ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆರಿಗೆ ಹೆಚ್ಚಳ ವಿರೋಧಿಸಿ ರಾಜ್ಯದ 3000 ಐಟಿ ಡೀಲರ್‌ಗಳ ಬಂದ್‌

By Super
|
Google Oneindia Kannada News

ಬೆಂಗಳೂರು : ಕಂಪ್ಯೂಟರ್‌, ಸಾಫ್ಟ್‌ವೇರ್‌ ಹಾಗೂ ಐಟಿ ಸೇವೆಗಳ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಿ ರಾಜ್ಯದ ಸುಮಾರು 3000 ಐಟಿ ಉತ್ಪನ್ನಗಳು ಹಾಗೂ ಸೇವೆಗಳ ಡೀಲರ್‌ಗಳು ಬುಧವಾರ (ಜು.21) ಬಂದ್‌ ಆಚರಿಸಿದರು.

ಸಾಫ್ಟ್‌ವೇರ್‌ ಹಾಗೂ ಐಟಿ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ. 5.75 ರಿಂದ ಶೇ. 13.8ಕ್ಕೆ ಹೆಚ್ಚಿಸಿರುವ ಸರ್ಕಾರದ ಕ್ರಮ ಸರಿಯಾದ ನಿರ್ಧಾರವಲ್ಲ . ಸರ್ಕಾರದ ತೆರಿಗೆ ನೀತಿಯನ್ನು ವಿರೋಧಿಸಿ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಒಕ್ಕೂಟದ ನೇತೃತ್ವದಡಿ ಒಂದು ದಿನದ ಬಂದ್‌ ಆಚರಿಸಲಾಗುತ್ತಿದೆ ಎಂದು ಒಕ್ಕೂಟದ ಕಾರ್ಯದರ್ಶಿ ಆರ್‌.ಶ್ರೀಧರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಮಂಡಿಸಿರುವ 2004-05ರ ರಾಜ್ಯ ಬಜೆಟ್‌ ಪ್ರಗತಿವಿಮುಖ ಹಾಗೂ ದಿಕ್ಕುದೆಸೆಯಿಲ್ಲದ ಲೆಕ್ಕಪತ್ರ. ದೇಶದ ಬಹುತೇಕ ರಾಜ್ಯಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮಾರಾಟ ತೆರಿಗೆ ಶೇ.4ರ ಆಸುಪಾಸಿನಲ್ಲಿರುವಾಗ ರಾಜ್ಯ ಸರ್ಕಾರ ತೆರಿಗೆಯನ್ನು ಹೆಚ್ಚಿಸುವ ತಪ್ಪು ಹೆಜ್ಜೆಯಿಟ್ಟಿದೆ. ಬಜೆಟ್‌ನಲ್ಲಿ ಆರ್ಥಿಕ ದೃಷ್ಟಿಕೋನಕ್ಕಿಂಥ ಹೆಚ್ಚಾಗಿ ರಾಜಕೀಯವೇ ಹೆಚ್ಚಾಗಿ ಬೆರೆತಿದೆ ಎಂದು ಶ್ರೀಧರ್‌ ಬಣ್ಣಿಸಿದ್ದಾರೆ.

ಸಾಫ್ಟ್‌ವೇರ್‌ ಉತ್ಪನ್ನಗಳ ಮೇಲಿನ ಮಾರಾಟ ತೆರಿಗೆಯ ಹೆಚ್ಚಳವನ್ನು ತಕ್ಷಣವೇ ವಾಪಸ್ಸು ಪಡೆಯಬೇಕು ಎಂದು ಮುಖ್ಯಮಂತ್ರಿ ಧರ್ಮಸಿಂಗ್‌ ಹಾಗೂ ಡೆಪ್ಯುಟಿ ಸಿಎಂ ಸಿದ್ಧರಾಮಯ್ಯನವರನ್ನು ಒಕ್ಕೂಟ ಒತ್ತಾಯಿಸಿದೆ. ಮಾರಾಟ ತೆರಿಗೆ ವಾಪಸ್ಸು ಪಡೆಯದಿದ್ದಲ್ಲಿ ಭಾರೀ ಪ್ರತಿಭಟನೆ ನಡೆಸುವುದಾಗಿ ಒಕ್ಕೂಟ ಎಚ್ಚರಿಸಿದೆ.(ಪಿಟಿಐ)

English summary
Karnataka IT products dealers on bundh today (July 21, 2004) against tax rise
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X