ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುನ್ಮಾನ ಮಾಧ್ಯಮಗಳಲ್ಲಿ ರಾಜಕೀಯ ಪಕ್ಷ ಗಳ ಅಸಭ್ಯ ಜಾಹೀರಾತಿಗೆ ನಿಷೇಧ

By Staff
|
Google Oneindia Kannada News

ವಿದ್ಯುನ್ಮಾನ ಮಾಧ್ಯಮಗಳಲ್ಲಿ ರಾಜಕೀಯ ಪಕ್ಷ ಗಳ ಅಸಭ್ಯ ಜಾಹೀರಾತಿಗೆ ನಿಷೇಧ
ಟಿವಿ ಮತ್ತು ಮುದ್ರಣ ಮಾಧ್ಯಮವನ್ನು ಬಳಸಿ ‘ವೈಯುಕ್ತಿಕ ದಾಳಿ’ನಡೆಸುವುದನ್ನು ನಿಷೇಧಿಸಲಿ: ಕಾಂಗೈ

ನವದೆಹಲಿ : ಟಿವಿ ಮತ್ತು ಕೇಬಲ್‌ಗಳಲ್ಲಿ ಕಾನೂನು ನಿಯಮ ಉಲ್ಲಂಘಿಸುವ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡುವ ಎಲ್ಲ ಚುನಾವಣಾ ಜಾಹೀರಾತುಗಳ ಪ್ರಸಾರವನ್ನು ಸುಪ್ರಿಂಕೋರ್ಟ್‌ ನಿಷೇಧಿಸಿದೆ.

ಏಪ್ರಿಲ್‌ 2ರ ಶುಕ್ರವಾರದಿಂದಲೇ ಸುಪ್ರಿಂಕೋರ್ಟ್‌ನ ಆದೇಶ ಜಾರಿಗೆ ಬಂದಿದೆ. ಚುನಾವಣಾ ಜಾಹಿರಾತುಗಳಿಗೆ ವೀಕ್ಷಕರ ನೈತಿಕತೆ, ಸಭ್ಯತೆ ಹಾಗೂ ಧಾರ್ಮಿಕ ಸೂಕ್ಷ್ಮತೆಯ ಪರಿಗಣನೆ ಇರುವುದಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ. ಟೀವಿ ಜಾಹಿರಾತುಗಳ ವೆಚ್ಚವು ಅಭ್ಯರ್ಥಿಯ ಚುನಾವಣಾ ವೆಚ್ಚದ ವ್ಯಾಪ್ತಿಗೆ ಬರುತ್ತದೆಯೇ ಎನ್ನುವುದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು ಎಂದೂ ನ್ಯಾಯಪೀಠ ಹೇಳಿದೆ.

ಈ ನಡುವೆ ಕಾಂಗ್ರೆಸ್‌ ಪಕ್ಷವು ಟಿವಿ ಮತ್ತು ಮುದ್ರಣ ಮಾಧ್ಯಮವನ್ನು ಬಳಸಿ ‘ವೈಯುಕ್ತಿಕ ದಾಳಿ’ ಮಾಡುವುದನ್ನು ನಿಷೇಧಿಸಬೇಕು ಎಂದು ಚುನಾವಣಾ ಆಯೋಗವನ್ನು ಕೇಳಿಕೊಂಡಿದೆ. ಸುಪ್ರೀಂಕೋರ್ಟ್‌ ನಿರ್ಣಯವನ್ನು ಸ್ವಾಗತಿಸುತ್ತೆವೆ. ನಾವು ಯಾವತ್ತೂ ಆರೋಗ್ಯಕರ ಚರ್ಚೆಯನ್ನು ಬಯಸುತ್ತೇವೆ ಎಂದು ಕಾಂಗೈ ವಕ್ತಾರ ಕಪಿಲ್‌ ಸಿಬಾಲ್‌ ಹೇಳಿದ್ದಾರೆ.

ಇಂತಹ ಜಾಹಿರಾತು ಪ್ರಕಟಿಸಿದಾಗಲೇ ನಾವು ವಿರೋಧಿಸಿದ್ದೆವು. ಆಂಧ್ರ ಪ್ರದೇಶ ಹೈಕೋರ್ಟ್‌ ತೀರ್ಪು ಬಂದಾಗಲೂ ಅವರು ಮೌನವಾಗಿದ್ದರು. ಬಿಜೆಪಿ ಆಡಳಿತದ ದುರಾದೃಷ್ಟ ಎಂದರೆ ಇದಕ್ಕಾಗಿ ಸಾಲಿಸಿಟರ್‌ ಜನರಲ್‌ ಸುಪ್ರಿಮ್‌ ಕೋರ್ಟ್‌ ಕಟಕಟೆಯಲ್ಲಿ ನಿಲ್ಲಬೇಕಾಯಿತು ಎಂದು ಕಪಿಲ್‌ ಸಿಬಾಲ್‌ ಹೇಳಿದರು.

(ಪಿಟಿಐ)

ಮುಖಪುಟ / ಕುರುಕ್ಷೇತ್ರ-2004

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X