ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲ್ಕತ್ತಾದ ಕಸದ ಬುಟ್ಟಿಯಲ್ಲಿ ರವೀಂದ್ರರ ನೊಬೆಲ್‌ ಪದಕ ಪತ್ತೆ !

By Staff
|
Google Oneindia Kannada News

ಕೊಲ್ಕತ್ತಾದ ಕಸದ ಬುಟ್ಟಿಯಲ್ಲಿ ರವೀಂದ್ರರ ನೊಬೆಲ್‌ ಪದಕ ಪತ್ತೆ !
ಬೀದಿಯಲ್ಲಿ ಗುಜುರಿ ಹೆಕ್ಕುವ ಸೇನ್‌ಗೆ ದೊರೆತ ನೊಬೆಲ್‌

ಶಾಂತಿನಿಕೇತನ : ಕಳುವಾಗಿದ್ದ ರವೀಂದ್ರನಾಥ್‌ ಠಾಗೂರರ ನೊಬೆಲ್‌ ಪದಕ ಕೋಲ್ಕತ್ತಾದ ವಿವೇಕಾನಂದ ಪಾರ್ಕ್‌ ಬಳಿಯ ಕಸದ ಡಬ್ಬಿಯಾಂದರಲ್ಲಿ ಪತ್ತೆಯಾಗಿದೆ.

ಮಾ.28 ರಂದು ಇತರ ಅಮೂಲ್ಯ ವಸ್ತುಗಳೊಂದಿಗೆ ರವೀಂದ್ರರ ನೊಬೆಲ್‌ ಪ್ರಶಸ್ತಿ ಪದಕವು ಶಾಂತಿನಿಕೇತನದಿಂದ ನಾಪತ್ತೆಯಾಗ್ತಿತು. ಈ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಕೊಲ್ಕತ್ತಾದ ಗುಜುರಿ ಹೆಕ್ಕುವ ಪೋಲ್ಟ ಸೇನ್‌ ಎಂಬಾತನಿಗೆ ನೊಬೆಲ್‌ ಪದಕ ಕಸದ ಬುಟ್ಟಿಯಲ್ಲಿ ದೊರೆತಿದೆ. ಆತ ಅದನ್ನು ವಿವೇಕಾನಂದ ಪಾರ್ಕ್‌ ಪೊಲೀಸರಿಗೆ ತಂದು ಒಪ್ಪಿಸಿದ್ದಾನೆ.

ಪದಕ ಪತ್ತೆಯಾದದ್ದು ಹೀಗೆ...

ಎಂದಿನಂತೆ ಅಂದೂ ತನ್ನ ಗುಜುರಿ ಹೆಕ್ಕುವ ಕಾಯಕದಲ್ಲಿ ತೊಡಗಿದ್ದ ಪೋಲ್ಟ್‌ ಸೇನ್‌ಗೆ ಇಂದು ತನಗೆ ನೊಬೆಲ್‌ ಸಿಗಲಿದೆಯೆಂದು ತಿಳಿದಿರಲಿಲ್ಲ. ಕಸದ ಬುಟ್ಟಿಯಲ್ಲಿ ತನಗೆ ಸಿಕ್ಕಿದ್ದು ನೊಬೆಲ್‌ ಪದಕವೆಂದೂ ಆತನಿಗೆ ಅರಿವಿರಲಿಲ್ಲ. ಆದರೂ ತಳ್ಳುಗಾಡಿಯಲ್ಲಿ ತಿಂಡಿ ಮಾರುವ ಎನ್‌.ದುಬೆಗಿಂತ ಕೊಂಚ ಬುದ್ದಿವಂತನಾದ ಸೇನ್‌ಗೆ ತನಗೆ ಸಿಕ್ಕಿದ್ದು ಒಂದು ‘ಅಮೂಲ್ಯ ವಸ್ತು ’ ಎಂದು ತಿಳಿಯಿತು. ತಕ್ಷಣ ಪಕ್ಕದಲ್ಲಿಯೇ ಇದ್ದ ಎನ್‌.ದುಬೆಗೆ ತೋರಿಸಿದ. ಆತ ಸ್ಥಳೀಯ ಪೊಲೀಸ್‌ ಸ್ಟೇಷನ್‌ ಇನ್‌ಸ್ಪೆಕ್ಟರ್‌ಗೆ ಫೋನಾಯಿಸಿ ವಿಷಯ ತಿಳಿಸಿದ.

ಪದಕವನ್ನು ಅಲ್ಲಿ ಎಸೆದವನೂ ಅವನೆ...

ಸಂಜೆ ಸುಮಾರು ಆರು ಗಂಟೆಗೆ ದುಬೆ ಗಾಡಿಗೆ ಬಂದ ಮೂರು-ನಾಲ್ಕು ಯುವಕರ ಗುಂಪೊಂದು ತಿಂಡಿ ತಿಂದು ಚಿಲ್ಲರೆ ನೀಡಿತ್ತು. ಹಣವನ್ನು ಸೂಕ್ಷ್ಮವಾಗಿ ಗಮನಿಸದೆ ಅವನ ಹಣದ ತಟ್ಟೆಗೆ ಚಿಲ್ಲರೆ ಹಾಕಿದ್ದ ದುಬೆ. ರಾತ್ರಿ ಲೆಕ್ಕಮಾಡುವಾಗಲೇ ಅರಿವಾದದ್ದು ಇದು ಹಣವಲ್ಲ, ಏನೋ ಪದಕ ಎಂದು. ದುಬೆ ಪಕ್ಕದ ಕಸದ ಬುಟ್ಟಿಗೆ ಆ ಪದಕವನ್ನು ಎಸೆದು ಬಿಟ್ಟ. ಮರುದಿನ ಗುಜುರಿ ಹೆಕ್ಕುವಾಗ ಸೇನ್‌ಗೆ ಅದು ಸಿಕ್ಕಿತು ಎಂದು ಪೊಲೀಸ್‌ ಇನ್‌ಸ್ಪೆಕ್ಟರ್‌ ದತ್ತಾ ಹೇಳಿದ್ದಾರೆ.

ಇದು ಒಂದು ಬೃಹತ್‌ ಅಂತರ್‌ಜಾಲ ಕಳ್ಳರ ಕೆಲಸ ಎಂದು ಪೊಲೀಸರು ಸಂಶಯಿಸಿದ್ದಾರೆ. ದುಬೆ ಆ ಯುವಕರ ಚಹರೆ ಗುರುತುಗಳನ್ನು ಪತ್ತೆ ಹಚ್ಚಬಲ್ಲೆನು ಎಂದಿದ್ದಾನೆ. ದುಬೆ ಮತ್ತು ಸೇನ್‌ಗೆ ಪದಕ ಪತ್ತೆಯಾಗಿರುವುದು ಸಂತಸ ತಂದಿದೆ. ಅವರು ಠಾಗೂರರ ಹೆಸರು ಕೇಳಿದ್ದಾರೆಯೇ ಹೊರತು ಅವರ ಕೃತಿಗಳನ್ನು ಓದಿಲ್ಲ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X