ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ಕೈಗೊಂಡರು ನಿರ್ಧಾರ ; ಧರ್ಮಸಿಂಗ್‌ ನೇತೃತ್ವದ ಸರಕಾರ

By Staff
|
Google Oneindia Kannada News

ಕೊನೆಗೂ ಕೈಗೊಂಡರು ನಿರ್ಧಾರ ; ಧರ್ಮಸಿಂಗ್‌ ನೇತೃತ್ವದ ಸರಕಾರ
15 ದಿನಗಳ ಕಸರತ್ತಿಗೆ ಅಂತ್ಯ :ಉಪ ಮುಖ್ಯಮಂತ್ರಿ ಗದ್ದುಗೆಗೆ ಸಿದ್ಧರಾಮಯ್ಯ

ಬೆಂಗಳೂರು : ರಾಜ್ಯದ ನೂತನ ಸರ್ಕಾರದ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನ ಧರ್ಮಸಿಂಗ್‌ ಹಾಗೂ ಉಪ ಮಖ್ಯಮಂತ್ರಿಯಾಗಿ ಜಾತ್ಯಾತೀತ ಜನತಾದಳದ ಸಿದ್ಧರಾಮಯ್ಯ ಮೇ 28 ರಂದು (ಇಂದು) ಮಧ್ಯಾಹ್ನ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಹದಿನೈದು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಚದುರಂಗದಾಟದಲ್ಲಿ ಕೊನೆಗೂ ಧರ್ಮಸಿಂಗ್‌ ಗೆದ್ದಿದ್ದಾರೆ. ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿಯೇ ಸಿದ್ಧ ಎಂದು ಹೇಳಿ ಹೇಳಿ ಅಂತಿಮವಾಗಿ ಉಪ ಮುಖ್ಯಮಂತ್ರಿಯ ಪಟ್ಟದಲ್ಲಿ ಕೂರಲು ಒಪ್ಪಿದ್ದಾರೆ. ಸಿದ್ಧರಾಮಯ್ಯನವರನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಒಪ್ಪಿಸಲು ಪಕ್ಷದ ನಾಯಕರು ಹರಸಾಹಸ ಮಾಡಿದ್ದಾರೆ.

ಪ್ರಮಾಣ ವಚನ ಸ್ವೀಕಾರವನ್ನು ಮೇ 28ರ ಮಧ್ಯಾಹ್ನ 1.15ರಿಂದ 1.30ರ ನಡುವಿಗ ಶುಭಗಳಿಗೆಯಲ್ಲಿ ನಿಗದಿಗೊಳಿಸಲಾಗಿದೆ. ಇನ್ನೆರಡು ದಿನಗಳ ನಂತರ ಉಳಿದ ಸಚಿವರ ನೇಮಕವಾಗಲಿದೆ. ಮಹಾರಾಷ್ಟ್ರ ಮಾದರಿಯ ಸರ್ಕಾರ ರಚನೆ ಮಾಡುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ. ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಉಪಮುಖ್ಯಮಂತ್ರಿ ಮತ್ತು ವಿಧಾನಸಭಾ ಅಧ್ಯಕ್ಷ ಸ್ಥಾನಗಳ ಜತೆ ಗೃಹ, ಹಣಕಾಸು, ನೀರಾವರಿ, ವಿದ್ಯುತ್‌, ಉನ್ನತ ಶಿಕ್ಷಣ ಮೊದಲಾದ ಪ್ರಮುಖ ಖಾತೆಗಳನ್ನೂ ಹೊಂದಿದೆ. ಇವೆಲ್ಲವೂ ಇಲ್ಲಿ ನಮಗೆ ನೀಡಲು ಸಭೆಯಲ್ಲಿ ಕಾಂಗ್ರೆಸ್‌ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಜೆಡಿ(ಎಸ್‌)ನ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X