ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಮನವಿ ಆಲಿಸಿದ ಗೋವಾ: ವಾಸ್ಕೋ ಕಾರ್ಯಾಚರಣೆ ಸ್ಥಗಿತ

By Staff
|
Google Oneindia Kannada News

ಕರ್ನಾಟಕದ ಮನವಿ ಆಲಿಸಿದ ಗೋವಾ: ವಾಸ್ಕೋ ಕಾರ್ಯಾಚರಣೆ ಸ್ಥಗಿತ
ಗೋವಾ ಸರಕಾರಕ್ಕೆ ಪಾಠ ಕಲಿಸಲು ಬೆಳಗಾವಿ ಕನ್ನಡ ಸಂಘಟನೆಗಳ ಚಿಂತನೆ

ವಾಸ್ಕೋ: ಗೋವಾದ ವಾಸ್ಕೋದಲ್ಲಿನ ಬಯಾನ ಬೀಚ್‌ ಅಭಿವೃದ್ಧಿ ನೆಪದಲ್ಲಿ ಕನ್ನಡಗಿರನ್ನು ಒಕ್ಕಲೆಬ್ಬಿಸುತ್ತಿದ್ದ ಅಲ್ಲಿನ ಸರಕಾರ ಕರ್ನಾಟಕ ರಾಜ್ಯದ ಮನವಿ ಮೇರೆಗೆ ತನ್ನ ಕಾರ್ಯಾಚರಣೆಯನ್ನು ಸ್ಥಗಿತ ಗೊಳಿಸಿದೆ.

ಕಳೆದ ಮೂರು ದಿನದಿಂದ ಸೂರು ಕಳೆದುಕೊಂಡವರ ಗತಿ ಅಧೋಗತಿಯಾಗಿದೆ. ಬೀದಿ ಪಾಲಾದವರಿಗೆ ಸರಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸದ ಕಾರಣ ಅವರು ತೀವ್ರವಾಗಿ ಸುರಿಯುತ್ತಿರುವ ಮಳೆಯಲ್ಲಿ ಸೊರಗಿದ್ದಾರೆ. ಹೊಟ್ಟೆಗೆ ಊಟವಿಲ್ಲದೆ ದಿಕ್ಕೆಟ್ಟು ಹೋಗಿದ್ದಾರೆ.

ಪ್ರಸ್ತುತ ಕಾರ್ಯಚರಣೆ ತಾತ್ಕಲಿಕವಾಗಿ ಸ್ಥಗಿತಗೊಂಡಿದೆ. ಇನ್ನೆರಡು ದಿನಗಳಲ್ಲಿ ಸರಕಾರ ಮತ್ತೆ ಆರಂಭಿಸಬಹುದು ಎಂದು ಸ್ಥಳೀಯ ಕನ್ನಡ ಸಂಘಟನೆಗಳು ಸಂಶಯ ವ್ಯಕ್ತಪಡಿಸಿವೆ. ಉತ್ತರ ಕರ್ನಾಟಕ ಮತ್ತು ಗೋವಾದ ಕನ್ನಡ ಪರ ಸಂಘಟನೆಗಳು ಈ ನಿರಾಶ್ರಿತರ ಸಹಾಯಕ್ಕೆ ನೆರವಾಗುವಂತೆ ಜನತೆಗೆ ಮನವಿ ಮಾಡಿವೆ.

ಈ ನಡುವೆ ತೀವ್ರ ಕೋಪಗೊಂಡಿರುವ ಬೆಳಗಾವಿ ಕನ್ನಡ ಸಂಘಟನೆಗಳು ಗೋವಾಕ್ಕೆ ಸರಾಬರಾಜು ಆಗುತ್ತಿರುವ ಅಗತ್ಯ ವಸ್ತುಗಳನ್ನು ತಡೆಹಿಡಿಯಲು ಚಿಂತನೆ ನಡೆಸಿವೆ. ಆ ಮೂಲಕ ಗೋವಾ ಸರಕಾರಕ್ಕೆ ಬಿಸಿ ಮುಟ್ಟಿಸಲು ಅವರು ನಿರ್ಧರಿಸುತ್ತಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಗೋವಾ:ನೆಲೆ ಕಳಕೊಂಡ ನೂರಾರು ಕನ್ನಡಿಗರು! ರಾಜ್ಯಗಮನಿಸುತ್ತಿದೆ
ಗೋವಾ ಸರ್ಕಾರದ ಕ್ರಮ : ಸಹಸ್ರಾರು ಕನ್ನಡಿಗರು ಬೀದಿ ಪಾಲು

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X