ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನಲ್ಲಿ ಸೂರ್ಯಗ್ರಹಣ ; ಮೇಘ ಮಲ್ಹಾರದಲ್ಲೊಂದು ಅಪಸ್ವರ

By Staff
|
Google Oneindia Kannada News

ಕೊಡಗಿನಲ್ಲಿ ಸೂರ್ಯಗ್ರಹಣ ; ಮೇಘ ಮಲ್ಹಾರದಲ್ಲೊಂದು ಅಪಸ್ವರ
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮಳೆ ಮಳೆ !

ಮಡಿಕೇರಿ : ಹೆಚ್ಚೂಕಮ್ಮಿ ಒಂದು ವಾರದಿಂದ ಕೊಡಗಿನಲ್ಲಿ ಸೂರ್ಯ ಗ್ರಹಣ !

ಮೋಡಗಳ ಆರ್ಭಟದಿಂದಾಗಿ ಕೊಡಗಿನ ಸೂರ್ಯ ಮೋಡಗಳ ಮರೆಯಲ್ಲಿ ಅವಿತುಕೊಂಡಿದ್ದಾನೆ. ಇದು ಮಳೆಯ ಸಮಯ. ಧೋ ಧೋ ಮಳೆಯಿಂದಾಗಿ ಮೈದುಂಬಿದ ಕಾವೇರಿ ; ಜನತೆಯಲ್ಲಿ ಗರಿಗೆದರಿದ ಭರವಸೆ ಸಿರಿ.

ಮೇ 18, ಬುಧವಾರವಂತೂ ಮಳೆಗಾಳಿ ಮೇಳದೊಂದಿಗೆ ಮಡಿಕೇರಿಗೆ ಮಡಿಕೇರಿಯೇ ಗಡಗಡಗಡ. ಭಾಗಮಂಡಲ, ತಲಕಾವೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ಪ್ರದೇಶಗಳಲ್ಲೂ ಉತ್ತಮ ಮಳೆಯಾಗುತ್ತಿದ್ದು , ಕಾವೇರಿಯಲ್ಲಿ ನೀರಿನ ಸೆಲೆ ಬಲಗೊಳ್ಳುತ್ತಿದೆ. ಕನ್ನಂಬಾಡಿ ಈ ಬಾರಿಯಾದರೂ ತುಂಬುವುದಾ ? ಹೊಸ ಸರ್ಕಾರ, ಹೊಸ ಭರವಸೆ- ಮಳೆರಾಯ ಕಣ್ಣು ತೆರೆದಾನಾ ?

ಮೇಘಮಲ್ಹಾರದಲ್ಲೊಂದು ಅಪಸ್ವರ :

ಭಾಗಮಂಡಲದ ಎನ್‌.ಡಾಲು ಎನ್ನುವ 40 ವರ್ಷದ ವ್ಯಕ್ತಿ ಏಕಾಏಕಿ ಹೆಚ್ಚಿದ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾನೆ. ಮೇ 17ರ ರಾತ್ರಿ ಉತ್ಸವವೊಂದರಲ್ಲಿ ಭಾಗಿಯಾಗಿದ್ದ ಡಾಲು ವಾಪಸ್ಸು ಬರುವಾಗ ಈ ದುರಂತ ಸಂಭವಿಸಿದೆ. ಭಾರೀ ಮಳೆ ಬೀಳುತ್ತಿರುವುದರಿಂದ ಮೃತದೇಹ ಪತ್ತೆ ಕಾರ್ಯದಲ್ಲಿ ಯಶಸ್ಸು ದೊರಕಿಲ್ಲ .

ಮಳೆ ಸುರಿಯುವುದು !

ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಗುರುವಾರ ಹಾಗೂ ಶುಕ್ರವಾರ ಭಾರೀ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ಸೂಚನೆ ನೀಡಿದೆ. ಆಗ್ನೇಯ ಮುಂಗಾರು ಆರಂಭಗೊಂಡಿದ್ದು , ಗುಡುಗು ಸಿಡಿಲು ಬೆರೆತ ಸುರಿಮಳೆ ಕರ್ನಾಟಕ, ತಮಿಳುನಾಡು, ಕೇರಳ, ಲಕ್ಷದ್ವೀಪಗಳಲ್ಲಿ ಬೀಳಲಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X