ಲಕ್ನೋದ ‘ಸೀರೆ ದುರಂತ’ಕ್ಕೂ ಅಟಲ್‌ಗೂ ಎತ್ತಣ ನಂಟು - ವೆಂಕಯ್ಯ
ಲಕ್ನೋದ ‘ಸೀರೆ ದುರಂತ’ಕ್ಕೂ ಅಟಲ್‌ಗೂ ಎತ್ತಣ ನಂಟು - ವೆಂಕಯ್ಯ
ಎನ್‌ಡಿಎ ಸಾಧನೆ ಕುರಿತು ಚರ್ಚಿಸಲು ಸೋನಿಯಾಗೆ ವೆಂಕಯ್ಯನಾಯ್ಡು ಆಹ್ವಾನ
ಸೀರೆ ದುರಂತದಲ್ಲಿ ಪ್ರಧಾನಿ ವಾಜಪೇಯಿ ಹೆಸರನ್ನು ಸೇರಿಸಿ ಕಾಂಗ್ರೆಸ್ ತೆಗಳುತ್ತಿರುವುದು ಒಂದು ದುರಂತ. ಈ ದುರ್ಘಟನೆಯಲ್ಲಿ ಪ್ರಧಾನಿ ವಾಜಪೇಯಿ ಹೆಸರನ್ನು ಸೇರಿಸಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲೆತ್ನಿಸುತ್ತಿದೆ. ಸತ್ಯಕ್ಕೆ ಬಲು ದೂರವಾದ ಮಾತನ್ನು ಅವರು ಆಡುತ್ತಿದ್ದಾರೆ. ಆ ಮೂಲಕ ತನ್ನ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ವೆಂಕಯ್ಯ ನಾಯ್ಡು ಆಪಾದಿಸಿದರು. ರಾಜ್ಯದಲ್ಲಿ ಚುನಾವಣಾ ಪ್ರವಾಸದಲ್ಲಿರುವ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ದುರ್ಘಟನೆಗೆ ವಾಜಪೇಯಿ ಆಗಲಿ ಅಥವಾ ಬಿಜೆಪಿಯಾಗಲಿ ನೈತಿಕವಾಗಿ ಹೊಣೆಯಲ್ಲ. ಇದು ಲಾಲ್ ಜೀ ಟೆಂಡನ್ ಅವರ ಹುಟ್ಟುಹಬ್ಬ. ಇದು ಖಾಸಗಿ ಸಮಾರಂಭ. ಕಾಂಗ್ರೆಸ್‌ಗೆ ಮೊದಲ ಹಂತದ ಚುನಾವಣೆಯ ಪರಿಣಾಮದಿಂದ ಭಯವಾಗಿದೆ. ಅದಕ್ಕೆ ಅದು ಮತದಾನೋತ್ತರ ಮತ್ತು ಪೂರ್ವ ಸಮೀಕ್ಷೆಗಳ ವರದಿಯನ್ನು ಒಳಗೊಂಡು ಎಲ್ಲದರಲ್ಲೂ ತಪ್ಪನ್ನು ಹುಡುಕಲು ಪ್ರಯತ್ನಿಸುತ್ತಿದೆ. ಮತ ಎಣಿಕೆಯ ಬಳಿಕ , ಸೋತ ಕಾಂಗ್ರೆಸ್ ತನ್ನಲ್ಲೇ ತಪ್ಪು ಕಂಡುಕೊಂಡರೆ ಅದರಲ್ಲಿ ವಿಶೇಷವೇನಿಲ್ಲ ಎಂದು ನಾಯ್ಡು ಹೇಳಿದರು.
ಸೋನಿಯಾ ಗಾಂಧಿ ಎನ್‌ಡಿಎ ಮೈತ್ರಿಕೂಟದ ಅಭಿವೃದ್ಧಿ ಕಾರ್ಯದ ಕುರಿತು ಟೀಕಿಸುತ್ತಾರೆ. ಬೇಕಾದರೆ ಆ ಕುರಿತು ಅವರ ಜೊತೆ ಮಾತುಕತೆ ನಡೆಸಲು ನಾವು ತಯಾರಿದ್ದೇವೆ ಎಂದು ವೆಂಕಯ್ಯನಾಯ್ಡು ಚರ್ಚೆಗೆ ಆಹ್ವಾನವಿತ್ತರು. ಮತದಾರರ ಪಟ್ಟಿಯಲ್ಲಿ ಅನೇಕ ಹೆಸರುಗಳು ಬಿಟ್ಟು ಹೋದುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಚುನಾವಣಾ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications