ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ-ಮೇಲ್‌ ಕಳಿಸುತ್ತಿದ್ದೀರಾ? ಎಚ್ಚರಿಕೆ, ಬಾಸ್‌ ಕಳ್ಳಗಣ್ಣಿಟ್ಟಿರಬಹುದು?

By Staff
|
Google Oneindia Kannada News

ಇ-ಮೇಲ್‌ ಕಳಿಸುತ್ತಿದ್ದೀರಾ? ಎಚ್ಚರಿಕೆ, ಬಾಸ್‌ ಕಳ್ಳಗಣ್ಣಿಟ್ಟಿರಬಹುದು?
ಸಾಮಾನ್ಯವಾಗುತ್ತಿರುವ ನೌಕರರ ಇ-ಮೇಲ್‌ ಗೂಢಚಾರಿಕೆ ಚಾಳಿ

ಲಂಡನ್‌ : ಗೆಳೆಯರಿಗೆ ಇ-ಮೇಲ್‌ ಕಳಿಸುತ್ತಿದ್ದಾರಾ ? ಮತ್ತೊಮ್ಮೆ ಯೋಚಿಸಿ, ನಿಮ್ಮ ಬಾಸ್‌ ನೀವು ಕಳಿಸುತ್ತಿರುವ ಇ-ಮೇಲ್‌ ಮೇಲೆ ಕಳ್ಳಗಣ್ಣಿಟ್ಟಿರಬಹುದು ?

ಹೆಚ್ಚೂಕಮ್ಮಿ ಬಹುತೇಕ ಧಣಿಗಳು ತಮ್ಮ ಕೆಲಸಗಾರರ ಇ-ಮೇಲ್‌ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ಕೆಲಸಗಾರರು ಕಳಿಸುವ ಹಾಗೂ ಅವರಿಗೆ ಬರುವ ಇ-ಮೇಲ್‌ಗಳ ಮೇಲೆ ಮಾಲೀಕರು ಕಣ್ಣಿಟ್ಟಿದ್ದಾರೆ ಎಂದು ವರದಿಯಾಂದು ತಿಳಿಸಿದೆ. ಇ-ಮೇಲ್‌ ಗೂಢಚಾರಿಕೆಯ ಬಗ್ಗೆ ಮುಂಚಿನಿಂದಲೂ ವದಂತಿಗಳು ಇದ್ದವಾದರೂ, ಈ ಪಿಡುಗು ಇಷ್ಟೊಂದು ತೀವ್ರವಾಗಿದೆ ಎಂದು ತಿಳಿದುಬಂದಿರುವುದು ಈಗಲೇ !

ನೌಕರರ ಸಂಬಳ ಹೆಚ್ಚಿಸಲು ಕೊಸರಾಡುವ ಕಂಪನಿಗಳು ಇ-ಮೇಲ್‌ ಗೂಢಚಾರಿಕೆಗಾಗಿ ಒಂದಿಷ್ಟು ಕಾಸು ಖರ್ಚು ಮಾಡಲೂ ಹಿಂಜರಿಯುತ್ತಿಲ್ಲ . ಅರ್ಧಕ್ಕೂ ಹೆಚ್ಚು ಕಂಪನಿಗಳು ಇಂಥ ಗೂಢಚಾರಿಕೆಯಲ್ಲಿ ನಿರತವಾಗಿವೆ ಎಂದು ಖಜಜಿಠ ಐಠ ಔಟ್ಞಛಟ್ಞ ಸಮೀಕ್ಷೆ ತಿಳಿಸಿದೆ.

ಇ-ಮೇಲ್‌ ಗೂಢಚಾರಿಕೆಗಾಗಿ ಹೊರಗಿನವರಿಗೆ ಹಣ ಕೊಟ್ಟು ನೇಮಿಸುವ ಪರಿಪಾಠವೂ ಇದೆ ಎಂದು ಸಮೀಕ್ಷೆ ನಡೆಸಿಕೊಟ್ಟಿರುವ ಫೊರೆಸ್ಟರ್‌ನ ತಜ್ಞರು ತಿಳಿಸಿದ್ದಾರೆ. ನೌಕರರು ಕಂಪನಿಯ ಅತ್ಯಂತ ಖಾಸಗಿ ಸಂಗತಿಗಳನ್ನು ಬಹಿರಂಗಗೊಳಿಸುವರೆಂಬ ಭಯದಿಂದಾಗಿ ಈ ಗೂಢಚಾರಿಕೆ ಈಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X