ಕಲಾಮ್‌ರಿಂದ ಜೂ.30ರಂದು ದ್ರಾವಿಡ್‌ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಲಾಮ್‌ರಿಂದ ಜೂ.30ರಂದು ದ್ರಾವಿಡ್‌ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕರ್ನಾಟಕದ ಕ್ರಿಕೆಟಿಗರಲ್ಲಿ ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರನಾದ ಐದನೆಯವ ದ್ರಾವಿಡ್
‘ ನಾನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವುದು ನಿಜಕ್ಕೂ ಅತೀವ ಸಂತಸ ಮತ್ತು ವ್ಯಕ್ತಪಡಿಸಲಾಗದಂತಹ ಖುಷಿಯನ್ನು ಕೊಟ್ಟಿದೆ. ನಾನು ಆದರ್ಶವಾಗಿ ಇಟ್ಟುಕೊಂಡ ಕೆಲ ಕ್ರಿಕೆಟ್ ಆಟಗಾರರಿಗೆ ಈ ಗೌರವಯುತ ಪದ್ಮಶ್ರೀ ಪ್ರಶಸ್ತಿ ದೊರಕಿದೆ. ಇದು ನನಗೆ ಸಿಗುತ್ತಿರುವುದು ನನ್ನ ಭಾಗ್ಯ. ಇದನ್ನು ಒಂದು ಉನ್ನತ ಪಾರಿತೋಷ ಎಂದು ಪರಿಗಣಿಸುತ್ತೇನೆ ’ ಎಂದು ದ್ರಾವಿಡ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಪದ್ಮಶ್ರೀ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದ ಕರ್ನಾಟಕದ ಕ್ರಿಕೆಟ್ ಆಟಗಾರರಲ್ಲಿ ರಾಹುಲ್ ದ್ರಾವಿಡ್ ಅವರು ಐದನೆಯವರಾಗಿದ್ದಾರೆ. ಇದಕ್ಕೂ ಮುಂಚೆ ಈ.ಎ.ಎಸ್. ಪ್ರಸನ್ನ, ಜಿ. ಆರ್. ವಿಶ್ವನಾಥ್, ಬಿ.ಎಸ್. ಚಂದ್ರಶೇಖರ್ ಮತ್ತು ಸಯ್ಯದ್ ಕೀರ್ಮಾನಿ ಅವರುಗಳು ಈ ಪ್ರಶಸ್ತಿಗೆ ಪಾತ್ರರಾಗಿದ್ದರು.
ದ್ರಾವಿಡ್ ಅವರ ಜೊತೆ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಇತರ ಕ್ರೀಡಾಪಟುಗಳೆಂದರೆ- ಅಂಜು ಬಿ. ಜಾರ್ಜ್, ದಿಲೀಪ್ ಟಿರ್ಕೆ ಮತ್ತು ಕೆ.ಎಂ. ಬೀನಾಮೊಲ್.
(ಪಿ.ಟಿ.ಐ)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications