ಹಾಸನ ಹೊರವಲಯದಿ ಪೆಟ್ರೋಲ್ ಬಂಕ್ ಲೂಟಿ, ಐವರ ಕಗ್ಗೊಲೆ
ಹಾಸನ ಹೊರವಲಯದಿ ಪೆಟ್ರೋಲ್ ಬಂಕ್ ಲೂಟಿ, ಐವರ ಕಗ್ಗೊಲೆ
60 ಸಾವಿರ ರುಪಾಯಿ ಲೂಟಿ, ಗಾಯಾಳುಗಳು ಜಿಲ್ಲಾ ಆಸ್ಪತ್ರೆಗೆ ದಾಖಲು
ಬೆಂಗಳೂರು-ಮಂಗಳೂರು ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿನ ಕೌಶಿಕ್ ಎಂಟರ್‌ಪ್ರೆೃಸಸ್ ಎನ್ನುವ ಪೆಟ್ರೋಲ್‌ಬಂಕ್‌ಗೆ ನುಗ್ಗಿರುವ ಡಕಾಯಿತರ ಗುಂಪು ಈ ದುಷ್ಕೃತ್ಯ ನಡೆಸಿದೆ. ಡಕಾಯಿತರ ಗುಂಪಿನಲ್ಲಿ ಐದು ಮಂದಿ ಇದ್ದರೆಂದು ಪ್ರಾಥಮಿಕ ತನಿಖೆಯ ನಂತರ ಪೊಲೀಸರು ತಿಳಿಸಿದ್ದಾರೆ. ಏ.10, ಶನಿವಾರ ರಾತ್ರಿ 2.30ರ ಸುಮಾರಿಗೆ ಈ ದುಷ್ಕೃತ್ಯ ಸಂಭವಿಸಿದೆ.
ಪೆಟ್ರೋಲ್ ಬಂಕ್‌ನ ಮುಂಭಾಗದಲ್ಲಿ ಮಲಗಿದ್ದ ನಂದಕುಮಾರ್ (45), ನಟರಾಜ್ ಶಾಸ್ತ (35) ಎಂಬುವರನ್ನು ಡಕಾಯಿತರು ಕೊಚ್ಚಿ ಕೊಂದಿದ್ದಾರೆ. ಅದೇ ಸಮಯಕ್ಕೆ ಪೆಟ್ರೋಲ್‌ಗಾಗಿ ಬಂದ ಎನ್.ಟಿ.ಕುಮಾರ್ (45) ಹಾಗೂ ಸತೀಶ್‌ಕುಮಾರ್ (40) ಎನ್ನುವವರೂ ಡಕಾಯಿತರಿಂದ ಇರಿತಕ್ಕೊಳಗಾಗಿದ್ದಾರೆ. ಆನಂತರದ ನತದೃಷ್ಟ - ಕಚೇರಿಯ ಒಳಗೆ ಮಲಗಿದ್ದ ಕಾವಲುಗಾರ ದಿನೇಶ್ (20).
ವ್ಯವಸ್ಥಾಪಕಕ ಪುಟ್ಟಣ್ಣ ಹಾಗೂ ಕೆಲಸಗಾರರಾದ ಮಂಜುನಾಥ, ಮಂಜುಶೆಟ್ಟಿ, ಕುಮಾರ್ ಎನ್ನುವವರ ಮೇಲೂ ಡಕಾಯಿತರು ಹಲ್ಲೆ ನಡೆಸಿದ್ದು , ಗಾಯಾಳುಗಳು ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications