ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಜೂ. 11ರಿಂದ ಹೂಗಳ ‘ನಿಸರ್ಗೋತ್ಸವ’

By Staff
|
Google Oneindia Kannada News

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಜೂ. 11ರಿಂದ ಹೂಗಳ ‘ನಿಸರ್ಗೋತ್ಸವ’
ನಗರದ ಬ್ಲೂವಿಂಗ್‌ ಬಡ್‌ ನಿಸರ್ಗ ಫೌಂಡೇಷನ್‌ ನಿಸರ್ಗೋತ್ಸವ-2004

ಬೆಂಗಳೂರು: ಕೈ ಮುಗಿದು ಒಳಗೆ ಬಾ, ಇದು ಸಸ್ಯಕಾಶಿ ಎಂಬ ಸಾಲನ್ನು ಎಲ್ಲೋ ಓದಿದಂತಿದೆ. ಅಲ್ಲವೇ? ಹೌದು ಇದು ಲಾಲ್‌ಬಾಗ್‌ನ ಮುಖ್ಯ ದ್ವಾರಗಳಲ್ಲಿರುವ ಸಾಲುಗಳು. ಈ ಸಸ್ಯಕಾಶಿಯಲ್ಲೀಗ ಪುಷ್ಪರಾಶಿಯಾಗಲಿದೆ. ಹೆಸರಿಗೆ ತಕ್ಕಂತೆ ಬೆಂದಕಾಳೂರು, ಬಹುದಿನಗಳಿಂದ ಜನರನ್ನು ಬಿಸಿಲ ಬೇಗೆಯಿಂದ ತಪಿಸುವಂತೆ ಮಾಡಿತ್ತು. ಆದರೆ ವರುಣನ ಕೃಪೆಯೋ ಅವಕೃಪೆಯೋ ತಿಳಿದಿಲ್ಲ; ಒಟ್ಟಿನಲ್ಲಿ ಎಲ್ಲೆಡೆಯೂ ತಂಪು; ಮಣ್ಣಿನ ಕಂಪು.

ಮಳೆಯಿಂದ ನಾನಾ ಅನಾಹುತಗಳು ನಗರದ ಹಲವೆಡೆ ಸಂಭವಿಸಿದರೂ ಪರಿಸ್ಥಿತಿ ಈಗ ಒಂದು ಹಂತಕ್ಕೆ ಬಂದು ತಲುಪಿದೆ. ರಸ್ತೆಯ ಇಕ್ಕೆಲಗಳ ಮರಗಳು ಹಸಿರ ಸೀರೆಯುಟ್ಟು ಕಂಗೊಳಿಸುತ್ತಿವೆ. ಬೆಂಗಳೂರಿಗರು ಸಹಜ ತಂಗಾಳಿ, ಹೂಗಳ ಮೌನ ಸೌಂದರ್ಯವನ್ನು ಸವಿಯಲು ನಗರದ ಬ್ಲೂವಿಂಗ್‌ ಬಡ್‌ ನಿಸರ್ಗ ಫೌಂಡೇಷನ್‌ ನಿಸರ್ಗೋತ್ಸವ-2004 ಎಂಬ ಪಲ ಪುಷ್ಪ ಪ್ರದರ್ಶನವನ್ನು ಲಾಲ್‌ಬಾಗ್‌ ಸಸ್ಯಕಾಶಿಯಲ್ಲಿ ಹಮ್ಮಿಕೊಂಡಿದೆ.

ಜೂನ್‌ 11ರಂದು ಡಾ. ಎಚ್‌.ಎಂ. ಮರೀಗೌಡ ಸ್ಮಾರಕ ಭವನದಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು ಪಾರ್ವತಮ್ಮ ರಾಜಕುಮಾರ್‌ ಹಾಗೂ ಚಿತ್ರನಟ ಪುನಿತ್‌ ರಾಜ್‌ಕುಮಾರ್‌ ಉದ್ಘಾಟನೆ ನೆರವೇರಿಸಲಿದ್ದಾರೆ. ಲಾಲ್‌ಬಾಗ್‌ ತೋಟಗಾರಿಕೆ ನಿರ್ದೇಶಕ ಡಾ. ಎಸ್‌.ವಿ. ಹಿತ್ತಲಮನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ತನ್ನಂದದಲಿ ಪುಷ್ಪ ಮಕರಂದವನೆ ಚೆಲ್ಲಿ.. ಕ್ಷಣಕಾಲ ಜೀವನವ ನಡೆಸಿತ್ತು.. ಎಂಬ ಕವನದ ಸಾಲಿನಂತೆ, ತಮ್ಮ ಕ್ಷಣಕಾಲದ ಜೀವನದಲ್ಲಿ ನೋಡುಗರ, ಮುಡಿಯುವವರ ಮನತಣಿಸಲು ಕಾದು ನಿಂತಿವೆ ಹೂಗಳು. ಜೂನ್‌ 13ರ ವರೆಗೆ ಈ ಹೂಗಳು ನಿಮಗಾಗಿ ಕಾದು ನಿಲ್ಲಲಿದೆ. ಖಂಡಿತ ಒಮ್ಮೆ ಹೋಗಿ ಬನ್ನಿ. ನಗರ ಜೀವನದ ಜಂಜಾಟದ ಬದುಕಲ್ಲೂ ಸಂಜೆಯ ಹೊತ್ತಿನಲ್ಲಿ ಒಂದು ಪುಟ್ಟ ರಿಲ್ಯಾಕ್ಸ್‌ ಇರಲಿ!

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X