ಬೆಂಗಳೂರ ಬವಣೆ! ಕರೆಂಟು ಅಧಿಕ ಬೇಕೆಂದು ಹೆಚ್ಚು ಕಸ ಹಾಕ ಬೇಡಿ
ಬೆಂಗಳೂರ ಬವಣೆ! ಕರೆಂಟು ಅಧಿಕ ಬೇಕೆಂದು ಹೆಚ್ಚು ಕಸ ಹಾಕ ಬೇಡಿ
ಬೆಂಗಳೂರಿನಲ್ಲಿ ಶೀಘ್ರದಲ್ಲಿ ವರ್ಜ್ಯದಿಂದ ವಿದ್ಯುತ್ ತಯಾರಿಸುವ ಘಟಕ ಸ್ಥಾಪನೆ
ನಗರದ ವರ್ಜ್ಯದಿಂದ ವಿದ್ಯುತ್ ತಯಾರಿಸುವ ಘಟಕದ ಸ್ಥಾಪನೆಗೆ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಪಾಲಿಕೆ ಆಯುಕ್ತ ಎಂ.ಆರ್.ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.
ಬೆಂಗಳೂರಿನ ಶ್ರೀನಿವಾಸ ಗಾಯತ್ರಿ ಸಂಪನ್ಮೂಲ ಪುನಶ್ಚೇತನ ಸಂಸ್ಥೆಯು ದಿನವೊಂದರಲ್ಲಿ 1,000 ಮೆಟ್ರಿಕ್ ಟನ್ ಕಸದಿಂದ 6 ಮೆಗಾ ವ್ಯಾಟ್ ವಿದ್ಯುತ್ ತಯಾರಿಸಲು ಮುಂದೆ ಬಂದಿದೆ. ಇದಕ್ಕಾಗಿ 20 ಕೋಟಿ ವೆಚ್ಚದ ವಿದ್ಯುತ್ ತಯಾರಕಾ ಘಟಕ ಸ್ಥಾಪಿಸಬೇಕಾಗಿದೆ. ಕಸವನ್ನು ಒಂದು ಟನ್‌ಗೆ ಒಂದು ರೂಪಾಯಿಯಂತೆ ಪಾಲಿಕೆ ಒದಗಿಸಲಿದೆ. ಇದರಲ್ಲಿ ತಯಾರಾದ ವಿದ್ಯುತ್‌ನ್ನು ಕೆಪಿಸಿಟಿಎಲ್ ಖರೀದಿಸಲಿದೆ.
ಇದರಿಂದ ನಗರ ಎದುರಿಸುತ್ತಿರುವ ವರ್ಜ್ಯ ವಿಲೇವಾರಿ ಮತ್ತು ವಿದ್ಯುತ್ ಕೊರತೆಗೆ ಉತ್ತಮ ಪರಿಹಾರ ಕಂಡು ಕೊಂಡಂತಾಗುತ್ತದೆ. ಇದು ವೈಜ್ಞಾನಿಕ ಕ್ರಮ ಕೂಡಾ ಆಗಿದೆ ಎಂದು ಅವರು ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications