ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

14ನೇಲೋಕಸಭೆ ಆರಂಭ: ಹೊಸ ಸದಸ್ಯರ ಪ್ರಮಾಣವಚನ ಸ್ವೀಕಾರ

By Staff
|
Google Oneindia Kannada News

14ನೇಲೋಕಸಭೆ ಆರಂಭ: ಹೊಸ ಸದಸ್ಯರ ಪ್ರಮಾಣವಚನ ಸ್ವೀಕಾರ
14ನೇಲೋಕಸಭೆಯಲ್ಲಿ ಕಾಂಗ್ರೆಸ್‌,ಬಿಜೆಪಿ ಸ್ಥಾನ ಪಲ್ಲಟ

ನವದೆಹಲಿ: ಹದಿನಾಲ್ಕನೇ ಲೋಕಸಭೆಯ ಮೊದಲ ಅಧಿವೇಶನ ಜೂನ್‌02ರ ಬುಧವಾರ ಆರಂಭವಾಯಿತು. ಹಂಗಾಮಿ ಸ್ಪೀಕರ್‌ ಸೋಮನಾಥ ಚಟರ್ಜಿ ಸದನದ ಘನತೆಯನ್ನು ಎತ್ತಿಹಿಡಿದು ಸಂಸದೀಯ ಪ್ರಜಾಸತ್ತತೆಯ ಬೇರುಗಳನ್ನು ಬಲ ಪಡಿಸುವಂತೆ ನೂತನ ಸದಸ್ಯರಿಗೆ ಮನವಿ ಮಾಡಿದರು.

ರಾಷ್ಟ್ರಪತಿ ಅಬ್ದುಲ್‌ ಕಲಾಂ ಹಂಗಾಮಿ ಸ್ಪೀಕರ್‌ ಸೋಮನಾಥ ಚಟರ್ಜಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ರಕ್ಷಣಾ ಸಚಿವ ಪ್ರಣಬ್‌ ಮುಖರ್ಜಿ, ಪ್ರತಿಪಕ್ಷದ ನಾಯಕ ಎಲ್‌.ಕೆ. ಅಡ್ವಾಣಿ, ಸೋನಿಯಾಗಾಂಧಿ,ಮಾಜಿ ಪ್ರಧಾನಿಗಳಾದ ಅಟಲ್‌ ಬಿಹಾರಿ ವಾಜಪೇಯಿ, ದೇವೇಗೌಡ ಪ್ರಮಾಣ ವಚನ ಸ್ವೀಕರಿಸಿದ ಪ್ರಮುಖರು.

ಹಿಂದಿನ ಲೋಕಸಭೆಯಲ್ಲಿ ಪ್ರತಿ ಪಕ್ಷವಾಗಿದ್ದ ಕಾಂಗ್ರೆಸ್‌ಮತ್ತು ಮಿತ್ರ ಪಕ್ಷಗಳು ಆಡಳಿತ ಸ್ಥಾನ ಅಲಂಕರಿಸಿದರೆ, ಬಿಜೆಪಿ ಪ್ರತಿಪಕ್ಷದಲ್ಲಿ ಕುಳಿತುಕೊಂಡಿತು. ಡಿಎಂಕೆ ಹಿಂದಿನ ಸಲವೂ ಆಡಳಿತ ಮಿತ್ರಪಕ್ಷವಾಗಿತ್ತು. ರೇಣುಕಾ ಚೌಧರಿ ಈ ಸಲವೂ ಆಡಳಿತ ಸ್ಥಾನದಲ್ಲೇ ಉಳಿದುಕೊಂಡರು. ಲಾಲೂ, ಪವಾರ್‌, ಮನಮೋಹನ್‌ ಸಿಂಗ್‌, ಪ್ರಣಬ್‌, ಸೋನಿಯಾ ಆಡಳಿತರೂಢದ ಮೊದಲ ಬೆಂಚಿನಲ್ಲಿ ಕುಳಿತರು. ಅಡ್ವಾಣಿ ಮತ್ತು ವಾಜಪೇಯಿ ವಿರೋಧ ಪಕ್ಷದ ಮೊದಲ ಸ್ಥಾನದಲ್ಲಿ ಕುಳಿತ ಪ್ರಮುಖರು.

ಸದನದಲ್ಲಿ ಪ್ರಮುಖ ಮಾಜಿ ಸಚಿವರು ನಾಪತ್ತೆಯಾಗಿ, ಹೊಸ ಮುಖಗಳೇ ಕಂಗೊಳಿಸುತ್ತಿದ್ದವು. ನೆಹರು ಮನೆತನದ ನಾಲ್ಕನೇ ತಲೆಮಾರಾದ ರಾಹುಲ್‌ ಗಾಂಧಿ, ಅತಿ ಕಿರಿಯ ಸಂಸದ ಸಚಿನ್‌ ಪೈಲೆಟ್‌, ಚಿತ್ರ ತಾರೆಯರಾದ ಸುನಿಲ್‌ ದತ್ತ್‌, ಗೋವಿಂದ, ಜಯಪ್ರದಾ, ವಿನೋದ್‌ ಖನ್ನಾ, ಧರ್ಮೇಂದ್ರ, ಕ್ರಿಕೆಟ್‌ ಪಟು ಸಿದ್ದು ಕ್ಯಾಮರಾದ ಕಣ್‌ಸೆಳೆದ ಪ್ರಮುಖರು.

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X