅನುಮೋದಿಸಿ ಮಾತನಾಡಿದರೆ, ಬಿಜೆಪಿ ಸದಸ್ಯ ಎಂ.ಆರ್‌.ತಂಗಾ ನಿರ್ಣಯದ ಔಚಿತ್ಯವನ್ನು ಪ್ರಶ್ನಿಸಿದರು. ಈ ನಿರ್ಣಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯಾವುದೇ ನ್ಯಾಯ ಒದಗಿಸಿಕೊಡುವುದಿಲ್ಲ ಎಂದು ತಂಗಾ ಹೇಳಿದರು.

(ಪಿಟಿಐ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X