ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಾಹ್ನದ ಬಿಸಿಯೂಟ ಜೊತೆಗೊಂದು ಲೋಟ ಹಾಲು : ಪಟೇಲ್‌

By Staff
|
Google Oneindia Kannada News

ಮಧ್ಯಾಹ್ನದ ಬಿಸಿಯೂಟ ಜೊತೆಗೊಂದು ಲೋಟ ಹಾಲು : ಪಟೇಲ್‌
ರಾಜ್ಯದಿಂದ ಹಾಲನ್ನು ರಫ್ತು ಮಾಡುವ ಬದಲು ಹಾಲಿನ ಪುಡಿ ತಯಾರಿಕಾ ಘಟಕ ತೆರೆಯುವ ಬಗ್ಗೆ ಚಿಂತನೆ

ಮೈಸೂರು : ರಾಜ್ಯದಲ್ಲಿ 1.35 ಲಕ್ಷ ಲೀ. ಹಾಲು ಹೆಚ್ಚುವರಿಯಾಗಿ ಉತ್ಪಾದನೆ ಆಗುತ್ತಿದ್ದು, ಈ ಹಾಲನ್ನು ಪ್ರಾಥಮಿಕ ಮತ್ತು ಅಂಗನವಾಡಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.

ರಾಜ್ಯದಲ್ಲಿ ಅಧಿಕವಾದ ಹಾಲನ್ನು ಪ್ರಸ್ತುತ ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳಿಗೆ ರವಾನಿಸಲಾಗುತ್ತಿದೆ. ಸಾಗಣೆ ವೆತ್ತ, ನಷ್ಟ ಇತ್ಯಾದಿ ಲೆಕ್ಕಾಚಾರದ ಬದಲು ಹೆಚ್ಚುವರಿ ಹಾಲನ್ನು ಶಾಲಾ ಮಕ್ಕಳಿಗೆ ನೀಡಲು ಸರ್ಕಾರ ಉದ್ದೇಶಿಸಿದೆ ಎಂದು ಪಶುಸಂಗೋಪನೆ ಹಾಗೂ ವಕ್ಫ್‌ ಸಚಿವ ಮಿರಾಜುದ್ದೀನ್‌ ಪಟೇಲ್‌ ತಿಳಿಸಿದ್ದಾರೆ. ಅವರು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಿಂದ ಹಾಲನ್ನು ರಫ್ತು ಮಾಡುವ ಬದಲು ಹಾಲಿನ ಪುಡಿ ತಯಾರಿಕಾ ಘಟಕ ತೆರೆಯುವ ಆಲೋಚನೆಯೂ ಸರ್ಕಾರಕ್ಕಿದೆ. ವಿವಿಧ ಹಾಲಿನ ಉತ್ಪನ್ನಗಳನ್ನು ತಯಾರಿಸುವುದರ ಮೂಲಕ ಹೊರ ರಾಜ್ಯಗಳಿಗೆ ಹಾಲನ್ನು ರವಾನಿಸುವ ಖರ್ಚು ಉಳಿಯುತ್ತದೆ. ಜೊತೆಗೆ ಆದಾಯವೂ ಹೆಚ್ಚುತ್ತದೆ ಎಂದು ಮಿರಾಜುದ್ದೀನ್‌ ಅಭಿಪ್ರಾಯಪಟ್ಟರು.

ಪಶುಗಳನ್ನು ಕಸಾಯಿಖಾನೆಗಳಿಗೆ ಒಯ್ಯಲೆಂದೇ ರಾಜ್ಯದಿಂದ ಪಶುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ಈ ಕೃತ್ಯವನ್ನೆಸಗುವವರನ್ನು ಹಿಡಿದು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ನಮ್ಮ ಕಾನೂನು ಸೋತಿದೆ. ಆದ್ದರಿಂದ ಕಾನೂನು ತಿದ್ದುಪಡಿ ಮಾಡಬೇಕು ಎಂದು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕರು ಮಿರಾಜುದ್ದೀನ್‌ ಅವರನ್ನು ಕೋರಿಕೊಂಡರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X