ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮಲ್ಲಿಗೆ’ ಮಳೆಯ ನಡುವೆ ಕಣ್ಣಿಗೆ‘ಹಬ್ಬ’ವಾದ ‘ಬೆಂಗಳೂರು ಕರಗ’

By Staff
|
Google Oneindia Kannada News

‘ಮಲ್ಲಿಗೆ’ ಮಳೆಯ ನಡುವೆ ಕಣ್ಣಿಗೆ‘ಹಬ್ಬ’ವಾದ ‘ಬೆಂಗಳೂರು ಕರಗ’
ಮುಖ್ಯಮಂತ್ರಿ ಕೃಷ್ಣ ಹಾಗೂ ಅವರ ಚುನಾವಣಾ ಎದುರಾಳಿ ಅನಂತ್‌ನಾಗ್‌ರಿಂದ ಕರಗಕ್ಕೆ ಪೂಜೆ

ಬೆಂಗಳೂರು : ರಾಜ್ಯದ ಜನಪ್ರಿಯ ಸಾಂಪ್ರದಾಯಿಕ ಉತ್ಸವಗಳಲ್ಲೊಂದಾದ ಬೆಂಗಳೂರು ಮಹಾನಗರದ ಊರ ಹಬ್ಬ ‘ಕರಗ’ ಸೋಮವಾರ (ಏ.5) ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.

ಹಲಸೂರುಪೇಟೆಯ ಧರ್ಮರಾಯ ಸ್ವಾಮಿಯ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಊರು ಪ್ರದಕ್ಷಿಣೆಗೆ ಹೊರಟ ಕರಗವನ್ನು ಸಾವಿರಾರು ಜನರು ಸಂಭ್ರಮದಿಂದ ಸ್ವಾಗತಿಸಿದರು. ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಜ್ಯದ ಇತರ ಪ್ರದೇಶಗಳಿಂದಲೂ ಕರಗ ವೀಕ್ಷಣೆಗೆ ಅನೇಕ ಭಕ್ತರು ಆಗಮಿಸಿದ್ದರು. ಕರಗಕ್ಕೆ ಪೂಜೆ ಸಲ್ಲಿಸಿದ ಪ್ರಮುಖರಲ್ಲಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ , ನಟ ಅನಂತನಾಗ್‌ ಹಾಗೂ ಮೇಯರ್‌ ರಮೇಶ್‌ ಸೇರಿದ್ದಾರೆ.

ಶಕ್ತಿದೇವತೆಯ ಸಂಕೇತವಾದ ಹೂವಿನ ಕರಗವನ್ನು ವೀರಕುಮಾರ ಅಭಿಮನ್ಯು ಈ ಬಾರಿಯೂ ಹೊತ್ತಿದ್ದರು. ಆಯುಧಧಾರಿಗಳಾದ 1500 ವೀರಕುಮಾರರ ಬೆಂಗಾವಲಿನಲ್ಲಿ ಕರಗ ಸಂಚರಿಸಿತು. ಹಲಸೂರುಪೇಟೆ, ತಿಗಳರಪೇಟೆ, ಗೊಲ್ಲರಪೇಟೆ, ನಗರ್ತಪೇಟೆ, ಕುಂಬಾರಪೇಟೆ, ದೇವಾಂಗಪೇಟೆ, ಅಕ್ಕಿಪೇಟೆ, ಅವೆನ್ಯೂ ರಸ್ತೆಗಳಲ್ಲಿ ಸಂಚರಿಸಿದ ಕರಗ- ಮಸ್ತಾನ್‌ ಪೇಟೆ ದರ್ಗಾದ ಪ್ರದಕ್ಷಿಣೆಯ ನಂತರ ಧರ್ಮರಾಯ ಸ್ವಾಮಿ ದೇವಸ್ಥಾನವನ್ನು ಸೇರಿತು.

ಮಲ್ಲಿಗೆ ದಂಡೆಗಳಿಂದ ಅಲಂಕೃತಗೊಂಡಿದ್ದ ಕರಗ ಮನೋಹರವಾಗಿತ್ತು . ಕರಗ ಸಂಚರಿಸುವ ಹಾದಿಯುದ್ದಕ್ಕೂ ಭಕ್ತರು ಮಲ್ಲಿಗೆ ಚೆಲ್ಲುವ ದೃಶ್ಯಗಳು ಸಾಮಾನ್ಯವಾಗಿದ್ದವು. ಹಾದಿಮಧ್ಯದಲ್ಲಿ ಕೆಲವೆಡೆ ಪಾನಕ ಕೋಸಂಬರಿ ಉಪಚಾರವೂ ಇತ್ತು .

ಕರಗದ ರಾತ್ರಿ ಬೆಂಗಳೂರಿನಲ್ಲಿ ಮಲ್ಲಿಗೆ ಮೊಗ್ಗು ಚೆಲ್ಲಿದಂತೆ ತುಂತುರು ್ಫಹನಿ ಬಿದ್ದುದು ಇನ್ನೊಂದು ವಿಶೇಷ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X