ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಬಜೆಟ್‌ಗೆ ಮುನ್ನ ‘ಸಾಮಾನ್ಯಕನಿಷ್ಠ ಕಾರ್ಯಕ್ರಮ’ ಪಟ್ಟಿ ಪ್ರಕಟ

By Staff
|
Google Oneindia Kannada News

ರಾಜ್ಯ ಬಜೆಟ್‌ಗೆ ಮುನ್ನ ‘ಸಾಮಾನ್ಯಕನಿಷ್ಠ ಕಾರ್ಯಕ್ರಮ’ ಪಟ್ಟಿ ಪ್ರಕಟ
ಪಟ್ಟಿಯಲ್ಲಿ ಆನ್‌ಲೈನ್‌ ಲಾಟರಿ ನಿಷೇಧ, ಬಡ ಜನತೆಗೆ 3 ರು.ಗೆ ಕೇಜಿ ಅಕ್ಕಿ

ಬೆಂಗಳೂರು : ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಆನ್‌ಲೈನ್‌ ಲಾಟರಿ ನಿಷೇಧ, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬಿಸಿಯೂಟ ಯೋಜನೆಯ ವಿಸ್ತರಣೆ ಹಾಗೂ ಬಡ ಜನತೆಗೆ 3 ರುಪಾಯಿಗೆ ಕೇಜಿಯಂತೆ ಅಕ್ಕಿ ವಿತರಿಸುವ ಯೋಜನೆಗಳನ್ನು ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಒಳಗೊಂಡಿರುತ್ತದೆ ಎಂದು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಹೇಳಿದ್ದಾರೆ.

ರೈತರಿಗೆ ನೆರವು ನೀಡುವ ನಿಟ್ಟಿನಲ್ಲಿ ಕೃಷಿ ಅಭಿವೃದ್ಧಿ ನಿಗಮದ ಸ್ಥಾಪನೆ, ಬಡ ರೈತರಿಗೆ ಶೇ.4ರ ದರದಲ್ಲಿ ಸಾಲ ಸೌಲಭ್ಯ, ಬಡ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕ, ಪರಿಶಿಷ್ಟ ವರ್ಗ ಹಾಗೂ ಪಂಗಡಗಳ ಹಿತಾಸಕ್ತಿಗೆ ಹಲವು ಕ್ರಮ- ಇವು ಕಾಂಗ್ರೆಸ್‌ ಹಾಗೂ ಜಾತ್ಯತೀತ ಜನತಾದಳದ ಸಮ್ಮಿಶ್ರ ಸರ್ಕಾರ ರೂಪಿಸುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಮುಖ್ಯಾಂಶಗಳು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಧರ್ಮಸಿಂಗ್‌ ಪ್ರಕಟಿಸಿದರು.

ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ವ್ಯಾಪ್ತಿ ವಿಶಾಲವಾದುದರಿಂದ ಅದನ್ನು ರೂಪಿಸಲು ತಡವಾಗುತ್ತಿದೆ. ಜುಲೈ 4ರಂದು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮುಖಂಡರ ಸಭೆ ನಡೆಯಲಿದ್ದು , ಈ ಸಭೆಯಲ್ಲಿ ಕನಿಷ್ಠ ಕಾರ್ಯಕ್ರಮದ ರೂಪುರೇಷೆಯನ್ನು ಅಂತಿಮಗೊಳಿಸಲಾಗುವುದು. ಜುಲೈ 19ರಂದು ಮಂಡಿಸಲಾಗುವ ರಾಜ್ಯ ಬಜೆಟ್‌ಗೂ ಮುನ್ನ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಪಟ್ಟಿ ಪ್ರಕಟಿಸಲಾಗುವುದು ಎಂದು ಧರ್ಮಸಿಂಗ್‌ ಹೇಳಿದರು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಯಾವುದೇ ತಿಕ್ಕಾಟವಿಲ್ಲ . ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಉಭಯ ಪಕ್ಷಗಳ ನಡುವಣ ಹೊಂದಾಣಿಕೆ ಮತ್ತೊಮ್ಮೆ ಶ್ರುತಗೊಂಡಿದೆ ಎಂದು ಮುಖ್ಯಮಂತ್ರಿ ಧರ್ಮಸಿಂಗ್‌ ಹೇಳಿದರು.

(ಪಿಟಿಐ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X