ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳದ ಮೌಸುನಿಗೆ ಸೌರ ಬೆಳಕು ನೀಡಿದ ಬಿಎಚ್‌ ಇಎಲ್‌

By Staff
|
Google Oneindia Kannada News

ಪಶ್ಚಿಮ ಬಂಗಾಳದ ಮೌಸುನಿಗೆ ಸೌರ ಬೆಳಕು ನೀಡಿದ ಬಿಎಚ್‌ ಇಎಲ್‌
ದೇಶದ ಅತಿದೊಡ್ಡ ಸೌರಶಕ್ತಿ ವಿದ್ಯುತ್‌ ಘಟಕ ಸ್ಥಾಪಿಸಿದ ಬೆಂಗಳೂರಿನ ಬಿಎಚ್‌ಇಎಲ್‌

ಬೆಂಗಳೂರು: ಇಷ್ಟು ದಿನ ಪಶ್ಚಿಮ ಬಂಗಾಳದ ಮೌಸುನಿಯು ಕತ್ತಲೆಯಿಂದ ಆವೃತಳಾಗಿದ್ದಳು. ಅವಳಿಗೆ ಬೆಳಕು ನೀಡುವುದು ಕಷ್ಟಕರವೆನಿಸಿತ್ತು. ಇಂತಹ ಸಂದಿಗ್ಧತೆಯಲ್ಲಿ ಮೌಸುನಿಗೆ ಬೆಳಕು ನೀಡಿದ ಗೌರವಕ್ಕೆ ನಮ್ಮ ಬೆಂಗಳೂರಿನ ಬಿಎಚ್‌ಇಎಲ್‌ ಪಾತ್ರವಾಗಿದೆ. ಇದು ಬರೀ ಬೆಳಕಲ್ಲ ಪರಿಸರ ಸ್ನೇಹಿ ಬೆಳಕು.

ಮೌಸುನಿ, ಬಂಗಾಳ ರಾಜ್ಯದ ಆಳ್ವಿಕೆಗೊಳಪಟ್ಟ ಒಂದು ಪುಟ್ಟ ದ್ವೀಪ. ಈ ದ್ವೀಪ ಸಂಪೂರ್ಣ ಕತ್ತಲೆಯಲ್ಲಿ ಮುಳುಗಿತ್ತು. ಅಲ್ಲಿಗೆ ವಿದ್ಯುತ್‌ ಹಾಯಿಸುವ ಕಾರ್ಯ ದುರ್ಬರವೆನ್ನಿಸಿತ್ತು. ಆದರೆ ಬೆಂಗಳೂರಿನ ಬಿಎಚ್‌ಇಎಲ್‌ ಅಲ್ಲಿ 105 ಕಿಲೋ ವ್ಯಾಟ್‌ ಸೋಲಾರ್‌ ವಿದ್ಯುತ್‌ ಘಟಕವೊಂದನ್ನು ಸ್ಥಾಪಿಸಿತು. ಈಗ ದ್ವೀಪದ ತುಂಬೆಲ್ಲ ಬೆಳಕು. ಇದು ದೇಶದ ಅತಿದೊಡ್ಡ ಸೌರಶಕ್ತಿ ವಿದ್ಯುತ್‌ ಘಟಕವಾಗಿದೆ.ಈ ಯೋಜನೆಯ ಹಿಂದೆ West Bengal Renewable Energy Development Agency ಸಹಯೋಗವಿದೆ.

ಇದರಿಂದ ಕೇವಲ ಮನೆ-ಮನೆಗಳಿಗೆ ಮಾತ್ರವಲ್ಲ ಶಾಲೆ, ಬೀದಿ ದೀಪ, ಸಣ್ಣ ಕಾರ್ಖಾನೆಗಳಿಗೂ ವಿದ್ಯುತ್‌ ಪೂರೈಸಲಾಗುತ್ತದೆ. ಈಗ ದ್ವೀಪದ ತುಂಬಾ ವಿದ್ಯುತ್‌ ಸಂಚಾರ. ಊರ ತುಂಬಾ ಸಡಗರವೇ ಸಡಗರ.

ಸ್ಮಾರ್ಟ್‌ಕಾರ್ಡ್‌ಗಳ ಮೂಲಕ ಜನರಿಗೆ ವಿದ್ಯುತ್‌ ಪೂರೈಸಲಾಗುತ್ತದೆ. ಅವಧಿ ಮುನ್ನ ಹಣ ಪಾವತಿ ಮಾಡುವ ಕ್ರಮವನ್ನು ಅಳವಡಿಸಲಾಗಿದೆ. ಮೀಟರ್‌ ಕರೆಘಂಟೆಯ ಮೂಲಕ ಪಾವತಿಯ ಹಣ ಮುಕ್ತಾಯಗೊಳ್ಳುವುದು ತಿಳಿಸುತ್ತದೆ. ಮುಂದಿನ ಐದು ವರ್ಷದ ನಿರ್ವಹಣೆಯ ಉಸ್ತುವಾರಿಯನ್ನು ಬಿಎಚ್‌ಇಎಲ್‌ ಪಡೆದಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X