ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮವರೇ ನಮ್ಮನ್ನು ಬೈದರೆ ಸಹಿಸಿಕೊಳ್ಳುವುದು ಕಷ್ಟಕಷ್ಟ -ವಾಜಪೇಯಿ

By Staff
|
Google Oneindia Kannada News

ನಮ್ಮವರೇ ನಮ್ಮನ್ನು ಬೈದರೆ ಸಹಿಸಿಕೊಳ್ಳುವುದು ಕಷ್ಟಕಷ್ಟ -ವಾಜಪೇಯಿ
‘ಪಾಂಚಜನ್ಯ’ದಲ್ಲಿ ಪ್ರಧಾನಿ ಅಟಲ್‌ ವಿಶೇಷ ಸಂದರ್ಶನ

ನವದೆಹಲಿ : ಏಕರೂಪದ ತತ್ವ-ಸಿದ್ದಾಂತವನ್ನು ಹೊಂದಿದ ಸಂಘಟನೆಗಳು ನಮ್ಮ ವಿರುದ್ಧ ಟೀಕೆ ಮಾಡುವಾಗ ಅನ್ಯಾಯವೆಸಗಿದಂತಾಗುತ್ತದೆ ಎಂದು ಸಂಘಪರಿವಾರದ ಹೆಸರು ಉಲ್ಲೇಖಿಸದೆ ಪ್ರಧಾನಿ ವಾಜಪೇಯಿ ಹೇಳಿದ್ದಾರೆ.

ಆತ್ಮವಿಶ್ವಾಸವೇ ನಮ್ಮ ಅತಿ ದೊಡ್ಡ ಆಸ್ತಿ. ಅದೇ ಕಡಿಮೆಯಾದರೆ ? ಎಂದು ಆರ್‌ಎಸ್‌ಎಸ್‌ ಮುಖವಾಣಿ ‘ಪಾಂಚಜನ್ಯ’ ಕ್ಕೆ ನೀಡಿದ ಸಂದರ್ಶನದಲ್ಲಿ ವಾಜಪೇಯಿ ಉದ್ಘರಿಸಿದ್ದಾರೆ.

ಪ್ರಬಲವಾದ ವಿರೋಧಾಭಾಸಗಳು ಇರಬಹುದು. ಆದರೂ ನಾವು ಒಬ್ಬರು ಇನ್ನೊಬ್ಬರ ಧ್ಯೇಯಗಳನ್ನು ಸಂಶಯದಿಂದ ನೋಡಬಾರದು. ನಾವೆಲ್ಲ ಸಂಘ ಪರಿವಾರದ ಚಿಂತನೆಯವರು. ಆ ಚಿಂತನೆಯಲ್ಲಿ ಮುಂದುವರಿಯುತ್ತಿದ್ದೇವೆ. ಅದು ದೇಶದ ಅಭಿವೃದ್ಧಿಗಾಗಿ. ಈ ನಡುವೆ ಪರಸ್ಪರ ಆಪಾದಿಸುವುದರಲ್ಲಿ ಅರ್ಥವಿಲ್ಲ ಎಂದು ವಾಜಪೇಯಿ ಹೇಳಿದ್ದಾರೆ. ಸಂಘ ಪರಿವಾರದ ಯಾವುದಾದರು ಹೇಳಿಕೆಯಿಂದ ಬೇಸರಗೊಂಡಿದ್ದೀರ ಎಂಬ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ನಿಮ್ಮ ಮುಂದಿನ ಉತ್ತರಾಧಿಕಾರಿಯನ್ನಾಗಿ ಯಾರನ್ನು ನೇಮಿಸುತ್ತೀರಿ ಎಂಬ ಪ್ರಶ್ನ್ನೆಗೆ- ರಾಜಕಾರಣದಲ್ಲಿ ಯಾರೂ ಅವರ ಉತ್ತರಾಧಿಕಾರಿಗಳನ್ನ ನಿರ್ಧರಿಸುವುದಿಲ್ಲ. ನಾನು ನನ್ನ ಉತ್ತರಾಧಿಕಾರಿಯನ್ನು ನಿರ್ಧರಿಸುವ ಪ್ರಶ್ನೆಯೇ ಇಲ್ಲ . ಪಕ್ಷ ಇದನ್ನು ನಿರ್ಧರಿಸುತ್ತದೆ. ನಾನು ಹೇಗೆ ನಿರ್ಧರಿಸಲು ಸಾಧ್ಯ ಎಂದು ವಾಜಪೇಯಿ ಹೇಳಿದ್ದಾರೆ.

(ಪಿಟಿಐ)

ಮುಖಪುಟ / ಕುರುಕ್ಷೇತ್ರ-2004

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X