ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಹಾ ಬೆಲ್ಲ , ಅಚ್ಚು ಬೆಲ್ಲ : ಶ್ರೀನಿವಾಸಪುರ ಸುತ್ತಮುತ್ತ ಸಿಹಿಯ ಸುಗ್ಗಿ

By Staff
|
Google Oneindia Kannada News

ಆಹಾ ಬೆಲ್ಲ , ಅಚ್ಚು ಬೆಲ್ಲ : ಶ್ರೀನಿವಾಸಪುರ ಸುತ್ತಮುತ್ತ ಸಿಹಿಯ ಸುಗ್ಗಿ
ಕಬ್ಬು ನಮ್ಮದೇ, ಗಾಣವು ನಮ್ಮದೇ ! ಕಬ್ಬು ಬೆಳೆದು ಸ್ವಾವಲಂಬಿಗಳಾದ ರೈತರ ಕಥೆ

  • ಗೋವಿಂದರಾಜು, ಲಕ್ಕೂರು
ಶ್ರೀನಿವಾಸಪುರ: ಮಾರುಕಟ್ಟೆಯಲ್ಲಿ ಟೊಮೆಟೊ ದರ ಕೇಳಿರಬಹುದು. ಕೇಜಿಗೆ ಮೂರು ರುಪಾಯಿ , ಹತ್ತು ರೂಪಾಯಿಗೆ ನಾಲ್ಕು ಕೇಜಿ. ಹಾಗಾದರೆ ರೈತನಿಗೆ ಒಂದು ಕೇಜಿ ಟೊಮೆಟೊಗೆ ಎಷ್ಟು ಸಿಗಬಹುದು? ಊಹಿಸಿದರೆ ಪಾಪ, ರೈತನ ಪರಿಸ್ಥಿತಿ ಚಿಂತಾಜನಕ. ರೈತನಿಗೆ ಪ್ರತಿ ಕೇಜಿ ಟೊಮೊಟೊಗೆ ಇಪತ್ತರಿಂದ ಮೂವತ್ತು ಪೈಸೆಯೂ ಹುಟ್ಟುತ್ತಿಲ್ಲ .

ಕೋಲಾರ ಜಿಲ್ಲೆಯ ಟೊಮೊಟೊ ಬೆಳೆದ ರೈತರು ಅಲವತ್ತುಕೊಳ್ಳುತ್ತಿರುವ ಹೊತ್ತಿನಲ್ಲಿ , ಶ್ರೀನಿವಾಸಪುರದ ರೈತರ ಪರಿಸ್ಥಿತಿಯೇ ವಾಸಿ ಅನ್ನಬೇಕು. ಈ ರೈತರು ತುಸು ಬುದ್ಧಿ ಉಪಯೋಗಿಸಿದ್ದಾರೆ. ಟೊಮೆಟೊ ದರ ಕುಸಿದಿರುವುದು, ಬೆಲ್ಲದ ದರ ಹೆಚ್ಚುತ್ತಿರುವುದನ್ನು ಮನಗಂಡು, ಮುಡಿಮಡಗು ಮತ್ತು ರಾಯಲ್ವಾಡ ಹಳ್ಳಿಗಳ ರೈತರು ಕಬ್ಬನ್ನು ಬೆಳೆಯುತ್ತಿದ್ದಾರೆ.

ಜೆಲ್ಲಿಕಲ್ಲುಗಳಿಂದ ಕೂಡಿದ ಸಮತಟ್ಟಾದ ಈ ಪ್ರದೇಶದ ನೆಲದಲ್ಲಿ ನೀರಿನ ತೇವಾಂಶ ಬಹಳ ಕಾಲದವರೆಗೆ ಇರುತ್ತದೆ. ಅಲ್ಲದೇ ಕಬ್ಬು ಕೂಡ ಗರಿಷ್ಟ ಎತ್ತರಕ್ಕೆ ಬೆಳೆಯುತ್ತದೆ. ಆಂಧ್ರ ಪ್ರದೇಶದ ಗಡಿ ಪ್ರದೇಶಗಳು ಇಂತಹ ವಾಣಿಜ್ಯ ಬೆಳೆಗಳಿಗೆ ಹೇಳಿ ಮಾಡಿಸಿದ ಜಾಗವಾಗಿದೆ.

ಇಲ್ಲಿನ ರೈತರು ಬೆಳೆದ ಕಬ್ಬನ್ನು ಯಾವುದೇ ಮಾರುಕಟ್ಟೆಗಾಗಲೀ ಕಾರ್ಖಾನೆಗಾಗಲೀ ರವಾನಿಸುವುದಿಲ್ಲ. ಹಾಗಾಗಿ ಕಾರ್ಖಾನೆ ಬಾಗಿಲು ಕಾಯುವ ದರ್ದು ಇವರಿಗಿಲ್ಲ . ಸ್ವತಃ ತಾವೇ ಬೆಲ್ಲವನ್ನು ತಯಾರಿಸುತ್ತಾರೆ. ತಯಾರಿಸಿದ ಬೆಲ್ಲವನ್ನು ಹಾಗೆಯೇ ಶೇಖರಿಸಿಟ್ಟು ಒಳ್ಳೆಯ ದರ ಬಂದಾಗ ಅದನ್ನು ಮಾರುತ್ತಾರೆ. ಕೆಲ ವರ್ಷಗಳ ಹಿಂದೆ ಸಾಂಪ್ರದಾಯಿಕ ರೀತಿಯಲ್ಲಿ, ದೊಡ್ಡ ಕಡಾಯಿಯಲ್ಲಿ ಕಬ್ಬಿನ ಗಾಣದಿಂದ ತೆಗೆದ ರಸವನ್ನು ಕುದಿಸಿ, ಬೆಲ್ಲ ತೆಗೆಯಲಾಗುತ್ತಿತ್ತು. ಆದರೆ ಈಗ ಡೀಸೆಲ್‌ ಅಥವಾ ವಿದ್ಯುತ್‌ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ. ಶ್ರೀನಿವಾಸಪುರದ ಸುತ್ತಮುತ್ತ ಬೆಲ್ಲದ ಘಮ!

ಬೆಳೆದ ಬೆಳೆಯನ್ನು ಸುತ್ತಲಿನ ನೆರೆಕೆರೆಯ ಮಂದಿಗೆ ಹಂಚುವ ರೂಢಿಯೂ ಇದೆ. ಬೆಲ್ಲ ಮಾಡುವ ಸಮಯದಲ್ಲಿ ಯಾರೇ ಬಂದರೂ ಅವರಿಗೆ ಬೆಲ್ಲ, ಕಬ್ಬಿನಹಾಲು, ಕಬ್ಬುಗಳಿಂದಲೇ ಉಪಚಾರ. ಈ ವರ್ಷ ಬೆಲ್ಲದ ದರ ಕಳೆದ ಬಾರಿಗಿಂತ ಚೆನ್ನಾಗಿದ್ದು ಒಂದು ಮೂಟೆ(ಅಚ್ಚು ಬೆಲ್ಲ) ಬೆಲ್ಲಕ್ಕೆ ರೂ. 1,700ರಿಂದ ರೂ. 1,800 ವರೆಗೆ ಬೆಲೆಯಿದೆ.

ಶ್ರೀನಿವಾಸಪುರ ಹಾಗೂ ಸುತ್ತಮುತ್ತಲ ರೈತರ ಸಂತತಿ ಹಬ್ಬಲಿ ; ಸಿಹಿ ಸಾಂಕ್ರಾಮಿಕವಾಗಲಿ.

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X