ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾದರಿ ವಿವಾದ: ಸಂಪುಟ ಸಚಿವರ ಪಟ್ಟಿಗೆ ಜೂನ್‌4ರ ಸಂಜೆ ಮೋಕ್ಷ

By Staff
|
Google Oneindia Kannada News

ಮಾದರಿ ವಿವಾದ: ಸಂಪುಟ ಸಚಿವರ ಪಟ್ಟಿಗೆ ಜೂನ್‌4ರ ಸಂಜೆ ಮೋಕ್ಷ
ಅಹ್ಮದ್‌ ಪಟೇಲ್‌-ದೇವೇಗೌಡ ಮಹತ್ವದ ಮಾತುಕತೆ

ನವದೆಹಲಿ : ಜಾತ್ಯತೀತ ಜನತಾದಳ ನೀಡಿದ ಗಡುವಿನಿಂದ ಕಾರ್ಯಪ್ರವೃತ್ತರಾದ ಕಾಂಗ್ರೆಸ್‌ ಸಂಪುಟ ರಚನೆಯ ಕುರಿತು ಗಂಭೀರ ಪ್ರಯತ್ನ ನಡೆಸಿದೆ. ಈ ಬೆಳವಣಿಗೆಯಿಂದ ಜೂನ್‌4ರ ಶುಕ್ರವಾರ ಸಚಿವ ಸಂಪುಟ ಸದಸ್ಯರ ಅಂತಿಮ ಪಟ್ಟಿ ಹೊರಬೀಳುವ ಸಾಧ್ಯತೆಯಿದೆ.

ನೀಡಿದ ವಚನಕ್ಕೆ ಬದ್ಧರಾಗಿ ಹೊಂದಾಣಿಕೆ ಮಾಡಿಕೊಳ್ಳಿ ಎಂದು ರಾಜ್ಯ ಕಾಂಗ್ರೆಸ್‌ ಮುಖಂಡರಿಗೆ ಸೋನಿಯಾಗಾಂಧಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ, ಮುಖ್ಯಮಂತ್ರಿ ಧರ್ಮ ಸಿಂಗ್‌, ವಿಲಾಸ್‌ರಾವ್‌ ದೇಶ್‌ಮುಖ್‌ ಮತ್ತು ಅಹ್ಮದ್‌ ಪಟೇಲ್‌ ನಡುವೆ ಮಾತುಕತೆ ನಡೆದಿದೆ.

ಆ ಬಳಿಕ ರಾತ್ರಿ ನಡೆದ ಕಾಂಗ್ರೆಸ್‌ ಪಕ್ಷದ ಮಾತುಕತೆಯಲ್ಲಿ ಮಹರಾಷ್ಟ್ರ ಮಾದರಿ ವಿವಾದವನ್ನು ಬಗೆಹರಿಸಿಕೊಂಡಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಈ ತೀರ್ಮಾನಕ್ಕೆ ದೇವೇಗೌಡ ಅವರಿಂದ ಅಸ್ತು ಪಡೆದ ಬಳಿಕ ಉಭಯ ಪಕ್ಷಗಳ ಸಂಪುಟ ಸದಸ್ಯರ ಪಟ್ಟಿ ಪ್ರಕಟವಾಗಲಿದೆ.

ಪೂಜಾರಿ ಅಪಸ್ವರ :

ನಾವು ವಿರೋಧ ಪಕ್ಷದಲ್ಲಿ ಬೇಕಾದರೂ ಕೂತೇವು. ಆದರೆ ಈ ಮಾದರಿ ಒಪ್ಪಿಕೊಳ್ಳುವುದು ಅಸಾಧ್ಯ. ಅವರ ಬೆದರಿಕೆಗೆ ಮಣಿಯುವ ಪ್ರಶ್ನೆಯೇ ಇಲ್ಲ. ಅವರು ಸರಕಾರದಿಂದ ಹೊರಬಂದರೆ ಬರಲಿ. ನಾವು-ಅವರು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಮಹರಾಷ್ಟ್ರದ ಜೊತೆ ಕರ್ನಾಟಕವನ್ನು ಹೋಲಿಸಬಾರದು. ಅಲ್ಲಿ ಎನ್‌ಸಿಪಿಗೆ ಕಾಂಗ್ರೆಸ್‌ಗಿಂತ ಹೆಚ್ಚಿನ ಎಂಎಲ್‌ಸಿ ಇದ್ದಾರೆ. ಇಲ್ಲಿ ಜೆಡಿಎಸ್‌ ಕೇವಲ 7 ಎಂಎಲ್‌ಸಿ ಹೊಂದಿದ್ದಾರೆ ಎಂದು ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X