ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು-ಮುಂಬಯಿ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲು ಅಪಘಾತ

By Staff
|
Google Oneindia Kannada News

ಮಂಗಳೂರು-ಮುಂಬಯಿ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲು ಅಪಘಾತ
ರಾಯ್‌ಘಡ್‌ ಬಳಿ ಹಳಿ ಮೇಲೆ ಬಿದ್ದಿದ್ದ ಬಂಡೆಗೆ ಢಿಕ್ಕಿ ಹೊಡೆದುರುಳಿದ ರೈಲು

ಮುಂಬಯಿ: ಮಂಗಳೂರು-ಮುಂಬಯಿ ಮತ್ಸ್ಯಗಂಧ ವೇಗದೂತ ರೈಲು ಹಳಿಗೆ ಬಿದ್ದಿದ್ದ ಬಂಡೆಗೆ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ.

ಸಂಬಂಧ ಪಟ್ಟವರು ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಗಳಿಗೆ ಸಂಪರ್ಕಿಸಬಹುದು: 022-27579938/39 ಯಾ 27572685 ಮತ್ತು 0832-2703950

ಜೂನ್‌16ರ ಬುಧವಾರ ಮುಂಜಾನೆ ಸುಮಾರು 6:00 ಗಂಟೆಗೆ ಮಹರಾಷ್ಟ್ರದ ರಾಯ್‌ಘಡ್‌ಜಿಲ್ಲೆಯ ರೋಹಾದ ಕರಂಜಾಡಿ ಮತ್ತು ವೀರ್‌ ಮಧ್ಯೆ ಈ ದುರಂತ ಸಂಭವಿಸಿದೆ.

ಕರಾವಳಿಯಲ್ಲಿ ತೀವ್ರವಾಗಿ ಸುರಿಯುತ್ತಿರುವ ಮಳೆಯಿಂದ ಬಂಡೆಗಳು ಹಳಿ ಮೇಲೆ ಉರುಳಿವೆ. ಹಳಿ ಮೇಲೆ ಬಿದ್ದಿದ್ದ ಈ ಬಂಡೆ ಕಲ್ಲಿಗೆ ಕೊಂಕಣ ರೈಲು ಢಿಕ್ಕಿ ಹೊಡೆದ ಪರಿಣಾಮ 11 ಬೋಗಿಗಳು ಹಳಿತಪ್ಪಿ ಸೇತುವೆ ಬಳಿ ಉರುಳಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಮತ್ತು ಪರಿಹಾರ ತಂಡಗಳು ಸ್ಥಳಕ್ಕೆ ಧಾವಿಸಿವೆ. ಗಾಯಾಳುಗಳಿಗೆ ಚಿಕಿತ್ಸೆ ಮತ್ತು ರಕ್ಷಣಾ ಕಾರ್ಯ ಸಾಗುತ್ತಿದೆ. ಒಂದು ರೈಲು ಹಾಗು ವ್ಯಾನುಗಳನ್ನು ಪರಿಹಾರ ಕಾರ್ಯದಲ್ಲಿ ನಿಯೋಜಿಸಲಾಗಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ದುರಂತಕ್ಕೆ ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್‌ ಯಾದವ್‌ ತೀವ್ರ ಖೇದ ವ್ಯಕ್ತಪಡಿಸಿದ್ದಾರೆ. ಅವರು ಇಂದು ಘಟನಾ ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಿದೆ. ಈ ದುರಂತದಲ್ಲಿ ಮೃತ ಪಟ್ಟವರ ಕುಟುಂಬಕ್ಕೆ ಒಂದು ಲಕ್ಷ ಮತ್ತು ತೀವ್ರ ಗಾಯಗೊಂಡವರಿಗೆ 25,000 ರೂಪಾಯಿ ಪರಿಹಾರ ನಿಧಿಯನ್ನು ಅವರು ಘೋಶಿಸಿದ್ದಾರೆ.

(ಪಿಟಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X