ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಭಾರತೀಯ ರೈಲ್ವೆ’ ಪ್ರಯಾಣಿಕರ ಸಂಖ್ಯೆ 127.5 ಮಿಲಿಯನ್‌ ಹೆಚ್ಚಳ

By Staff
|
Google Oneindia Kannada News

‘ಭಾರತೀಯ ರೈಲ್ವೆ’ ಪ್ರಯಾಣಿಕರ ಸಂಖ್ಯೆ 127.5 ಮಿಲಿಯನ್‌ ಹೆಚ್ಚಳ
2742.81 ಮಿಲಿಯನ್‌ ಪ್ರಯಾಣಿಕರು ಹೊರ ದೇಶಗಳಿಂದ ಬಂದವರು

ನವದೆಹಲಿ : 2003-2004ನೇ ಸಾಲಿನ 11 ತಿಂಗಳುಗಳಲ್ಲಿ 127.50 ಮಿಲಿಯನ್‌ ಅಧಿಕ ಪ್ರಯಾಣಿಕರು ಪ್ರಯಾಣ ಮಾಡುವುದರೊಂದಿಗೆ ಭಾರತೀಯ ರೈಲ್ವೆ ಹೊಸ ದಾಖಲೆ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಸಲ ಫೆಬ್ರವರಿಯ ಅಂತ್ಯದಲ್ಲೇ ಮಂಡಳಿಯು ಗಣನೀಯ ಪ್ರಗತಿ ಸಾಧಿಸಿರುವುದು ಕಂಡು ಬಂದಿದೆ.

ಕಳೆದ ವರ್ಷ 11 ತಿಂಗಳ ಅವಧಿಯಲ್ಲಿ 4545.51 ಪ್ರಯಾಣಿಕರು ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸಿದ್ದರು. ಈ ಬಾರಿ 4673.01 ಮಿಲಿಯನ್‌ ಪ್ರಯಾಣಿಕರು ರೈಲ್ವೆಯಲ್ಲಿ ಪ್ರಯಾಣಿಸಿದ್ದು , 127.50 ಮಿಲಿಯನ್‌ ಪ್ರಯಾಣಿಕರ ಹೆಚ್ಚಳವನ್ನು ರೈಲ್ವೆ ದಾಖಲಿಸಿದೆ. ಒಟ್ಟು ಪ್ರಯಾಣಿಕರಲ್ಲಿ 2742.81 ಮಿಲಿಯನ್‌ ಪ್ರಯಾಣಿಕರು ಹೊರ ದೇಶಗಳಿಂದ ಬಂದವರಾಗಿದ್ದು, ಉಳಿದ 1930.20 ಮಿಲಿಯನ್‌ ಪ್ರಯಾಣಿಕರು ದೇಶೀಯರೇ ಆಗಿದ್ದಾರೆ.

ಬ್ರಾಡ್‌ಗೇಜ್‌ ರೈಲ್ವೆಗಳ ಸಮಯ ಪರಿಪಾಲನೆಯ ಮಟ್ಟ ನಿಗದಿ ಪಡಿಸಿದ ಶೇ.90ನ್ನು ಮೀರಿ 90.2% ಯಶಸ್ಸು ಗಳಿಸಿದೆ. ಮೀಟರ್‌ ಗೇಜ್‌ ರೈಲ್ವೆಗಳಲ್ಲಿ ನಿಗದಿ ಪಡಿಸಿದ 95% ವನ್ನು ದಾಟಿ 96.8% ಫಲಿತಾಂಶ ಹೊಂದುವುದರೊಂದಿಗೆ ಅಪ್ರತಿಮ ಬೆಳವಣಿಗೆ ಕಂಡುಬಂದಿದೆ.

ಆರ್ಥಿಕ ದೃಷ್ಟಿಯಿಂದ ನೋಡಿದಾಗ ಅಂದಾಜಿಸಲಾದ ವೆಚ್ಚ ರೂ. 28129.81 ಕೋಟಿಯನ್ನು ಬಿಟ್ಟು , 546.69 ಕೋಟಿ ರೂಪಾಯಿಗಳ ಉಳಿತಾಯ ಮಾಡಿದೆ. ಈ ಅವಧಿಯಲ್ಲಿ ಮಾಡಲಾದ ನಿವ್ವಳ ವೆಚ್ಚ 27583.12 ಕೋಟಿ ರೂಪಾಯಿಗಳು. ಮಂಡಳಿ ಹೊಂದಿರುವ ಒಟ್ಟಾರೆ ಲಾಭ ರೂ. 38330.72 ಕೋಟಿಗಳು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X