ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ತ್ರೆೃಮಾಸಿಕ ಲೆಕ್ಕಪತ್ರ ಪ್ರಕಟ, ಲಾಭಾಂಶದಲ್ಲಿ ಶೇ.73 ಜಿಗಿತ

By Staff
|
Google Oneindia Kannada News

ವಿಪ್ರೋ ತ್ರೆೃಮಾಸಿಕ ಲೆಕ್ಕಪತ್ರ ಪ್ರಕಟ, ಲಾಭಾಂಶದಲ್ಲಿ ಶೇ.73 ಜಿಗಿತ
ಮಾರುಕಟ್ಟೆ ನಾಡಿಮಿಡಿತವನ್ನು ಸರಿಯಾದ ಕಾಲಕ್ಕೆಗುರ್ತಿಸಿದ್ದೇ ಯಶಸ್ಸಿಗೆ ಕಾರಣ- ವಿಪ್ರೋತ್ತಮ

ಬೆಂಗಳೂರು : 2004ರ ಜೂನ್‌ಗೆ ಕೊನೆಗೊಂಡ ಪ್ರಸಕ್ತ ವಿತ್ತ ವರ್ಷದ ಮೊದಲ ತ್ರೆೃಮಾಸಿಕದ ವಿತ್ತಪತ್ರಗಳನ್ನು ವಿಪ್ರೋ ಪ್ರಕಟಿಸಿದ್ದು , ತನ್ನ ಯಶಸ್ಸಿನ ನಾಗಾಲೋಟ ಮುಂದುವರೆಸಿದೆ.

ಸಿಲಿಕಾನ್‌ ವ್ಯಾಲಿಯ ಪ್ರತಿಷ್ಠಿತ ಐಟಿ ಕಂಪನಿ ವಿಪ್ರೋ ಜುಲೈ 23ರ ಶುಕ್ರವಾರ ಪ್ರಸಕ್ತ ವಿತ್ತ ವರ್ಷದ ಮೊದಲ ತ್ರೆೃಮಾಸಿಕದ ಲೆಕ್ಕಪತ್ರಗಳನ್ನು ಪ್ರಕಟಿಸಿತು. ಈ ಅವಧಿಯಲ್ಲಿ 357 ಕೋಟಿ ರುಪಾಯಿಗಳ ನಿವ್ವಳ ಲಾಭ ಗಳಿಸಿರುವ ವಿಪ್ರೋ, ಶೇ. 73ರ ದಾಖಲೆ ಪ್ರಗತಿ ಸಾಧಿಸಿದೆ. ಕಳೆದ ವಿತ್ತ ವರ್ಷದ ಮೊದಲ ತ್ರೆೃಮಾಸಿಕದಲ್ಲಿ ವಿಪ್ರೋದ ನಿವ್ವಳ ಲಾಭ 206.1 ಕೋಟಿ ರುಪಾಯಿ ಆಗಿತ್ತು .

2004ರ ಏಪ್ರಿಲ್‌-ಜೂನ್‌ ತ್ರೆೃಮಾಸಿಕದಲ್ಲಿ ವಿಪ್ರೋ 1759 ಕೋಟಿ ರುಪಾಯಿ ಆದಾಯ ಗಳಿಸಿದ್ದು , ಶೇ.48ರ ಪ್ರಗತಿ ಸಾಧಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ವಿಪ್ರೋ 1198 ಕೋಟಿ ರು. ಆದಾಯ ಗಳಿಸಿತ್ತು .

ಹೊಸ ಗ್ರಾಹಕರನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವಲ್ಲಿಯೂ ಪ್ರಗತಿ ಸಾಧಿಸಿದ್ದು , 35 ಹೊಸ ಗ್ರಾಹಕರು ವಿಪ್ರೋ ಸಖ್ಯ ಬೆಳೆಸಿದ್ದಾರೆ. ಇದೇ ಅವಧಿಯಲ್ಲಿ 3015 ನೌಕರರನ್ನು ಸೇರಿಸಿಕೊಳ್ಳುವ ಮೂಲಕ ವಿಪ್ರೋ ತನ್ನ ಬಳಗವನ್ನು ವಿಸ್ತರಿಸಿಕೊಂಡಿದೆ.

ಮಾರುಕಟ್ಟೆಯ ಸ್ಥಿತಿಗತಿಯ ನಾಡಿಮಿಡಿತವನ್ನು ಸರಿಯಾದ ಕಾಲಕ್ಕೆ ಸಮರ್ಪಕವಾಗಿ ಗುರ್ತಿಸಿದ್ದು ಹಾಗೂ ಉನ್ನತ ಗುಣಮಟ್ಟದ ಸೇವಾ ಖಾತರಿಯೇ ನಮ್ಮ ದಾಖಲೆ ಯಶಸ್ಸಿಗೆ ಕಾರಣ ಎಂದು ವಿಪ್ರೋತ್ತಮ ಅಜೀಂ ಪ್ರೇಂಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

(ಪಿಟಿಐ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X