ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆ ಬಂತು ಮಳೆ.. ಮೊದಲ ಅಧ್ಯಾಯದಿ ಖುಷಿಖೇದದ ಚಿತ್ರಗಳು

By Staff
|
Google Oneindia Kannada News

ಮಳೆ ಬಂತು ಮಳೆ.. ಮೊದಲ ಅಧ್ಯಾಯದಿ ಖುಷಿಖೇದದ ಚಿತ್ರಗಳು
ಹಲವೆಡೆ ಧಾರಾಕಾರವಾಗಿ ಬಿದ್ದ ಮಳೆಯಿಂದ ಕೆಲವೆಡೆ ನಷ್ಟವುಂಟಾಗಿದೆ

  • ದಟ್ಸ್‌ ಕನ್ನಡ ಡೆಸ್ಕ್‌
ಬೆಂಗಳೂರು : ಬಿಸಿಲಿನ ಬೇಗೆಗೆ ತತ್ತರಿಸುತ್ತಿದ್ದ ಬರಗಾಲದ ಬೀಡು ಕರ್ನಾಟಕದಲ್ಲಿ ತಂಗಾಳಿ ಬೀಸಲಾರಂಭಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಎರಡು ದಿನಗಳಿಂದ ಸಾಧಾರಣದಿಂದ ಭಾರೀ ಮಳೆಯಾಗುತ್ತಿದೆ.

ಬೆಂಗಳೂರಿನ ಕೆಲವೆಡೆ ಮರ ಮುರಿದು ಬಿದ್ದು ಕೆಲವೆಡೆ ವಾಹನಗಳು ಜಖಂಗೊಂಡಂತಹ ಸಣ್ಣ ಘಟನೆಗಳು ನಡೆದಿದ್ದರೆ, ಬೀದರ್‌ನಲ್ಲಿ ಇಬ್ಬರು ಅಪಘಾತಕ್ಕೆ ಬಲಿಯಾಗಿದ್ದಾರೆ. ಚಿತ್ರದುರ್ಗದ ನಾಯಕನ ಹಟ್ಟಿಯಲ್ಲಿ ಸಿಡಿಲು ಬಡಿದು ಒಬ್ಬರು ಮೃತಪಟ್ಟಿದ್ದಾರೆ.

ರಾಜ್ಯದ ವಿವಿದೆಡೆ ಮಳೆ ಬಿದ್ದು ಜನರಲ್ಲಿ ಸಂತಸ ವ್ಯಕ್ತವಾಗಿದ್ದರೂ, ಕೆಲವೆಡೆ ಹಾನಿಯಿಂದಾಗಿ ನಷ್ಟ ಅನುಭವಿಸಿದ್ದಾರೆ. ಕೋಲಾರದಲ್ಲಿ ಬಿದ್ದ ಆಲಿಕಲ್ಲಿನ ಮಳೆಯಿಂದಾಗಿ ಅಪಾರ ಬೆಳೆ ನಷ್ಟವಾಗಿದೆ. ಮೈಸೂರಿನಲ್ಲಿ ಗಾಳಿಮಳೆಗೆ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ರಾಯಚೂರು ಜಿಲ್ಲೆಯ ಹಲವೆಡೆ ಮಳೆಯಿಂದ ಮರಗಳು ಬಿದ್ದಿದ್ದು ವಿದ್ಯುತ್‌ ಸಂಪರ್ಕ ಕಡಿತವಾಗಿದೆ. ಹಲವು ಹಳ್ಳಿಗಳು ಕತ್ತಲೆಯ ನಾಡಾಗಿ ಬಿಟ್ಟಿವೆ. ಅಲ್ಲದೆ ಕೃಷಿಯಲ್ಲೂ ಹಾನಿ ಸಂಭವಿಸಿದೆ ಎಂದು ರೈತರು ತಿಳಿಸಿದ್ದಾರೆ. ಕೊಡಗಿನಲ್ಲಿ ಕಳೆದ ಒಂದು ವಾರದಿಂದ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಮಡಿಕೇರಿಯು ಪೂರ್ಣವಾಗಿ ಮಳೆಯಿಂದ ಆವೃತವಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X