ಬೆಂಗಳೂರಲ್ಲಿ ಮಳೆ! 4 ದಶಕದ ಜುಲೈ ಪಟ್ಟೀಲಿ 2004ರ ಜುಲೈ ನಂ.1
ಬೆಂಗಳೂರಲ್ಲಿ ಮಳೆ! 4 ದಶಕದ ಜುಲೈ ಪಟ್ಟೀಲಿ 2004ರ ಜುಲೈ ನಂ.1
ಜುಲೈ ಪ್ರಥಮಾರ್ಧದಲ್ಲಿ 246.6 ಮಿಮೀ ದಾಖಲೆ ಮಳೆ
ಕಳೆದ 40 ವರ್ಷಗಳ ಜುಲೈ ತಿಂಗಳುಗಳ ಪೈಕಿ 2004 ರ ಜುಲೈ ದಾಖಲೆ ಮಳೆಯ ದಾಖಲೆ ತನ್ನದಾಗಿಸಿಕೊಂಡಿದೆ. ಈ ವರ್ಷ ಜುಲೈ ತಿಂಗಳ ಮೊದಲ ಭಾಗದಲ್ಲೇ 246.6 ಮಿಮೀ ಮಳೆ ಬೆಂಗಳೂರಲ್ಲಿ ಸುರಿದಿದೆ. 40 ವರ್ಷಗಳ ಹಿಂದೆ, 1964ರಲ್ಲಿ 285.6 ಮಿಮೀ ಮಳೆ ಸುರಿದಿತ್ತು .
ಜುಲೈನ ಎರಡನೇ ಭಾಗದಲ್ಲೂ ಮಳೆ ಮುಂದುವರಿಯುತ್ತಾ ? ಈ ಬಗ್ಗೆ ಹವಾಮಾನ ಇಲಾಖೆ ಅಂಥ ಆಶಾಭಾವವನ್ನೇನೂ ಹೊಂದಿಲ್ಲ . ಇಲಾಖೆ ನಿರ್ದೇಶಕ ಡಾ.ಎ.ಎಲ್.ಕೊಪ್ಪರ್ ಹೇಳುತ್ತಾರೆ :
ಜುಲೈ ತಿಂಗಳ ದ್ವಿತೀಯಾರ್ಧದಲ್ಲಿ ಮಳೆ ಅಷ್ಟಾಗಿ ಇರದು. ಒಣ ವಾತಾವರಣವೇ ನಗರಕ್ಕೆ ಮಾಮೂಲು. ಹಾಗೆ ನೋಡುವುದಾದರೆ ಜುಲೈ ತಿಂಗಳು ಒದ್ದೆ ತಿಂಗಳೇನೂ ಅಲ್ಲ . ಈ ಸಲ ಸಂಪ್ರದಾಯಕ್ಕೆ ವಿರುದ್ಧವಾಗಿ ಕರ್ನಾಟಕದಲ್ಲಿ ಮಾನ್ಸೂನ್ ಚಿಗುರಿಕೊಂಡಿದೆ. ಇದಕ್ಕೆ ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ವ್ಯತ್ಯಾಸವೇ ಕಾರಣ.
ಕಳೆದೊಂದು ವಾರದಲ್ಲಿ ಬೆಂಗಳೂರಿನಲ್ಲಿ ಬಿದ್ದಿರುವ ಮಳೆಯ ಪ್ರಮಾಣವೆಷ್ಟು ಗೊತ್ತಾ ?
ಜುಲೈ 8- 53.8 ಮೀಮಿ
ಜುಲೈ 9- 73.9 ಮಿಮೀ
ಜುಲೈ 10- 50.6 ಮಿಮೀ
ಜುಲೈ 11 - 5-6 ಮಿಮೀ
ಜುಲೈ 12- 43.4 ಮಿಮೀ
ಜುಲೈ 13- 8.8 ಮಿಮೀ
ಜುಲೈ 14- 0.1 ಮಿಮೀ
ಮಳೆ ಮುಸುಕು ಮುಂದುವರೆದಿದೆ. ಈಗಿನದು ತುಂತುರಿನ ಸೊಗಸು.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications