ಭಾರತದಲ್ಲಿ ಬದಲಾವಣೆಯ ಪರ್ವ ಆರಂಭ : ಮನಮೋಹನಸಿಂಗ್
ಭಾರತದಲ್ಲಿ ಬದಲಾವಣೆಯ ಪರ್ವ ಆರಂಭ : ಮನಮೋಹನಸಿಂಗ್
ಕಾಂಗ್ರೆಸ್ ಯಜಮಾನಿಕೆಯ ಮೈತ್ರಿಕೂಟದ ನೂತನ ಸರಕಾರ ಮೇ. 22ರ ಶನಿವಾರ ಅಸ್ಥಿತ್ವಕ್ಕೆ
ಮನಮೋಹನ್ ಸಿಂಗ್ ಮೇ 20ರ ಗುರುವಾರ ನವದೆಹಲಿಯಲ್ಲಿ ಮಾಧ್ಯ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು ಹೀಗಿವೆ :
ಸರಕಾರದ ಪ್ರಮುಖ ಧ್ಯೇಯೋದ್ದೇಶಗಳು :
-ಮೈತ್ರಿಕೂಟ ಅಂಗೀಕರಿಸಿದ ಸಾಮನ್ಯ ಕನಿಷ್ಠ ಕಾರ್ಯಕ್ರಮದಂತೆ ಆಡಳಿತ.
-ಜಾತ್ಯತೀತ ಆಧಾರಿತ ಸರಕಾರ. ಶೋಷಣೆ ಮತ್ತು ಆಂತರಿಕ ಯುದ್ಧಕ್ಕೆ ಆಸ್ಪದವಿಲ್ಲ.
-ಸರಕಾರ ದ್ವಿಕೇಂದ್ರೀಕೃತ ಆಡಳಿತವಲ್ಲ. ಮೈತ್ರಿಕೂಟದ ಸರಕಾರ. ಸೋನಿಯಾ ಗಾಂಧಿ ಹಿತೈಷಿ- ಮಾರ್ಗದರ್ಶಿ. -ಮೈತ್ರಿಕೂಟವು ಐದು ವರ್ಷಗಳ ಕಾಲ ಸಧೃಡ ಮತ್ತು ಸ್ಥಿರ ಸರಕಾರ ನಿಡುವುದು. ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಮೈತ್ರಿಕೂಟದ ನಡುವಿನ ಬಾಂಧವ್ಯ ಸುಭದ್ರ.
-ಸರ್ವಶಿಕ್ಷಣ, ಎಲ್ಲರಿಗೂ ಆರೋಗ್ಯ, ಕೊಳಚೆ ನಿವಾಸಿಗಳಿಗೆ ಮನೆ, ಪರಿಸರದ ಅಭಿವೃದ್ಧಿ ಮತ್ತು ಕೃಷಿ ಚಟುವಟಿಕೆಗಳಿಗೆ ಉತ್ತೇಜನ .
ಖಾಸಗೀಕರಣ :
-ಹಿಂದಿನ ಸರಕಾರ ಉದ್ದೇಶಿಸಿದ್ದ ಒಎನ್‌ಜಿಸಿ (ಣಘಎಇ) ಮತ್ತು ಜಿಎಐಎಲ್ (ಎಅಐಔ0) ಸಂಸ್ಥೆಗಳ ಖಾಸಗೀಕರಣವಿಲ್ಲ.
-ಖಾಸಗಿಕರಣವು ನಮ್ಮ ಸಿದ್ಧಾಂತದ ಭಾಗವಲ್ಲ. ಭಾರತಕ್ಕೆ ಬಲಶಾಲಿಯಾದ ಖಾಸಗಿ ವಲಯದಷ್ಟೇ ಸಾರ್ವಜನಿಕ ಉದ್ದಿಮೆ ಅವಶ್ಯ.
-ಬ್ಯಾಂಕ್‌ಗಳನ್ನು ಯಾವುದೇ ಕಾರಣಕ್ಕೆ ಖಾಸಗಿಗೊಳಿಸುವುದಿಲ್ಲ. ಅಧಿಕ ಉದ್ಯೋಗಿಗಳನ್ನು ಹೊರದಬ್ಬುವ ನಿರ್ಣಯಗಳನ್ನು ಕೈಗೊಳ್ಳುವುದಿಲ್ಲ.
-ಇತರ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವುದು ಪಿಎಸ್‌ಯು (ಕಖಖಿಠ) ನಿರ್ಣಯಕ್ಕೆ ಬಿಡಲಾಗುವುದು. ಸಾರ್ವಜನಿಕ ವಲಯದ ಉದ್ದಿಮೆಗಳು ಖಾಸಗಿ ಉದ್ದಿಮೆಗಳಿಗೆ ಸ್ಪರ್ಧೆ ಒಡ್ಡುವಂತೆ ಮಾಡುವುದು. ಅವರ ಸಮಾನ ನಿಲ್ಲುವಂತೆ ಮಾಡುವುದು. ಎಲ್ಲಕ್ಕಿಂತ ಮುಖ್ಯ ಕಾರ್ಮಿಕರ ಹಿತಾಸಕ್ತಿ.
-ಸಾರ್ವಜನಿಕ ಉದ್ದಿಮೆಯನ್ನು ಆಂತರಿಕ ಮತ್ತು ವಿದೇಶದಲ್ಲಿ ಖಾಸಗಿ ವಲಯಕ್ಕೆ ಪ್ರತಿಸ್ಪರ್ಧೆ ನೀಡುವಂತೆ ಬೆಳಸಲು ಪ್ರಯತ್ನ.
ಆರ್ಥಿಕತೆ :
-ಮಾನವೀಯ ಮೌಲ್ಯ ಆಧಾರಿತ ಆರ್ಥಿಕ ಸುಧಾರಣೆಗಳಿಗೆ ಮಹತ್ವ.
-ಅಭಿವೃದ್ಧಿಯು ಪ್ರಮುಖ ಆರ್ಥಿಕ ವಿಚಾರ .
-ಬಡತನ ನಿರ್ಮೂಲನೆ, ಉದ್ಯೋಗ ಹೆಚ್ಚಳ ಮತ್ತು ವಿಕೇಂದ್ರಿಕೃತ ಘಟಕಗಳ ಅಭಿವೃದ್ಧಿಗೆ ಮಹತ್ವ
- ಕೃಷಿಗೆ ಹೆಚ್ಚಿನ ಗಮನ ನೀಡಲಾಗುವುದು.
-ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ದಿಟ್ಟ ಹೆಜ್ಜೆ.
ರಾಷ್ಟ್ರೀಯ ಹೆದ್ದಾರಿ:
-ಹಿಂದಿನ ಸರಕಾರ ಆರಂಭಿಸಿದ ರೂ. 58,000 ಕೋಟಿಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯನ್ನು ಮುಂದುವರಿಸಲಾಗುವುದು.
-ರಸ್ತೆಗಳು ರಾಷ್ಟ್ರೀಯ ಹಿತಾಸಕ್ತಿಯ ವಿಷಯ. ದೇಶದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯ.
ಸುವರ್ಣ ಚರ್ತುಭುಜ ರಸ್ತೆಯ ಜೊತೆ ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗೆ ಮಹತ್ವ.
ಧಾರ್ಮಿಕ ವಿಚಾರ :
-ಭಾರತ ಪ್ರಾಚೀನ ಸಂಸ್ಕೃತಿಯ ರಾಷ್ಟ್ರ. ಹಿಂದುತ್ವದ ಸಹಿಷ್ಣತಾ ಭಾವವನ್ನು ಕಾಪಾಡಿಕೊಂಡು ಬರಲಾಗುವುದು.
-ಜಾತಿ-ಮತದ ಆಧಾರದಲ್ಲಿ ಜನರನ್ನು ವಿಭಜಿಸುವುದಕ್ಕೆ ವಿರೋಧ. ಜನರನ್ನು ವಿಭಜಿಸಿ ಸರಕಾರದ ಅವಧಿ ಸಂಪೂರ್ಣಗೊಳಿಸುವ ಅಗತ್ಯವಿಲ್ಲ.
-ಕೋಮು ಭಾಂದವ್ಯ ಬಲಗೊಳಿಸಲು ಶ್ರಮ. ಎಲ್ಲಾ ದೇಶಪ್ರೇಮಿ ಮತೀಯರು ತಮ್ಮ ಧರ್ಮಯುದ್ಧವನ್ನು ಬಡತನ, ಅಜ್ಞಾನ ಮತ್ತು ರೋಗದ ವಿರುದ್ಧ ನಡೆಸಲು ಕರೆ.
-ಹಿಂದಿನ ಸರಕಾರದಂತೆ ಯಾವುದೇ ವಿಭಜಕ ಮತ್ತು ವಿಧ್ವಂಸಕ ಶಕ್ತಿಗಳಿಗೆ ಆಟವಾಡಲು ಅವಕಾಶವಿಲ್ಲ.
ಪಾಕಿಸ್ಥಾನ್ :
-ಇಸ್ಲಮಾಬಾದ್‌ಜೊತೆ ಮಾತುಕತೆಗೆ ಒಲವು.
-ನೆರೆಹೊರೆಯ ರಾಷ್ಟ್ರಗಳೊಂದಿಗೆ ಬಾಂಧವ್ಯ ಅಭಿವೃದ್ಧಿಗೆ ಪ್ರಯತ್ನ.
-ಪಾಕ್-ಭಾರತದ ಕೆಟ್ಟ ಇತಿಹಾಸವ ಮರೆತು ಹೊಸ ಭವಿಷ್ಯತ್‌ನತ್ತ ದೃಷ್ಟಿ.
-ಬರ್ಲಿನ್ ಗೋಡೆ ಬೀಳುವುದನ್ನು ಹಿಂದೆ ಯಾರಾದರೂ ನಿರೀಕ್ಷಿಸಲಿಲ್ಲ. ಅಂತಹ ಪ್ರಯತ್ನ .
ಭಾರತದ ಹಿತಾಸಕ್ತಿಯನ್ನು ತ್ಯಾಗ ಮಾಡದೆ ಪಾಕಿಸ್ಥಾನದ ಜೊತೆ ಬಾಂಧವ್ಯ ಮುಂದುವರಿಕೆ.
ಗುಜರಾತ್ - ಸಿಖ್ಖ್ ಹತ್ಯಾಕಾಂಡ :
-ಗುಜರಾತ್ ಮತ್ತು ಸಿಖ್ಖ್ ಹತ್ಯಾಕಾಂಡದಂತಹ ಘಟನೆಗಳಿಗೆ ಇನ್ನು ಮುಂದೆ ಆಸ್ಪದವಿಲ್ಲ. ಇತಿಹಾಸದಿಂದ ನಾವು ಪಾಠ ಕಲಿತುಕೊಂಡಿದ್ದೇವೆ.
-ಈ ಹತ್ಯಾಕಾಂಡದಲ್ಲಿ ನೊಂದವರಿಗೆ ಪರಿಹಾರ ನೀಡುವ ಪ್ರಶ್ನೆಯಿಲ್ಲ. ಸರಕಾರದಿಂದ ಆದಷ್ಟು ಸಹಾಯ ಮಾಡಲಾಗುವುದು.
-ಗುಜರಾತ್‌ನ್ಯಾಯಾಲಯಗಳ ಕಾರ್ಯವೈಖರಿ ಕುರಿತು ಬೇಸರ. ಆ ಕುರಿತು ಹೆಚ್ಚಿನ ಗಮನ .
ಅಯೋಧ್ಯೆ:
-ಸೂಕ್ಷ್ಮ ವಿಚಾರಗಳಿಗೆ ನ್ಯಾಯಾಲಯದ ತೀರ್ಮಾನವೇ ಉತ್ತಮ.
-ಅಯೋಧ್ಯೆ ವಿಚಾರದಲ್ಲಿ ನಿರರ್ಥಕವಾಗಿ ಸಾಗುವ ಮಾತುಕತೆಗಳಿಗೆ ಆಸ್ಪದವಿಲ್ಲ. ಈ ಕುರಿತ ಮಹತ್ವದ ಮತ್ತು ಅತಿಸೂಕ್ಷ್ಮ ವಿಚಾರಗಳಿಗೆ ಮಾತ್ರ ಮಾತುಕತೆ ನಡೆಸಲಾಗುವುದು.
-ಇದಲ್ಲದೇ ಇನ್ನೂ ಹಲವು ಆಂತರಿಕ ಸಮಸ್ಯೆಗಳಿಗೆ ನ್ಯಾಯಾಲಯದ ತೀರ್ಪನ್ನೇ ಅಂಗೀಕರಿಸಲಾಗುವುದು.
ಕಾಶ್ಮೀರ ಸಮಸ್ಯೆ :
-ಕಾಶ್ಮೀರ ಸಮಸ್ಯೆಗೆ ಸಂಬಂಧ ಪಟ್ಟ ಸರ್ವರ ಜೊತೆ ಭಾರತ ಮಾತುಕತೆ ನಡೆಸಲು ಸಿದ್ಧ.
-ಸ್ವಾತಂತ್ರ ಕೇಳುತ್ತಿರುವ ಹುರಿಯತ್ ಕಾನ್ಫರೆನ್ಸ್‌ನ್ನು ಸಹ ಮಾತುಕತೆಗೆ ಆಹ್ವಾನಿಸಲಾಗುವುದು. ಜಮ್ಮು-ಕಾಶ್ಮೀರದ ಶಾಂತಿಗಾಗಿ ಇರುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಲಾಗುವುದು. ಅದು ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿಯಲಿದೆ.
(ಇನ್‌ಫೊವಾರ್ತೆ/ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications