ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕಿ ಮಾನಭಂಗಕ್ಕೆ ಸ್ವಾಮೀಜಿ ಪ್ರಯತ್ನ? ಕೆ.ಆರ್‌.ಪೇಟೆ ಕುದಿಮೌನ

By Staff
|
Google Oneindia Kannada News

ಶಿಕ್ಷಕಿ ಮಾನಭಂಗಕ್ಕೆ ಸ್ವಾಮೀಜಿ ಪ್ರಯತ್ನ? ಕೆ.ಆರ್‌.ಪೇಟೆ ಕುದಿಮೌನ
ಮಠದ ಕಚೇರಿಗೆ ಸಾರ್ವಜನಿಕರ ಮುತ್ತಿಗೆ, ಕಲ್ಲು ತೂರಾಟ

ಮಂಡ್ಯ : ಅವಿವಾಹಿತ ಶಿಕ್ಷಕಿಯಾಬ್ಬರ ಮಾನಭಂಗಕ್ಕೆ ಸ್ವಾಮೀಜಿಯಾಬ್ಬರು ಯತ್ನಿಸಿದರು ಎನ್ನುವ ಆರೋಪದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಸಾರ್ವಜನಿಕರು ಕೆಆರ್‌ಪೇಟೆಯಲ್ಲಿನ ಆದಿಚುಂಚನಗಿರಿ ಶಾಖಾಮಠದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಆದಿಚುಂಚನಗಿರಿ ಮಠಕ್ಕೆ ಸೇರಿದ ಹೇಮಗಿರಿಯ ಶಾಖಾಮಠದ ಸ್ವಾಮೀಜಿ 55 ವರ್ಷದ ಮಲ್ಲೇಶ್ವರನಾಥ, ಮಠಕ್ಕೆ ಸೇರಿದ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಯುವತಿಯ ಮಾನಭಂಗಕ್ಕೆ ಪ್ರಯತ್ನಿಸಿದರು. ಮಠದ ಕಚೇರಿಗೆ ಶಿಕ್ಷಕಿಯನ್ನು ಕರೆಸಿಕೊಂಡು ಕೈ ಹಿಡಿದು ಎಳೆದರು. ಕೋಣೆಗೆ ಬರುವಂತೆ ಪೀಡಿಸಿದರು ಎಂದು ಸಾರ್ವಜನಿಕರು ದೂರಿದ್ದಾರೆ.

ನೂರಾರು ಸಂಖ್ಯೆಯಲ್ಲಿ ಮಠದ ಕಚೇರಿಗೆ ಮುತ್ತಿಗೆ ಹಾಕಿದ ಸಾರ್ವಜನಿಕರು ಸ್ವಾಮೀಜಿಯನ್ನು ಗಡೀಪಾರು ಮಾಡುವಂತೆ ಒತ್ತಾಯಿಸಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ಸ್ವಾಮೀಜಿಯನ್ನು ಪೊಲೀಸ್‌ ಬಸ್‌ನಲ್ಲಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿದ್ದು , ಪೊಲೀಸ್‌ ಪೇದೆಗಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಕೆಆರ್‌ಪೇಟೆಯಲ್ಲಿ ಉದ್ರಿಕ್ತ ಪರಿಸ್ಥಿತಿಯಿದ್ದು , ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ.

ಎಲ್ಲವೂ ಕಟ್ಟು ಕಥೆ :

ಮಧುಮೇಹ, ರಕ್ತದೊತ್ತಡ ಮುಂತಾದ ರೋಗಗಳಿಂದ ಬಳಲುತ್ತಿರುವ ನಾನು ಮಾನಭಂಗ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಮಲ್ಲೇಶ್ವರನಾಥ ಸ್ವಾಮೀಜಿ- ತಮ್ಮ ಮೇಲಿನ ಆರೋಪ ಕಟ್ಟುಕಥೆ ಎಂದಿದ್ದಾರೆ.

ಆಕೆ ಸರಿಯಾಗಿ ಪಾಠ ಮಾಡುತ್ತಿರಲಿಲ್ಲ . ಆ ಕಾರಣದಿಂದಾಗಿ ಮಠಕ್ಕೆ ಕರೆಸಿ ಎಚ್ಚರಿಕೆ ನೀಡಿದೆ. ಆದರೀಗ ಪ್ರಕರಣಕ್ಕೆ ಬೇರೆ ಬಣ್ಣ ಕಟ್ಟಲಾಗಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X