ಮೂರು ದಶಕಗಳ ಅವಧಿಯಲ್ಲಿ ಭಾರತ ನಂ.3 - ಸ್ವರಾಜ್ ಪಾಲ್
ಮೂರು ದಶಕಗಳ ಅವಧಿಯಲ್ಲಿ ಭಾರತ ನಂ.3 - ಸ್ವರಾಜ್ ಪಾಲ್
ಅಮೆರಿಕವನ್ನು ಹಿಂದಿಕ್ಕುವುದು ಭಾರತಕ್ಕೆ ಸಾಧ್ಯವಿಲ್ಲ
ಆರ್ಥಿಕ ಶಕ್ತಿಗಳಾಗಿ ಚೀನಾ ಹಾಗೂ ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿವೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಭಾರತ ಮೂರು ದಶಕಗಳ ಅವಧಿಯಲ್ಲಿ ವಿಶ್ವದ ಪ್ರಬಲ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಲಿದೆ. ಈ ಆರ್ಥಿಕ ಪೋಟಿಯಲ್ಲಿ ಜಪಾನ್ ಭಾರತಕ್ಕಿಂಥ ಹಿಂದುಳಿಯಲಿದೆ. ಆದರೆ ಮೊದಲೆರಡು ಸ್ಥಾನಗಳು ಅಮೆರಿಕಾ ಹಾಗೂ ಚೀನಾದ ಪಾಲು ಎಂದು ಸ್ವರಾಜ್ ಪಾಲ್ ಹೇಳಿದರು.
ಉತ್ಪಾದಕತೆ ಹಾಗೂ ಜಾಗತೀಕರಣ ಎನ್ನುವ ವಿಷಯದ ಕುರಿತು ಮಾತನಾಡುತ್ತಿದ್ದ ಸ್ವರಾಜ್ ಪಾಲ್, ಮೂವತ್ತು ವರ್ಷಗಳಲ್ಲಿ ಭಾರತ ಪ್ರಬಲ ಶಕ್ತಿಯಾಗಿ ರೂಪುಗೊಂಡರೂ ಅಮೆರಿಕಾವನ್ನು ಹಿಂದಿಕ್ಕುವುದು ಸಾಧ್ಯವಿಲ್ಲ ಎಂದರು. ಅಗಾಧ ಜನಸಂಖ್ಯಾ ಸಂಪನ್ಮೂಲ ಹೊಂದಿದ್ದರೂ, ಪೂರ್ವದ ರಾಷ್ಟ್ರಗಳು ಪಶ್ಚಿಮಕ್ಕಿಂಥ ಹೆಚ್ಚಿನ ಶ್ರೀಮಂತಿಕೆ ಹೊಂದಲಿವೆ ಎಂದೂ ಸ್ವರಾಜ್ ಪಾಲ್ ಅಭಿಪ್ರಾಯಪಟ್ಟರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications