ಕೃಷಿ ಚಟುವಟಿಕೆಗಳಿಗೆ ಬೆಂಬಲ; ಬಿತ್ತನೆ ಬೀಜಕ್ಕೆ 50 ಕೋಟಿ ರುಪಾಯಿ
ಕೃಷಿ ಚಟುವಟಿಕೆಗಳಿಗೆ ಬೆಂಬಲ; ಬಿತ್ತನೆ ಬೀಜಕ್ಕೆ 50 ಕೋಟಿ ರುಪಾಯಿ
23 ಜಿಲ್ಲೆಗಳಲ್ಲಿ ಒಳ್ಳೆಯ ಮಳೆ. ಗುಲ್ಬರ್ಗಾ, ರಾಯಚೂರಲ್ಲಿ ಕೊರತೆ
ರೈತರಿಗೆ ಸಕಾಲಕ್ಕೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಒದಗಿಸುವಂತೆ ಕೃಷಿ ಇಲಾಖೆಗೆ ಸೂಚಿಸುವಂತೆ ಅಭಿವೃದ್ಧಿ ಆಯುಕ್ತ ವಿಜಯ್ ಗೋರೆ ಅವರಿಗೆ ನಿರ್ದೇಶಿಸಲಾಗಿದೆ. ಬಿತ್ತನೆ ಬೀಜ ಪೂರೈಸಲು 50 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಉತ್ತಮ ಮಳೆ ಬಿದ್ದಿದೆ. 23 ಜಿಲ್ಲೆಗಳಲ್ಲಿ ಮಳೆಯ ವರದಿಗಳು ಉತ್ತಮವಾಗಿವೆ. ಆದರೆ ಗುಲ್ಬರ್ಗಾ, ಬೀದರ್ ಹಾಗೂ ತುಮಕೂರಿನ ಕೆಲವು ಪ್ರದೇಶಗಳಲ್ಲಿ ಮಳೆಯ ಕೊರತೆ ಉಂಟಾಗಿದೆ ಎಂದು ಧರ್ಮಸಿಂಗ್ ಹೇಳಿದರು. ಬಿತ್ತನೆ ಬೀಜ ಒದಗಿಸುವ ಕೆಲಸ ಕಾರ್ಯರೂಪದಲ್ಲಿರಬೇಕೇ ಹೊರತು ಕಾಗದದ ಮೇಲಲ್ಲ ಎಂದು ಅಧಿಕಾರಿಗಳಿಗೆ ಧರ್ಮಸಿಂಗ್ ಎಚ್ಚರಿಸಿದರು.
ಜಲಾಶಯಗಳಿಂದ ನೀರು ಬಿಡುಗಡೆ : ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸುವ ಕುರಿತು ಸೂಕ್ತ ನಿರ್ಣಯ ಕೈಗೊಳ್ಳಲು ಸಭೆ ನಡೆಸುವಂತೆ ಕೆಆರ್‌ಎಸ್, ಕಬಿನಿ ಹಾಗೂ ಹೇಮಾವತಿ ಜಲಾಶಯಗಳ ನಿಯಂತ್ರಣ ಸಮಿತಿಗಳಿಗೆ ಸೂಚಿಸಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಮಲ್ಲಿಕಾರ್ಜುನ ಖರ್ಗೆ ಬುಧವಾರ ತಿಳಿಸಿದರು.
(ಪಿಟಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications