ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಿ ವಿಪರೀತ ವಿಧಿ ಆಘಾತ.... ಸೆರೆಮನೇಲಿ ಸದ್ದಾಂ 67ನೇ ಬರ್ತಡೇ

By Staff
|
Google Oneindia Kannada News

ವಿಧಿ ವಿಪರೀತ ವಿಧಿ ಆಘಾತ.... ಸೆರೆಮನೇಲಿ ಸದ್ದಾಂ 67ನೇ ಬರ್ತಡೇ
ರೆಡ್‌ಕ್ರಾಸ್‌ ತಂಡದಿಂದ ಸದ್ದಾಂ ಭೇಟಿ, ಇರಾಕ್‌ನಲ್ಲಿ ಮುಂದುವರಿದ ಆರಾಜಕತೆ

ಬಾಗ್ದಾದ್‌ : ಇರಾಕಿನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್‌ ತಮ್ಮ 67ನೇ ಹುಟ್ಟುಹಬ್ಬವನ್ನು ಸೆರೆಮನೆಯಲ್ಲಿ ಆಚರಿಸಿದ್ದಾರೆ.

ಸದ್ದಾಂ ಅಮೇರಿಕಾ ಮಿತ್ರಪಡೆಯ ಬಂಧನದಲ್ಲಿದ್ದಾರೆ. ಆದರೆ ಅವರ ಅನುಯಾಯಿಗಳು ಅಮೇರಿಕಾ ಮಿತ್ರಪಡೆಗಳ ವಿರುದ್ಧದ ತಮ್ಮ ಹೋರಾಟವನ್ನು ನಿಲ್ಲಿಸಿಲ್ಲ. ಸದ್ದಾಂ ಬಂಧನದಿಂದ ಮಿತ್ರಪಡೆಗಳಿಗೆ ನಿರೀಕ್ಷಿತ ಯಶಸ್ಸು ದೊರೆಯಲಿಲ್ಲ. ಇದರಿಂದ ಹಿನ್ನಡೆಯೇ ಉಂಟಾಯಿತು.

ಈ ನಡುವೆ ಅಮೇರಿಕಾ ಆಕ್ರಮಣ ಸಂದರ್ಭದಲ್ಲಿ ಬಂಧಿತರಾಗಿರುವ ಯುದ್ಧ ಕೈದಿಗಳನ್ನು ಅಂತರಾಷ್ಟ್ರೀಯ ರೆಡ್‌ ಕ್ರಾಸ್‌ ಸಂಸ್ಥೆ ಸೆರೆಮನೆಯಲ್ಲಿ ಭೇಟಿ ಮಾಡಿದೆ. ಈ ರೆಡ್‌ ಕ್ರಾಸ್‌ ತಂಡವು ಗುಪ್ತ ತಾಣದಲ್ಲಿ ಇರಿಸಲಾಗಿರುವ ಸದ್ದಾಂ ಹುಸೇನ್‌ರನ್ನು ಸಹ ಸಂಪರ್ಕಿಸಿದೆ.

ಕಳೆದ ಡಿಸೆಂಬರ್‌ನಲ್ಲಿ ಅಡಗುತಾಣದಲ್ಲಿದ್ದ ಸದ್ದಾಂರನ್ನು ಬಂಧಿಸಲಾಗಿತ್ತು. ಆದರೆ ಅಮೇರಿಕಾ ಮಿತ್ರ ಪಡೆಗಳ ಆಕ್ರಮಣದಿಂದ ಉಂಟಾಗಿರುವ ಕಲಹವನ್ನು 1,50,000 ಸೈನಿಕ ಬಲದಿಂದ ಶಮನ ಮಾಡಲು ಸಾಧ್ಯವಾಗುತ್ತಿಲ್ಲ. ಇರಾಕ್‌ ಈಗ ಅರಾಜಕತೆಗೆ ತಲುಪಿದೆ.

ಸದ್ದಾಂ ನೀಡಿದ ಸಂದೇಶವನ್ನು ಅವರ ಪುತ್ರಿಯರಾದ ರಗ್ಗಾದ್‌ ಮತ್ತು ರಾನಾ ಅವರಿಗೆ ತಲುಪಿಸಲಾಗಿದೆ. ಇದಕ್ಕೆ ಮುನ್ನ ಮಿಲಿಟರಿ ಪಡೆ ಸಂದೇಶವನ್ನು ಪರಿಶೀಲನೆ ನಡೆಸಿದೆ. ಇದು ನಾವು ಅವರನ್ನು ಎರಡನೇ ಬಾರಿ ಸಂಪರ್ಕಿಸಿರುವುದು. ಈ ಹಿಂದೆ ಫೆ.21ರಂದು ಸದ್ದಾಂರನ್ನು ಭೇಟಿಯಾಗಿದ್ದೆವು ಎಂದು ರೆಡ್‌ ಕ್ರಾಸ್‌ ಸಂಸ್ಥೆಯ ವಕ್ತಾರೆ ಡೌಮಿನಿ ಹೇಳಿದ್ದಾರೆ.

ಪ್ರಸ್ತುತ ಸದ್ದಾಂ ಪುತ್ರಿಯರು ಜೋರ್ಡಾನ್‌ನಲ್ಲಿದ್ದಾರೆ. ಪುತ್ರರೀರ್ವರು ಅಮೇರಿಕಾ ಮಿತ್ರ ಪಡೆಯ ದಾಳಿಯಲ್ಲಿ ಹತರಾಗಿದ್ದಾರೆ.

(ಎಎಫ್‌ಪಿ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X