ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸರಕು ಶಿಕ್ಷಣ : ಖಾಸಗಿ ಶಾಲೆಗಳಿಗೆ ಸುಪ್ರೀಂಕೋರ್ಟ್ ಮಾರ್ಗಸೂಚಿ
ಸರಕು ಶಿಕ್ಷಣ : ಖಾಸಗಿ ಶಾಲೆಗಳಿಗೆ ಸುಪ್ರೀಂಕೋರ್ಟ್ ಮಾರ್ಗಸೂಚಿ
ವಾರ್ಷಿಕ ಆಯವ್ಯಯ ಸಲ್ಲಿಸಲು ಖಾಸಗಿ ಶಾಲೆಗಳಿಗೆ ನಿರ್ದೇಶನ
ನಗರಗಳಲ್ಲಿ ಶಿಕ್ಷಣದ ವಾಣಿಜ್ಯೀಕರಣ ಮಾಡುತ್ತಿರುವ ಖಾಸಗಿ ಶಾಲೆಗಳಿಗೆ ನಿರ್ದಿಷ್ಟ ಮಾರ್ಗಸೂಚಿಯನ್ನು ವಿಧಿಸಿರುವ ನ್ಯಾಯಾಲಯ, ಶಾಲೆ ಆರಂಭಿಸುವಾಗ ಸರಕಾರದಿಂದ ವಿನಾಯಿತಿ ದರದಲ್ಲಿ ದೊರೆತ ಭೂಮಿಯನ್ನು ಆದೇಶದ ಅನ್ವಯವೇ ಬಳಸಬೇಕೆಂದು ಹೇಳಿದೆ. ನ್ಯಾಯಮೂರ್ತಿ ವಿ.ಎನ್.ಖರೆ ನೇತೃತ್ವದ ತ್ರಿಸದಸ್ಯ ಪೀಠವು ಶಾಲೆಗೆ ಅನುದಾನ ನೀಡುವ ಸಂದರ್ಭದಲ್ಲಿ ವಿಧಿಸಲಾಗಿದ್ದ ಆದೇಶದ ಪಾಲನೆಯನ್ನು ಅವರು ಪಾಲಿಸುತ್ತಿದ್ದಾರೆಯೆ ಎನ್ನುವುದನ್ನು ಕಠಿಣವಾಗಿ ಪರಿಶೀಲಿಸುವಂತೆ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ನಿರ್ದೇಶಿಸಿದೆ.
ಅನುದಾನ ರಹಿತ ಖಾಸಗಿ ಶಾಲೆಗಳು ತಮ್ಮ ವಾರ್ಷಿಕ ಆಯವ್ಯಯ ಪಟ್ಟಿಯನ್ನು ಸಲ್ಲಿಸುವಂತೆ ಆದೇಶಿಸಿದೆ. ವರ್ಷದ ಖರ್ಚು, ವಿದ್ಯಾರ್ಥಿ ಶುಲ್ಕ , ಇತರ ಖರ್ಚುಗಳನ್ನೆಲ್ಲ ಸ್ಪಷ್ಟವಾಗಿ ನಮೂದಿಸಿ ತಿಳಿಸುವಂತೆ ನ್ಯಾಯಪೀಠದ ಆದೇಶದಲ್ಲಿ ಹೇಳಲಾಗಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು