ವಿದೇಶಿ ಪ್ರವಾಸಿಗರ ಕೊಲೆ- ಅತ್ಯಾಚಾರ ತಡೆಗೆ ‘ಟೂರಿಸ್ಟ್ ಕಾರ್ಡ್’
ವಿದೇಶಿ ಪ್ರವಾಸಿಗರ ಕೊಲೆ- ಅತ್ಯಾಚಾರ ತಡೆಗೆ ‘ಟೂರಿಸ್ಟ್ ಕಾರ್ಡ್’
ಅತಿಥಿ ದೇವೋಭವ ಮಂತ್ರ ಸದ್ಯದಲ್ಲೇ ಎಲ್ಲೆಡೆ ಮೊಳಗಲಿದೆ !
ವಿದೇಶಿ ಪ್ರವಾಸಿಗರಿಗೆ ಕಾರ್ಡ್ ನೀಡುವ ಕುರಿತು ಕಾನೂನು ಸಚಿವಾಲಯವನ್ನು ಸಂಪರ್ಕಿಸಲಾಗಿದೆ. ಈ ಕಾರ್ಡ್ ಮೂಲಕ ವಿದೇಶಿ ಪ್ರವಾಸಿಗರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಬಹುದು. ಸ್ಥಳೀಯ ಪ್ರಾಧಿಕಾರಗಳು ವಿದೇಶಿ ಪ್ರವಾಸಿಗರ ಚಲನವಲಗಳ ಮೇಲೆ ನಿಗಾ ಇಡಲು ಪ್ರವಾಸಿ ಕಾರ್ಡ್‌ಗಳು ನೆರವು ನೀಡುವುದರಿಂದ, ಪ್ರವಾಸಿಗರ ಸುರಕ್ಷತೆ ಸಾಧ್ಯವಾಗುತ್ತದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವೆ ರೇಣುಕಾ ಚೌಧರಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಟೂರಿಸ್ಟ್ ಕಾರ್ಡ್, ಪ್ರವಾಸಿಗರ ಪರಿಚಯ ಪತ್ರವಾಗಿರುತ್ತದೆ. ಪ್ರವಾಸಿಗರ ಬೆರಳ ಮುದ್ರೆ ಹಾಗೂ ಛಾಯಾಚಿತ್ರವನ್ನು ಒಳಗೊಂಡಿರುತ್ತದೆ. ಇದರಿಂದಾಗಿ ದೇಶದೊಳಗೆ ಸಂಚರಿಸುವ ಪ್ರವಾಸಿಗರು ಎಲ್ಲೆಡೆಯೂ ತಮ್ಮ ಪಾಸ್‌ಪೋರ್ಟ್ ಒಯ್ಯುವುದು ತಪ್ಪುತ್ತದೆ ಎಂದು ಚೌಧರಿ ಹೇಳಿದರು.
ಅತಿಥಿಗಳನ್ನು ದೇವರೆಂದು ಪರಿಗಣಿಸುವ ಭಾರತೀಯ ಸಂಸ್ಕೃತಿಯ ತತ್ವಗಳನ್ನು ಜನರಲ್ಲಿ ಪುನರುಜ್ಜೀವನಗೊಳಿಸಲು ಸಚಿವಾಲಯ ವ್ಯಾಪಕ ಕ್ರಮ ಕೈಗೊಳ್ಳಲಿದೆ ಎಂದೂ ರೇಣುಕಾ ಚೌಧರಿ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು