ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು ಕೃಪೆಯಿಂದಾಗಿ ಬಾದಾಮಿ ‘ಅಗಸ್ತ್ಯ ತೀರ್ಥ’ದಿ ಲವಲವಿಕೆ

By Staff
|
Google Oneindia Kannada News

ಮುಂಗಾರು ಕೃಪೆಯಿಂದಾಗಿ ಬಾದಾಮಿ ‘ಅಗಸ್ತ್ಯ ತೀರ್ಥ’ದಿ ಲವಲವಿಕೆ
ಕೊಳವೆ ಬಾವಿಗಳಲ್ಲಿ ಮತ್ತೆ ನೀರು, ನಾಗರಿಕರಿಗೆ ನೆಮ್ಮದಿಯ ಉಸಿರು

ಬಾದಾಮಿ : ರಾಜ್ಯದ ಐತಿಹಾಸಿಕ ಕೇಂದ್ರಗಳಲ್ಲೊಂದಾದ ಬಾದಾಮಿಯ ಅಗಸ್ತ್ಯ ತೀರ್ಥದಲ್ಲೀಗ ಮತ್ತೆ ಗಂಗಾವತರಣ !

ಸತತ ಬರದಿಂದಾಗಿ ಎಂದೂ ತಳವನ್ನೇ ತೋರದ ಅಗಸ್ತ್ಯ ತೀರ್ಥ ಹೆಚ್ಚೂ ಕಡಿಮೆ ಒಣಗುವ ಸ್ಥಿತಿಗೆ ಬಂದಿತ್ತು . ಪವಿತ್ರ ಅಗಸ್ತ್ಯ ತೀರ್ಥ ಬರಿದಾಗುತ್ತಿರುವುದನ್ನು ನೋಡಿ ಸ್ಥಳೀಯ ಜನತೆ ಆತಂಕ ಪಡುತ್ತಿದ್ದರು. ಇಂಥ ಸಂಕಟದ ಸಮಯದಲ್ಲಿ ಮಳೆರಾಯ ಮುನಿಸು ತೊರೆದಿದ್ದಾನೆ ; ಚೆಂದದ ಮಾನ್ಸೂನ್‌ನಿಂದಾಗಿ ಅಗಸ್ತ್ಯ ತೀರ್ಥ ಮತ್ತೆ ಲಕಲಕಿಸುತ್ತಿದೆ.

ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿ, ಕನ್ನಡಿಗರ ಹೆಮ್ಮೆಯ ಸ್ಥಳಗಳಲ್ಲೊಂದು. ಇಲ್ಲಿನ ಅಗಸ್ತ್ಯ ತೀರ್ಥಕ್ಕೆ ಪೌರಾಣಿಕ ಐತಿಹ್ಯವಿದ್ದು , ಪಟ್ಟಣದ ಜೀವಸೆಲೆಗಳಲ್ಲಿ ಒಂದಾಗಿದೆ. ಒಂದಾನೊಂದು ಕಾಲದಲ್ಲಿ ಪಟ್ಟಣದ ಜನರ ಕುಡಿಯುವ ನೀರಿನ ಆಕರವೂ ಇದಾಗಿತ್ತು . ಆದರೆ, ಕಳೆದ ಮೂರು ವರ್ಷಗಳಲ್ಲಿ ಮಳೆಯ ಕೊರತೆಯಿಂದಾಗಿ ಅಗಸ್ತ್ಯ ತೀರ್ಥದ ತಳ ಕಂಡಿತ್ತು .

ಪ್ರಸ್ತುತ ಸುರಿಯುತ್ತಿರುವ ಮಳೆಯಿಂದಾಗಿ ಅಗಸ್ತ್ಯ ತೀರ್ಥ ಭರ್ತಿಯಾಗಿದೆ. ಅಗಸ್ತ್ಯ ತೀರ್ಥದ ಸುತ್ತಮುತ್ತಲ ಪ್ರದೇಶದ ಅಂತರ್ಜಲ ಕೂಡ ವೃದ್ಧಿಯಾಗಿದ್ದು , ಕೊಳವೆ ಬಾವಿಗಳಲ್ಲಿ ಮತ್ತೆ ನೀರು ಕಾಣಿಸಿಕೊಂಡಿದೆ. ಅಗಸ್ತ್ಯ ತೀರ್ಥವನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಬೇಕು ಹಾಗೂ ನೀರಿನ ಸೂಕ್ತ ಬಳಕೆಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪಟ್ಟಣದ ನಾಗರಿಕರು ಸ್ಥಳೀಯ ಆಡಳಿತವನ್ನು ಒತ್ತಾಯಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X