ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಪ್ರಾಥಮಿಕ ಶಿಕ್ಷಣಕ್ಕೆ ವಿಶ್ವ ಬ್ಯಾಂಕ್‌ನಿಂದ 500 ಡಾಲರ್‌ ನಿಧಿ

By Staff
|
Google Oneindia Kannada News

ಭಾರತದ ಪ್ರಾಥಮಿಕ ಶಿಕ್ಷಣಕ್ಕೆ ವಿಶ್ವ ಬ್ಯಾಂಕ್‌ನಿಂದ 500 ಡಾಲರ್‌ ನಿಧಿ
ಸರ್ವ ಶಿಕ್ಷಾ ಅಭಿಯಾನವೆಂಬ ಮೂರೂವರೆ ವರ್ಷಗಳ ಯೋಜನೆ

ವಾಷಿಂಗ್ಟನ್‌: ವಿಶ್ವಬ್ಯಾಂಕ್‌ ಭಾರತದ ಪ್ರಾಥಮಿಕ ಶಿಕ್ಷಣದ ಅಭಿವೃದ್ಧಿಗಾಗಿ 500 ಮಿಲಿಯನ್‌ ಡಾಲರ್‌ ನೆರವನ್ನು ಮಂಜೂರು ಮಾಡಿದೆ. ಈ ನಿಧಿಯನ್ನು ಯುರೋಪಿಯನ್‌ ಆಯೋಗ ಮತ್ತು ಯುನೈಟೆಡ್‌ ಕಿಂಗ್‌ಡಮ್‌ಗಳ ಸಹಕಾರದಿಂದ ನೀಡಲಾಗುತ್ತಿದೆ.

ಪ್ರಾಥಮಿಕ ಶಿಕ್ಷಣದಲ್ಲಿ ಅಭಿವೃದ್ಧಿ ತರಲು ನಿಗದಿ ಮಾಡಿರುವ ಮೂರೂವರೆ ವರ್ಷಗಳ ಬೃಹತ್‌ ಯೋಜನೆಯ ಒಟ್ಟು ಮೊತ್ತ 3.5 ಬಿಲಿಯನ್‌ ಡಾಲರ್‌ಗಳು.

ಭಾರತೀಯ ಪ್ರಾಥಮಿಕ ಶಿಕ್ಷಣದ ಈ ಯೋಜನೆಯನ್ನು ಸರ್ವ ಶಿಕ್ಷಾ ಅಭಿಯಾನ ಎಂದು ಹೆಸರಿಸಲಾಗಿದ್ದು, ಶಾಲಾಶಿಕ್ಷಣದಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆಯನ್ನು ಕಡಿತಗೊಳಿಸುವುದೇ ಇದರ ಮುಖ್ಯ ಧ್ಯೇಯವಾಗಿದೆ. ಲಿಂಗಭೇದ ಮತ್ತು ಸಾಮಾಜಿಕ ನ್ಯೂನತೆಗಳನ್ನು ಹೋಗಲಾಡಿಸಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದೇ ಇದರ ಉದ್ದೇಶವಾಗಿದೆ.

ಭಾರತದಂತ ದೊಡ್ಡ ರಾಷ್ಟ್ರಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ಸೌಕರ್ಯವಿರದ ಒಂದು ಮಗುವಿದ್ದರೂ ಅದು ದೇಶಕ್ಕೆ ಗುರುತರವಾದ ಹೊರೆಯಾಗುತ್ತದೆ ಎಂದು ಯೋಜನೆಯ ಉದ್ದೇಶಗಳನ್ನು ವಿವರಿಸಿದ ವಿಶ್ವಬ್ಯಾಂಕ್‌ನ ಅಧಿಕಾರಿ ಮೈಕಲ್‌ ಕಾರ್ಟರ್‌ ಹೇಳಿದರು.

ಭಾರತದಲ್ಲಿ 1999ರಲ್ಲಿ ಶಾಲೆಗಳಿಗೆ ಹೋಗದೆ ಇರುವ 6ರಿಂದ 14 ವರ್ಷ ವಯಸ್ಸಿನ ಮಕ್ಕಳ ಸಂಖ್ಯೆ 39 ಮಿಲಿಯನ್‌ ಆಗಿತ್ತು. 2003ರ ಸಮಯಕ್ಕೆ ಆ ಸಂಖ್ಯೆ 25 ಮಿಲಿಯನ್‌ಗೆ ತರಲಾಗಿದೆ. ಇಡೀ ಜಗತ್ತಿನಲ್ಲಿ ಶಾಲೆಗಳಿಗೆ ಹೋಗದ (6ರಿಂದ 14 ವರ್ಷದ) ಮಕ್ಕಳ ಸಂಖ್ಯೆಯ ನಾಲ್ಕನೆಯ ಒಂದು ಭಾಗ ಭಾರತದಲ್ಲಿದ್ದಾರೆ. ಜಗತ್ತಿನಲ್ಲಿ ಶಾಲೆಗೆ ಹೋಗದ ಮಕ್ಕಳ ಸಂಖ್ಯೆ 104 ಮಿಲಿಯನ್‌ ಆಗಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X