ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ನೋದಲ್ಲಿ ‘ಲಾಲ್‌ಜೀ ಬರ್ತಡೇ ಸೀರೆ’ಗೆ ನೂಕುನುಗ್ಗಲು, 21 ಸಾವು

By Staff
|
Google Oneindia Kannada News

ಲಕ್ನೋದಲ್ಲಿ ‘ಲಾಲ್‌ಜೀ ಬರ್ತಡೇ ಸೀರೆ’ಗೆ ನೂಕುನುಗ್ಗಲು, 21 ಸಾವು
ಪ್ರಧಾನಿ ವಾಜಪೇಯಿ ಸ್ಥಳಕ್ಕೆ ಭೇಟಿ, ಸಂತ್ರಸ್ತರಿಗೆ ಸಾಂತ್ವನ

ಲಕ್ನೋ : ಪ್ರಧಾನಿ ವಾಜಪೇಯಿ ಸ್ಪರ್ಧಿಸುತ್ತಿರುವ ಲಕ್ನೋ ಕ್ಷೇತ್ರದಲ್ಲಿ ಅವರ ಚುನಾವಣಾ ಪ್ರಚಾರದ ಹೊಣೆ ಹೊತ್ತ ಬಿಜೆಪಿ ಮುಖಂಡ ಲಾಲ್‌ಜೀ ಟೆಂಡನ್‌ ಹುಟ್ಟುಹಬ್ಬದ ಪ್ರಯುಕ್ತ ಸೀರೆವಿತರಣೆಯ ವೇಳೆ ಉಂಟಾದ ನೂಕುನುಗ್ಗಲ ಕಾಲ್ತುಳಿತಕ್ಕೆ 21 ಮಂದಿ ಮಹಿಳೆಯರು ಮೃತ ಪಟ್ಟಿದ್ದಾರೆ.

ನಗರದ ಆಜಾದ್‌ಪಾರ್ಕ್‌ನಲ್ಲಿ ಸೀರೆ ಪಡೆಯುವುದಕ್ಕಾಗಿ ಸುಮಾರು 10,000 ಮಹಿಳೆಯರು ನೆರೆದಿದ್ದರು. ಅವರೆಡೆಗೆ ಸೀರೆಯನ್ನು ಎಸೆಯಲಾಗುತ್ತಿತ್ತು. ಆದರೆ ಬಳಿಕ ಸೀರೆಯನ್ನು ಮುಖ್ಯದ್ವಾರದ ಕೌಂಟರ್‌ ಬಳಿ ನೀಡಲಾಗುವುದು ಎಂದು ಪ್ರಕಟಿಸಿದಾಗ ನೆರೆದಿದ್ದ ನಾರಿಯರು ಅತ್ತ ಓಡಿದಾಗ ಉಂಟಾದ ನೂಕುನುಗ್ಗಲಿನ ಕಾಲ್ತುಳಿತದಲ್ಲಿ ಸಾವುನೋಲು ಉಂಟಾಯಿತು ಎಂದು ಪ್ರತ್ಯಕ್ಷದರ್ಶಿಗಳೊಬ್ಬರು ತಿಳಿಸಿದ್ದಾರೆ.

ತಕ್ಷಣ ತನ್ನ ಜಾರ್ಖಂಡ್‌ ಕಾರ್ಯಕ್ರಮ ಮೊಟಕುಗೊಳಿಸಿ ಪ್ರಧಾನಿ ಲಕ್ನೋಗೆ ಆಗಮಿಸಿದ್ದಾರೆ. ಈ ಘಟನೆಯನ್ನು ಯಾವುದೇ ಕಾರಣಕ್ಕೂ ಚುನಾವಣೆಗೆ ಸಂಬಂಧಿಸಬಾರದು ಎಂದು ಅವರು ಹೇಳಿದರು. ಬಳಿಕ ಮೃತರ ಮನೆಗೆ ತೆರಳಿ ಶೋಕ ವ್ಯಕ್ತಪಡಿಸಿದ್ದಾರೆ. ಆದರೆ ಈ ಘಟನೆಯನ್ನು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಘಟನೆ ನಡೆದ ಸಂದರ್ಭದಲ್ಲಿ ಲಾಲ್‌ಜಿ ಟೆಂಡನ್‌ ದುರ್ಘಟನೆ ಸಂಭವಿಸಿದ ಸ್ಥಳದಿಂದ ನಿರ್ಗಮಿಸಿದ್ದರು. ಇದು ಖಾಸಗಿ ಕಾರ್ಯಕ್ರಮವಾಗಿತ್ತು. ಸೀರೆ ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು ಎಂದು ಸಂಘಟಕರು ಹೇಳಿದ್ದಾರೆ.

ಘಟನೆ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್‌ ಯಾದವ್‌ ಲಕ್ನೋ ಕಮಿಷನರ್‌ ಡಿ.ಸಿ. ಲಖಾ ಅವರಿಗೆ ಸೂಚಿಸಿದ್ದಾರೆ. ಚುನಾವಣಾ ಹಿನ್ನೆಲೆಯಲ್ಲಿ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಆದ ಕಾರಣ ಇದು ಕಾನೂನು ಬಾಹಿರ ಕಾರ್ಯಕ್ರಮ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X