ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧುಮೇಹ : ಭದ್ರಾವತಿ ಆಕಾಶವಾಣಿ ಕೇಂದ್ರದಿಂದ ವಿಶೇಷ ಸರಣಿ

By Staff
|
Google Oneindia Kannada News

ಮಧುಮೇಹ : ಭದ್ರಾವತಿ ಆಕಾಶವಾಣಿ ಕೇಂದ್ರದಿಂದ ವಿಶೇಷ ಸರಣಿ
ರೋಗ-ಚಿಕಿತ್ಸೆಯ ಎಲ್ಲ ಆಯಾಮಗಳ ಕುರಿತು ಒಳನೋಟಗಳು, ಸ್ಪರ್ಧೆಯೂ ಉಂಟು

ಭದ್ರಾವತಿ : ಸಕ್ಕರೆ ಕಾಯಿಲೆಯ ಎಲ್ಲ ಆಯಾಮಗಳ ಕುರಿತು ಮಾಹಿತಿ ನೀಡುವ ವಿಶೇಷ ಸರಣಿ ಕಾರ್ಯಕ್ರಮವೊಂದನ್ನು ಭದ್ರಾವತಿ ಆಕಾಶವಾಣಿ ಕೇಂದ್ರ ಪ್ರಾರಂಭಿಸಿದೆ.

ಸಕ್ಕರೆ ಕಾಯಿಲೆಯ ಲಕ್ಷಣಗಳು, ಪರಿಣಾಮಗಳು, ದೇಹದ ವಿವಿಧ ಭಾಗಗಳ ಮೇಲೆ ಬೀರುವ ಪರಿಣಾಮ, ಕಾಯಿಲೆ ನಿಯಂತ್ರಣಕ್ಕೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಆಹಾರ ಪಥ್ಯೆ ಮುಂತಾದ ವಿಷಯಗಳ ಕುರಿತು ಈ ಕಾರ್ಯಕ್ರಮ ಬೆಳಕು ಚೆಲ್ಲಲಿದೆ. ಪ್ರತಿ ಸೋಮವಾರ ಬೆಳಗ್ಗೆ 8.35ಕ್ಕೆ ಪ್ರಸಾರವಾಗುವ ಈ ವಿಶೇಷ ಕಾರ್ಯಕ್ರಮ ಸರಣಿ, ಜೂನ್‌ 21ರಿಂದಲೇ ಪ್ರಾರಂಭವಾಗಿದೆ.

ಕಾರ್ಯಕ್ರಮವನ್ನು ಆಕರ್ಷಣೀಯವಾಗಿಸಲು ಬಹುಮಾನ ಯೋಜನೆಯಾಂದನ್ನು ಆಕಾಶವಾಣಿ ಕೇಂದ್ರ ಆಯೋಜಿಸಿದೆ. ಪ್ರತಿ ಕಾರ್ಯಕ್ರಮದ ಕೊನೆಯಲ್ಲಿಯೂ ಪ್ರಶ್ನೆಯಾಂದನ್ನು ಕೇಳಲಾಗುತ್ತಿದ್ದು , ಸರಿಯುತ್ತರ ಕಳುಹಿಸುವ ಅದೃಷ್ಟಶಾಲಿಗಳಿಗೆ ಬಹುಮಾನ ನೀಡಲಾಗುವುದು.

ಮಧುಮೇಹ ರೋಗಿಗಳು ಹಾಗೂ ಆಸಕ್ತರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಆಕಾಶವಾಣಿಯ ಪ್ರಕಟಣೆ ತಿಳಿಸಿದೆ. ಮಧುಮೇಹಕ್ಕೆ ಸಂಬಂಧಿಸಿದಂತೆ ತಮ್ಮ ತೊಂದರೆ, ಸಲಹೆಗಳನ್ನು ಕಳುಹಿಸಲೂ ಅವಕಾಶವಿದೆ. ವಿಳಾಸ : ನಿಲಯದ ನಿರ್ದೇಶಕರು, ಸಕ್ಕರೆ ಕಾಯಿಲೆ ಸರಣಿ ಕಾರ್ಯಕ್ರಮ ವಿಭಾಗ, ಆಕಾಶವಾಣಿ, ಜೆಪಿಎಸ್‌ ಕಾಲೊನಿ, ಭದ್ರಾವತಿ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X