ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಬ್ಬಳ್ಳಿ: ಮತಪಟ್ಟಿಯಿಂದ ಅಂತರ್ಧಾನರಾದವರ ಪರ ಶೆಟ್ಟರ್‌ ಕಾಳಜಿ

By Staff
|
Google Oneindia Kannada News

ಹುಬ್ಬಳ್ಳಿ: ಮತಪಟ್ಟಿಯಿಂದ ಅಂತರ್ಧಾನರಾದವರ ಪರ ಶೆಟ್ಟರ್‌ ಕಾಳಜಿ
ಮತಪಟ್ಟಿಯಲ್ಲಿ ಹೆಸರುಗಳ ನಾಪತ್ತೆಗೆ ಕಾರಣ ಕೃಷ್ಣ ಪರಮಾತ್ಮ !

ಹುಬ್ಬಳ್ಳಿ : ಮತದಾರರ ಪಟ್ಟಿಯಲ್ಲಿ ನಾಪತ್ತೆಯಾಗಿರುವ ಹುಬ್ಬಳ್ಳಿ ವಿಧಾನಸಭಾ ಕ್ಷೇತ್ರದ ಸುಮಾರು 10 ಸಾವಿರ ಮತದಾರರಿಗೆ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಬೇಕೆಂದು ರಾಜ್ಯ ಬಿಜೆಪಿ ಆಗ್ರಹಿಸಿದೆ. ಈ ಕುರಿತು ವಿಸರ್ಜಿತ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್‌ ಏಪ್ರಿಲ್‌ 27ರಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಚುನಾವಣಾ ಆಯಾಗ ನೀಡಿದ ಗುರುತಿನ ಚೀಟಿ ಇದ್ದರೂ ಸಹಸ್ರಾರು ಜನರಿಗೆ ಮತದಾನ ಮಾಡಲು ಸಾಧ್ಯವಾಗಿಲ್ಲ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಮತದಾನ ಮಾಡಗೊಡದಿದ್ದರೆ ಆಯಾಗ ನೀಡಿದ ಗುರುತಿನ ಚೀಟಿಯ ಉಪಯೋಗವಾದರೂ ಏನು ಎಂದು ಪ್ರಶ್ನಿಸಿದ ಜಗದೀಶ ಶೆಟ್ಟರ್‌- ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ವೋಟು ವಂಚಿತ ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಬೇಕು ಎಂದರು. ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಈ ರೀತಿ ಹೆಸರು ನಾಪತ್ತೆಯಾಗಿರುವುದು ಪ್ರಜ್ಞಾವಂತ ಜನರಿರುವ ಪ್ರದೇಶಗಳಲ್ಲಿಯೇ ಹೆಚ್ಚಾಗಿದೆ. ಇದು ಕೃಷ್ಣ ಸರ್ಕಾರದ ವ್ಯವಸ್ಥಿತ ಸಂಚಾಗಿದೆ. ತಿಳುವಳಿಕೆಯುಳ್ಳವರು ಕಾಂಗ್ರೆಸ್‌ಗೆ ಮತ ಹಾಕುವುದಿಲ್ಲವೆಂದೇ ಇಂಥ ಮತದಾರರ ಹೆಸರನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಲಾಗಿದೆ. ಇದು ಕೃಷ್ಣ ನೇತ್ರತ್ವದ ಸರ್ಕಾರದ ಸಂಚು ಎಂದು ಶೆಟ್ಟರ್‌ ಆಪಾದಿಸಿದರು.

ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆಯುವೆ. ಈ ಕಾರ್ಯಕ್ಕೆ ಹೊಣೆಗಾರರಾದ ಅಧಿಕಾರಿಗಳ ವಿರುದ್ಧ ಆಯೋಗ ಕ್ರಮ ಕೈಗೊಳ್ಳಬೇಕೆಂದು ಶೆಟ್ಟರ್‌ ಮನವಿ ಮಾಡಿದರು.

(ಏಜನ್ಸೀಸ್‌)

ಮುಖಪುಟ / ಕುರುಕ್ಷೇತ್ರ-2004

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X