ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಇಂದಿರಾ ನಗರದಲ್ಲಿ ‘ಕನ್ನಡ ಸಮ್ಮೇಳನ’

By Super
|
Google Oneindia Kannada News

ಬೆಂಗಳೂರಿನ ಇಂದಿರಾ ನಗರದಲ್ಲಿ 'ಕನ್ನಡ ಸಮ್ಮೇಳನ'
ಕರ್ನಾಟಕದಲ್ಲಿ ನೆಲೆಸಿದವರೆಲ್ಲರೂ ಕನ್ನಡಿಗರು ಎನ್ನುವ ಧ್ಯೇಯವಾಕ್ಯದಡಿ ಏ.11ರಂದು ಬೆಂಗಳೂರಿನಲ್ಲೊಂದು ಕನ್ನಡ ಸಮ್ಮೇಳನ ನಡೆಯಲಿದೆ. ಕನ್ನಡ ಪ್ರೀತಿಯ ಈ ಸಮ್ಮೇಳನಕ್ಕೆ ಕನ್ನಡಪ್ರಿಯರೆಲ್ಲರಿಗೂ ಸ್ವಾಗತ.

ಇಂದಿರಾನಗರದ 'ಭಾರತೀಯ ಕರ್ನಾಟಕ ಸಂಘ', ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ (ಈಕವಿ) ಸಹಯೋಗದೊಂದಿಗೆ ಏಪ್ರಿಲ್‌ 11ರ ಭಾನುವಾರ 'ಕನ್ನಡ ಸಮ್ಮೇಳನ'ವನ್ನು ಹಮ್ಮಿಕೊಂಡಿದೆ.

ಏ.11ರ ಬೆಳಿಗ್ಗೆ 10 ಗಂಟೆಗೆ ಇಂದಿರಾನಗರದ ಎನ್‌ ಡಿ ಕೆ ಕಲ್ಯಾಣ ಮಂಟಪದಲ್ಲಿ ಕರ್ನಾಟಕದಲ್ಲೆ ಪ್ರಪ್ರಥಮ ಎನ್ನಬಹುದಾದ 'ಕನ್ನಡ ಸಮ್ಮೇಳನ' ಪ್ರಾರಂಭವಾಗಲಿದೆ. ಆಂಗ್ಲಭಾಷೆ ಇಲ್ಲದೆ ಯಾವ ಕ್ಷೇತ್ರದಲ್ಲೂ ಮುಂದುವರೆಯಲು ಸಾಧ್ಯವಿಲ್ಲ ಎನ್ನುವ ಮನೋಭಾವದ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವುದು ಈ ಸಮ್ಮೇಳನದ ಉದ್ದೇಶ. ಸಚಿವೆ ರಾಣಿ ಸತೀಶ್‌ ಅಧ್ಯಕ್ಷತೆಯ ಸಮ್ಮೇಳನವನ್ನು ಪ್ರೊ. ಯು.ಆರ್‌.ರಾವ್‌ ಉದ್ಘಾಟಿಸುವರು.

ಬೇರೆ ಬೇರೆ ಕ್ಷೇತ್ರದಲ್ಲಿ ಕನ್ನಡವನ್ನು ಹೇಗೆ ಅಳವಡಿಸಬಹುದು ಎಂಬ ಚರ್ಚಾಗೋಷ್ಠಿಯಲ್ಲಿ , ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನದಲ್ಲಿದ್ದು ಕರ್ನಾಟಕದಾದ್ಯಂತ ಜನಪ್ರಿಯರಾಗಿರುವ ಸುಮಾರು 25 ಜನರು ಒಂದೇ ವೇದಿಕೆಯಲ್ಲಿ ಕುಳಿತು ಕನ್ನಡ ಭಾಷೆಯ ಅಳಿವು ಉಳಿವಿನ ಬಗ್ಗೆ ಚರ್ಚೆ ಮಾಡುವರು. ಈ ಸಮ್ಮೇಳನದಲ್ಲಿ 3 ಚರ್ಚಾಗೋಷ್ಠಿಗಳು ನಡೆಯುತ್ತವೆ.

ಗೋಷ್ಠಿ-1 : 'ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬಳಕೆ'

ಈ ಗೋಷ್ಠಿಯಲ್ಲಿ- ಡಾ.ಎಲ್‌.ಎಮ್‌ ಪಾಟ್ನಾಯಕ್‌, ಶ್ರೀಮತಿ ಡಾ. ಸುಧಾ ರಾಜು, ಡಾ.ಘರೆ, ರಾಜೀವ್‌ ಚಾವ್ಲ, ಡಾ.ಜಿ ಎಲ್‌ ಗಂಗಾಪ್ರಸಾದ್‌, ಡಾ.ಜಿ ರಮೇಶ್‌, ಡಾ.ಪಿ ನಾರಾಯಣ್‌ ರೆಡ್ಡಿ ಮತ್ತು ಶ್ರೀನಾಥ್‌ ಶಾಸ್ತ್ರಿ ವಿಷಯ ಮಂಡಿಸಿ ಚರ್ಚೆಯಲ್ಲಿ ಭಾಗವಹಿಸುವರು.

ಗೋಷ್ಠಿ-2 : 'ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬಳಕೆ'

ಎರಡನೇ ಗೋಷ್ಠಿಯ ಚರ್ಚೆಯಲ್ಲಿ ಬಿ.ಜಿ ರುದ್ರಪ್ಪ , ಸಿ.ಜಿ. ಕೃಷ್ಣದಾಸ್‌ ನಾಯರ್‌, ಡಾ.ದೇಶಪಾಂಡೆ, ಡಾ.ಶ್ರೀಧರನ್‌, ಡಾ.ಶರಚ್ಚಂದ್ರ, ಡಾ.ಎಸ್‌.ಕೆ.ಸಿನ್ಹ , ಡಾ.ಕೆ.ಟಿ. ಮಾಧವನ್‌ ಹಾಗೂ ಹಾಲ್ದೊಡ್ಡೇರಿ ಸುಧೀಂದ್ರ ಭಾಗವಹಿಸುವರು.

ಗೋಷ್ಠಿ-3 : 'ಸಾರ್ವಜನಿಕ ಪ್ರದೇಶಗಳಲ್ಲಿ ಕನ್ನಡದ ಬಳಕೆ'

ಗೋಷ್ಠಿಯಲ್ಲಿ- ಚಿರಂಜೀವಿ ಸಿಂಗ್‌, ಸುಬೀರ್‌ ಹರಿಸಿಂಗ್‌, ಡಾ.ಈ.ವಿ. ರಮಣ ರೆಡ್ಡಿ, ಆರ್‌.ಸಿ. ಪುರೋಹಿತ್‌, ಅರ್ಜುನ್‌ ದೇವ್‌, ಡಾ.ಪಿ. ಗೋಸ್ವಾಮಿ, ಜಿ. ಪರಮೇಶ್ವರಪ್ಪ, ಮತ್ತು ಟಿ.ಆರ್‌. ಕೃಷ್ಣೇಗೌಡ ಭಾಗವಹಿಸುವರು.

ಈ ಚರ್ಚಾಗೋಷ್ಠಿಯ ಮತ್ತೊಂದು ವೈಶಿಷ್ಟ್ಯವೆಂದರೆ ಈ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿರುವ ಅನೇಕ ಗಣ್ಯವ್ಯಕ್ತಿಗಳ ಮಾತೃಭಾಷೆ ಕನ್ನಡ ಅಲ್ಲ. ಇವರೆಲ್ಲರೂ ಬಹಳ ವರ್ಷಗಳಿಂದ ಕರ್ನಾಟಕದಲ್ಲೆ ನೆಲಸಿ ಕನ್ನಡಿಗರಾಗಿರುವಂಥವರು.

ಪ್ರತೀ ಚರ್ಚಾಗೋಷ್ಠಿಗೂ 1 ಗಂಟೆಯ ಕಾಲಾವಕಾಶ ಇರುತ್ತದೆ. ಗೋಷ್ಠಿಗಳ ನಡುವೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕನ್ನಡ ಸಮ್ಮೇಳನದ ಕೊನೆಯಲ್ಲಿ ಬೆಂಗಳೂರಿನ ಸುಪ್ರಸಿದ್ಧ ಪ್ರಭಾತ್‌ ಕಲಾವಿದರು ನಡೆಸಿಕೊಡುವ 'ಕರ್ನಾಟಕದ ವೈಭವ' ಎಂಬ ನೃತ್ಯರೂಪಕ ಇದೆ.

ಕಾರ್ಯಕ್ರಮಕ್ಕೆ ಭಾಗವಹಿಸಲು 100 ರೂಪಾಯಿಗಳ ಪ್ರವೇಶ ಶುಲ್ಕವಿದೆ. ಟಿಕೆಟ್‌ ದೊರೆಯುವ ಸ್ಥಳ : ಅಂಕಿತ ಪುಸ್ತಕ, ಗಾಂಧಿಬಜಾರ್‌. ಫೋನ್‌- (080) 26617100.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ಕೆ.ಟಿ. ಸತೀಶ್‌- [email protected]. ದೂರವಾಣಿ ಸಂಖ್ಯೆ- 9886128500.

English summary
All those who are residing in Karnataka are Kannadigas! A conference in Indiranagar Club, strong hold of Tamilians and Malayalees in Karnataka Capital Bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X