ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಕ್ಕಿ ಹಗರಣ ಮುಚ್ಚಿ ಹಾಕಲು ರಾಜ್ಯ ಸರಕಾರದ ವ್ಯವಸ್ಥಿತ ಪ್ರಯತ್ನ’

By Staff
|
Google Oneindia Kannada News

‘ಅಕ್ಕಿ ಹಗರಣ ಮುಚ್ಚಿ ಹಾಕಲು ರಾಜ್ಯ ಸರಕಾರದ ವ್ಯವಸ್ಥಿತ ಪ್ರಯತ್ನ’
ಹಗರಣದಲ್ಲಿ ಎಸ್‌.ಎಂ.ಕೃಷ್ಣ ಸರಕಾರದ ಕೆಲ ಸಚಿವರು ಮತ್ತು ಉನ್ನತ ಅಧಿಕಾರಿಗಳ ಕೈವಾಡ: ಯಡಿಯೂರಪ್ಪ

ಬೆಂಗಳೂರು : ಬಹುಕೋಟಿ ಅಕ್ಕಿ ಹಗರಣವನ್ನು ಮುಚ್ಚಿ ಹಾಕಲು ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರವು ವ್ಯವಸ್ಥಿತ ಪ್ರಯತ್ನ ಮಾಡುತ್ತಿದೆ ಎಂದು ರಾಜ್ಯ ವಿಧಾನಸಭೆಯ ವಿರೋಧಿ ಪಕ್ಷದ ನಾಯಕ ಯಡಿಯೂರಪ್ಪ ಆರೋಪಿಸಿದ್ದಾರೆ.

ಕೂಲಿಗಾಗಿ ಕಾಳು ಯೋಜನೆ ಅಡಿಯಲ್ಲಿ ಕೇಂದ್ರ 9.5 ಲಕ್ಷ ಟನ್‌ ಅಕ್ಕಿ ನೀಡಿದೆ. ನನಗೆ ತಿಳಿದಿರುವ ಪ್ರಕಾರ ಅದರಲ್ಲಿ ಶೇಕಡಾ 70 ರಷ್ಟು ಕಾಳಸಂತೆಯಲ್ಲಿ ಮಾರಾಟವಾಗಿದೆ. ರಾಜ್ಯ ಬೇಹುಗಾರಿಕಾ ತಜ್ಞರು ಹಿಡಿದಿರುವ 13 ಕೋಟಿ ರೂಪಾಯಿಯ ಅಕ್ಕಿ ಕೇವಲ ನಾಲ್ಕು ಪ್ರಕರಣಕ್ಕೆ ಸಂಬಂಧ ಪಟ್ಟದ್ದು. ಅದು ಇಡೀ ಪ್ರಕರಣದ ಒಂದು ತುಣುಕು ಮಾತ್ರ. ಇನ್ನು ವಿದೇಶಕ್ಕೆ ರಫ್ತಾದ ಅಕ್ಕಿ , ಗೋಧಿ ಇತ್ಯಾದಿ ಇದೆ ಎಂದು ಹೇಳಿದರು.

ಈ ಅಕ್ಕಿಯನ್ನು ಏಲಂ ಮೂಲಕ ವಿತರಿಸಬೇಕು ಎಂದು ನ್ಯಾಯಾಲಯದ ಆದೇಶವಿದೆ. ಆದರೂ ತನ್ನ ದುರುದ್ದೇಶ ಈಡೇರಿಕೆಗಾಗಿ ಸರಕಾರ ಈ ರೀತಿ ಮಾಡಿದೆ. ಈ ಹಗರಣದಲ್ಲಿ ಎಸ್‌.ಎಂ.ಕೃಷ್ಣ ಸರಕಾರದ ಹಲವು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಉನ್ನತ ಅಧಿಕಾರಿಗಳ ಕೈವಾಡವಿದೆ. ಅದಕಾರಣ ಸರಕಾರ ಸದನ-ಜಂಟಿ ಸಮಿತಿ ತನಿಖೆಗೆ ಹಿಂದೇಟು ಹಾಕುತ್ತಿದೆ ಎಂದು ಜರೆದರು.

ಇನ್ನೂ ಸರಕಾರದ ಸಂಪುಟ ರಚನೆ ಸಂಪೂರ್ಣವಾಗಿಲ್ಲ. ಅವರ ಅಧಿಕಾರ ಮತ್ತು ಹಣದ ದಾಹದಲ್ಲಿ ರಾಜ್ಯದ ಅಭಿವೃದ್ಧಿ ಮಾಯವಾಗಿದೆ ಎಂದು ಲೇವಡಿ ಮಾಡಿದರು.

(ಪಿಟಿಐ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X